ಚಿಕ್ಕಮಗಳೂರು

ರಾಜಕೀಯ ಪಕ್ಷ ಜನ ಸೇವೆಗುರಿ ಹೊಂದಲಿ

Published On :

ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ಉದ್ದೇಶ ಗುದ್ದಾಟಕ್ಕೆ ಸೀಮಿತವಾಗಿರದೆ ಜನ ಸೇವೆಯ ಗುರಿ ಹೊಂದಿ, ಊರು ಅಭಿವೃದ್ಧಿ ಪಡಿಸುವಂತ ಆಲೋಚನೆಗೆ ಮುಂದಾಗಬೇಕು ಎಂದು ಜೆಡಿಯು ಜಿಲ್ಲಾಧ್ಯಕ್ಷ ಕೆ.ಪಿ. ರಾಜ್ ಕುಮಾರ್ ಹೇಳಿದ್ದಾರೆ. ನಗರದ ಬಸವನಹಳ್ಳಿಯಲ್ಲಿ ಶುಕ್ರವಾರದಂದು ಜೆಡಿಯು ಪಕ್ಷದ ಚುನಾವಣಾ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಭಾವ್ಯ ಅಭ್ಯರ್ಥಿ ಟಿ. ಹರೀಶ್ ಮಾತನಾಡಿ, ಚುನಾವಣೆಯಲ್ಲಿ ಅಕ್ರಮಗಳಿಗೆ ಮುಂದಾಗದೆ ಭ್ರಷ್ಟಾಚಾರ ತೊಡೆದು ಹಾಕಿ, ಕರ್ನಾಟಕ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಮತದಾರರ ಬಳಿ ಹೋಗುತ್ತೇವೆ. ಬಡ ಜನರ ಧ್ಯೇಯೊದ್ದೇಶಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿ ಯುವಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜೊತೆ ಮತಯಾಚನೆ ಮಾಡುವುದಾಗಿ ಹೇಳಿದರು. ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ಶಶಿಧರ್, ಮುಖಂಡರಾದ ಯತೀಶ್, ಹೇಮಂತ್, ಸುನೀಲ್ ಹಾಜರಿದ್ದರು.
'ಅಪಪ್ರಚಾರಅಭಿವೃದ್ಧಿ ನಡುವೆ ಹೋರಾಟ'
ಶೃಂಗೇರಿ: ರಾಜ್ಯದಲ್ಲಿ ಕಳೆದ 5 ವರ್ಷ ಆಡಳಿತಾವಧಿಯಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿದ್ದು, ಜನಮನ್ನಣೆ ಗಳಿಸಿದೆ.  ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿಯೂ ಜಿಜೆಪಿಯನ್ನು ಜನರು ಬೆಂಬಲಿಸಲಿದ್ದು, ಈ ಬಾರಿಯ ಚುನಾವಣೆ ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಹೋರಾಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
  ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಆದರೂ ವಿರೋಧ ಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಜಗಾಲು ಹಾಕುತ್ತಿದ್ದರೂ ಅಭಿವೃದ್ಧಿ ನಿಲ್ಲಲಿಲ್ಲ ಎಂದರು.
ಮತದಾರರ ಬೆಂಬಲ: ಕಾರ್ಯಕರ್ತರ ಮತದಾರರ ಬೆಂಬಲ ಪಕ್ಷಕ್ಕಿದೆ. ಅದೇ ಶ್ರೀರಕ್ಷೆಯಾಗಲಿದೆ. ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದೆ. ರು. 2ಕ್ಕೆ ನೀಡುತ್ತಿದ್ದ ಅಕ್ಕಿಯನ್ನು ವಿರೋಧ  ಪಕ್ಷಗಳ ದೂರಿನ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದೆ. ಮೇ 8ರ ನಂತರ ಅದೇ ದರದಲ್ಲಿ ಅಕ್ಕಿ ನೀಡಲಾಗುವುದು. ಎಂದರು.      ವಿಪ್ರ ಸಮ್ಮೇಳನದಲ್ಲಿ ತನ್ನನ್ನು ಗೌರವಯುತವಾಗಿ ಕಂಡಿದ್ದರೆ ಅದನ್ನೇ ಸುಳ್ಳು ಪತ್ರಿಕಾ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬೇಡ ಎಂದರು.  ತಾಲೂಕು ಅಧ್ಯಕ್ಷ ನಯನ, ಮಾವಿನಕಾಡು ರಂಗನಾಥ್, ಶಿವಶಂಕರ್, ಚೇತನ ಹೆಗ್ಡೆ ಮೊದಲಾದವರು  ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.