ಕ್ರಷರ್ ಜೋನ್ ತಡೆಗೆ ಆಗ್ರಹ
ಕ.ಪ್ರ.ವಾರ್ತೆ, ಕಡೂರು, ಏ.13
ಪುಣ್ಯ ಕ್ಷೇತ್ರಗಳಲ್ಲಿ ಕ್ರಷರ್ ಜೋನ್ ಮಾಡಲು ಹೊರಟಿರುವುದನ್ನು ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಡೆಗಟ್ಟಿ ಕ್ರಮ ಕೈಗೊಳ್ಳಬೇಕು ಎಂದು ಕಡೂರು ಸಮೀಪದ ತುರವನಹಳ್ಳಿ ಮತ್ತು ಚೌಡ್ಲಾಪುರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಗ್ರಾಮದ ಮುಖಂಡ ಟಿ.ಆರ್. ರೇಣುಕಯ್ಯ, ಎಚ್.ಎಸ್. ರಾಜೇಶ್, ಡಿ.ಸಿ. ಈಶ್ವರಪ್ಪ, ಸಿ. ರವಿಕುಮಾರ್, ರುದ್ರಪ್ಪ, ಲಕ್ಷ್ಮಮ್ಮ, ಚಿನ್ನಮ್ಮ, ರಂಗಮ್ಮ, ಭೈರೇಶ್ ಸೇರಿದಂತೆ ಹಲವರು ಚಿಕ್ಕಮಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಐತಿಹಾಸಿಕ ಮಠ: ಕಡೂರು ತಾಲೂಕಿನ ಕಸಬಾ ಹೋಬಳಿ ಮಲ್ಲೇಶ್ವರ ಗ್ರಾಪಂಗೆ ಸೇರಿದ ತುರುವನಹಳ್ಳಿ ಮತ್ತು ಚೌಡ್ಲಾಪುರ ಈ ಎರಡೂ ಊರುಗಳಿಗೆ ಹೊಂದಿಕೊಂಡಂತೆ ಶತಶತಮಾನಗಳ ಇತಿಹಾಸವಿರುವ ಪ್ರಸಿದ್ಧ ಗುರು ನಿರ್ವಾಣಸ್ವಾಮಿ ಮಠವಿದೆ. ಇದಕ್ಕೆ ಹೊಂದಿಕೊಂಡಂತೆ ಅಡುಗೆ ಕಲ್ಲು ಮತು ಗುಹಾಂತರ ಗುಹೆಗಳಿವೆ ಗಣಿಗಾರಿಕೆಯಿಂದ ಇವುಗಳಿಗೆ ಹಾನಿಯಾಗಲಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರ ಪಕ್ಕದಲ್ಲಿಯೇ ಕಾಲಭೈರವೇಶ್ವರ ದೇವಾಲಯ ಮತ್ತು ಪುರಾತನ ಪಳೆಯುಳಿಕೆ ಇವೆ. ಕಲ್ಯಾಣಿಗಳು, ಕೆರೆಗಳು ಇದ್ದು ತುರವನಹಳ್ಳಿ ಗ್ರಾಮವು ಮಲ್ಲೇಶ್ವರದ ಈ ಗುಡ್ಡಕ್ಕೆ ಹೊಂದಿಕೊಂಡಂತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಣಿಗಾರಿಕೆಯಿಂದ ನೀರು ಕಡಿಮೆಯಾಗಿ ಗ್ರಾಮದಲ್ಲಿ ತೋಟಗಳು ಒಣಗುತ್ತಿವೆ, ಮನೆಗಳು ಬಿರುಕು ಬಿಟ್ಟಿದ್ದು ಧೂಳಿನಿಂದ ತೆಂಗಿನ ತೋಟದಲ್ಲಿ ಬೆಳೆಗಳು ಬಾರದಾಗಿದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.
ರಕ್ಷಣೆ ಇಲ್ಲ: ಈ ಗ್ರಾಮಗಳಲ್ಲಿ ಅತಿಹೆಚ್ಚು ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ಜನಾಂಗದವರು ವಾಸಿಸುತ್ತಿದ್ದು, ಯಾವುದೇ ರಕ್ಷಣೆಯಿಲ್ಲದೆ ಜೀವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಗಣಿಗಾರಿಕೆಗೆ ಸಂಬಂದಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಜಾಗದಲ್ಲಿ ಕ್ರಷರ್ ಜೋನ್ ಮಾಡಲು ಅನುಮತಿ ನೀಡಬಾರದು.
ಈ ಎರಡೂ ಗ್ರಾಮಗಳ ಜನರ ಮನವಿ ಪುರಸ್ಕರಿಸಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಆಮರಣಾಂತ ಉಪವಾಸ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

