ಜನಸಾಮಾನ್ಯರ ದನಿಯಾಗುವೆ: ಪ್ರಕಾಶ
ಕ.ಪ್ರ ವಾರ್ತೆ, ಕಡೂರು, ಏ.12
ಜಾತಿ ಬಲದಿಂದ ಬೆಳೆಯದೆ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತಿರುವ ನನ್ನನ್ನು ಜನರು ಬೆಂಬಲಿಸಿ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಮನವಿ ಮಾಡಿದರು.
ಅವರು ಪಟ್ಟಣದ ಬನಶಂಕರಿ ಸಮುದಾಯಭವನದಲ್ಲಿ ಕಡೂರು ಪಟ್ಟಣದ ಕೆಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೈಗೊಂಡಿರುವ ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ರಾಜ್ಯದ 6 ಕೋಟಿ ಜನರ ಮನೆ ಮನಗಳಲ್ಲಿವೆ. ಜಿಪಂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ 13 ವರ್ಷದಿಂದ ಕಡೂರು ಕ್ಷೇತ್ರದ ಎಲ್ಲಾ ವರ್ಗಗಳ ಜನಸಾಮಾನ್ಯರ ಧ್ವನಿಯಾಗಿ ಸೇವೆ ಮಾಡುತ್ತಿದ್ದು ಶಾಸಕನಾದರೂ ಕೂಡ ನಿಮ್ಮ ಜೊತೆಯಲ್ಲಿಯೇ ಇರುತ್ತೇನೆ.
ಮತದಾರರು ಪುರಸಭಾ ಚುನಾವಣೆಯಲ್ಲಿ ಕಡೂರು ಪಟ್ಟಣದ 17 ವಾರ್ಡ್‌ಗಳಲ್ಲಿ ಕೆಜೆಪಿಗೆ ಹೆಚ್ಚು ಮತ ನೀಡಿದ್ದಾರೆ. ಬೇರೆಯವರಂತೆ ಮಂತ್ರಿಯಾಗುತ್ತೇನೆಂದು ಮತ ಕೇಳುತ್ತಿಲ್ಲ. ಇನ್ನು ಎರಡು ಬಾರಿ ಟಿಕೆಟ್ ನೀಡಿದರೂ ಕೂಡ ಬೆಂಗಳೂರಿನ ರಾಜಕಾರಣ ಮಾಡುತ್ತಿಲ್ಲ. ಜನರ ಸೇವೆ ಮಾಡುವ ಉದ್ದೇಶದಿಂದ ಕಣಕ್ಕಿಳಿದಿದ್ದೇನೆ. ನನ್ನ ಉಸಿರು ಇರುವವರೆಗೆ ಹೋರಾಟ ಮಾಡುತ್ತೇನೆ ಪಲಾಯನವಾದದ ರಾಜಕಾರಣ ಮಾಡುವುದಿಲ್ಲ ಎಂದರು.
ಗೆಲುವಿಗೆ ಶ್ರಮಿಸಿ: ಜಿಲ್ಲಾ ಕೆಜೆಪಿ ಕಾರ್ಯದರ್ಶಿ ಸಿ.ಎಚ್. ಲೋಕೇಶ್ ಮಾತನಾಡಿ, ಯಡಿಯೂರಪ್ಪ ನಾಡಿನ ರೈತರ ಪರವಾಗಿ ಗುಡುಗಿದ್ದರಿಂದ ಬಿಜೆಪಿ ಸರ್ಕಾರ ರು. 4.5 ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ಯಡಿಯೂರಪ್ಪ ಅವರಿಂದ ರು. 600 ಕೋಟಿ ಅಭಿವೃದ್ಧಿ ಕಾಮಗಾರಿ ಪಡೆದು ನೂರಾರು ಕೋಟಿ ಸ್ವಾರ್ಥಕ್ಕೆ ಬಳಸಿಕೊಂಡ ಗೋಮುಖ ವ್ಯಾಘ್ರ ಸಿ.ಟಿ. ರವಿ ಇಂದು ಯಡಿಯೂರಪ್ಪ ಅವರನ್ನು ಟೀಕಿಸುತ್ತಿದ್ದಾರೆ.
ಯಡಿಯೂರಪ್ಪ ಬಿಜೆಪಿ ತೊರೆದ ಮೇಲೆ ಕಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹುಡುಕುವುದೇ ಕಷ್ಟಕರವಾಗಿದೆ. ಕೆಜೆಪಿಯಿಂದ ಬೆಳ್ಳಿ ಪ್ರಕಾಶ್ ಕಣಕ್ಕಿಳಿದಿದ್ದು ಎಲ್ಲರೂ ಸೇರಿ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಕೆಜೆಪಿ ರೈತ ವಿಭಾಗದ ರಾಜ್ಯ ಪದಾಧಿಕಾರಿ ವಿಜಟ್ ವಿಕ್ರಮ್ ಮಾತನಾಡಿ, ಯಡಿಯೂರಪ್ಪನವರ ಸಾಧನೆಗಳಿಂದ ಕೆಜೆಪಿ ಬೃಹದಾಕಾರದ ಪಕ್ಷವಾಗಿ ಬೆಳೆದಿದೆ.
ೆಈ ನಿಟ್ಟಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷ ಸಮರ್ಥ ಅಭ್ಯರ್ಥಿಯಾದ ಬೆಳ್ಳಿಪ್ರಕಾಶ್ ಅವರನ್ನು ಕಣಕ್ಕಿಳಿಸಿದ್ದು ಪ್ರಕಾಶ್ ಗೆಲುವು ಖಚಿತವಾಗಿದೆ. ಕಾರ್ಯಕರ್ತರು ಕೆಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದರು.
ನೊಣಬ ನಮ್ಮ ಜೊತೆ: ಕೆಜೆಪಿ ತಾಲೂಕು ಅಧ್ಯಕ್ಷ ಎಸ್.ವಿ. ಉಮಾಪತಿ ಮಾತನಾಡಿ, ಕಾಮನಕೆರೆ ಶಶಿಧರ್ ಪಕ್ಷದಿಂದ ಪಕ್ಷಕ್ಕೆ ನೆಗೆಯತ್ತಾ ನೊಣಬ ಸಮಾಜ ತನ್ನ ಜೊತೆಯಲ್ಲಿ ಇದೆ ಎಂಬ ಭ್ರಮೆಯಲ್ಲಿದ್ದಾರೆ. ನೊಣಬ ಸಮಾಜ ಬಿಜೆಪಿಯಿಂದ ಕೆಜೆಪಿಯಲ್ಲಿ ಉಳಿದು ಕೆಜೆಪಿ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎಂದರು.
ಸಭೆಯಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರನ್ನು ಕೆಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ್ಲ ಕೆಜೆಪಿ ಮುಖಂಡರಾದ ಹರೀಶ್, ರವಿ, ನಾಗರತ್ನ, ಪುಷ್ಪಲತಾ ಸೋಮೇಶ್, ಅರುಣ್, ಕೆ.ಬಿ. ಸೋಮೇಶ್, ಶಂಕರಮೂರ್ತಿ, ಚಂದ್ರು, ಈಶ್ವರಪ್ಪ, ರೇವಣ್ಣಯ್ಯ, ಯಾಸೀನ್, ಜಾಫರ್‌ಸಾಬ್, ಯಾಸೀನ್ ಸೈಯ್ಯದ್, ಶ್ರೀನಿವಾಸ್, ಗೋವಿಂದಪ್ಪ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

