ನೀತಿ ಸಂಹಿತೆ ಜಾರಿಗೆ ಸೂಚನೆ
ಕ.ಪ್ರ ವಾರ್ತೆ, ಮೂಡಿಗೆರೆ, ಏ.12
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ಚುವಾವಣಾ ಆಯೋಗದಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ತಂಡಗಳಿಗೆ ಮಾಹಿತಿಗಳನ್ನು ನೀಡಲು ಐಆರ್‌ಎಸ್ ಪವನ್‌ಕುಮಾರ್ ಮತ್ತು ಜಿಲಾಧಿಕಾರಿ ಯಶವಂತ್ ನೇತೃತ್ವದಲ್ಲಿ ಸಭೆ ನಡೆಯಿತು.
ಈ ವೇಳೆ ಐಆರ್‌ಎಸ್ ಪವನ್‌ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವವರು ಹೊಸ ಖಾತೆಯನ್ನು ತೆರೆದು ಚುನಾವಣಾ ವೆಚ್ಚ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ವಿವಿಧ ಮಟ್ಟದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ತಂಡಗಳು ವಿಡಿಯೋ ಗ್ರಾಫರ್‌ಗಳನ್ನು ವ್ಯವಸ್ಥೆ ಬಳಸಿಕೊಂಡು ದಾಖಲೆಯುಕ್ತವಾಗಿ ಕಾರ್ಯನಿರ್ವಹಿಸಬೇಕು.
ಎಂಸಿಸಿ ತಂಡಗಳು ಚುನಾವಣಾ ನೀತಿ ಸಂಹಿತೆ ಪಾಲಿಸುವ ಹಾಗೂ ಉಲ್ಲಂಘನೆಗಳನ್ನು ಪರಿಶೀಲಿಸುವುದರ ಕುರಿತು ಮೇಲಿನ ತಂಡಗಳಿಗೆ ಒದಗಿಸಬೇಕು. ಪ್ರತಿ ಸದಸ್ಯರು ಚುನಾವಣೆ ಸಂಬಂದವಾಗಿ ಆರ್.ಓ ರವರಿಂದ ನೀಡಿರುವ ಐ.ಡಿ ಕಾರ್ಡನ್ನು ಧರಿಸಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಬೀದಿ ನಾಟಕ: ಬಳಿಕ ನಡೆದ ಸಭೆಯಲ್ಲಿ ಜಿಲ್ಲಾ ಉಪ ನಿರ್ಧೇಶಕ ಕಾಂತರಾಜ್ ಮಾತನಾಡಿ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ದಿನಾಂಕ ಮುಗಿದಿದ್ದು, ಈ ಹಿಂದೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಪಟ್ಟಣದಲ್ಲಿ ಬೀದಿ ನಾಟಕ, ವಾರ್ತಾ ಇಲಾಖೆ ಮತ್ತು ಪ್ರಚಾರ ಇಲಾಖೆಯಿಂದ ಬ್ಯಾನರ್‌ಗಳನ್ನು ಹಾಕಿಸಲಾಗಿದ್ದು, ಶಾಲಾ ಕಾಲೇಜುಗಳಲ್ಲಿಯೂ ಮತದಾನ ಪಟ್ಟಿಗೆ ಸೇರ್ಪಡೆಗೊಳಿಸುವ ಮಾಹಿತಿಯನ್ನು ನೀಡಲಾಗಿದೆ.
ಆದರೆ ಕುದುರೆ ಮುಖದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಶೇಕಡವಾರು ಪ್ರಮಾಣ ಕುಸಿದಿದೆ. ಅಲ್ಲದೆ ನಕ್ಸಲ್ ಪ್ರದೇಶಗಳಲ್ಲಿ ಕಳೆದ ಬಾರಿ ಶೇ.68 ರಷ್ಟು ಮತದಾನವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಮತದಾರನೂ ಮತ ಹಾಕಿಸುವ ಹಾಗೂ ಶಾಂತಿಯನ್ನು ಕಾಪಾಡುವ ಪ್ರಯತ್ನವನ್ನು ಆಯಾ ಕ್ಷೇತ್ರಗಳ ತಂಡಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಮನವಿ ಮಾಡಿದರು.
ಚುನಾವಣಾಧಿಕಾರಿ ಪ್ರಶಾಂತ್, ಸಹ ಚುನಾವಣಾಧಿಕಾರಿ ರುದ್ರಾಪ್ಪಾಜಿರಾವ್ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ತಂಡಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

