ಚಿಕ್ಕಮಗಳೂರು

'ಮಕ್ಕಳಲ್ಲಿ ಸಾಂಸ್ಕೃತಿಕ ಮನಸ್ಸು ರೂಪಿಸಿ'

Published On :

ಕ.ಪ್ರ ವಾರ್ತೆ, ತರೀಕೆರೆ, ಏ.13
ಮಕ್ಕಳಿಗೆ ಸಾಂಸ್ಕೃತಿಕ ಮನಸ್ಸು ರೂಪಗೊಳಿಸಬೇಕೆಂದು ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ್ ತಿಳಿಸಿದ್ದಾರೆ.
ಅವರು ಶನಿವಾರ, ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಬೆಂಗಳೂರು, ಪ್ರಕೃತಿ ಶ್ರೀ ಕಲಾ ಕುಟೀರ ತರೀಕೆರೆ ವತಿಯಿಂದ ಪಟ್ಟಣದ  ರೋಟರಿ ಸಂಸ್ಥೆ ಆವರಣದಲ್ಲಿ ಎರಡು ದಿನದಿಂದ ಏರ್ಪಾಡಾಗಿದ್ದ  ಬನ್ನಿ ನಮ್ಮ ಹಾಡಿಗೆ ಆನಂದಕಂದ ವಿರಚಿತ ಭಾವಗೀತೆಗಳ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಮನಸ್ಸನ್ನು ರೂಪುಗೊಳಿಸಲು ಪ್ರಯತ್ನಿಸಬೇಕು, ನಮ್ಮಲ್ಲಿ ಸಾಹಿತ್ಯ ಮತ್ತು  ಸಾಂಸ್ಕೃತಿಕ ಶ್ರೀಮಂತಿಕೆ ಇದೆ, ಕವಿಗಳು ಬರೆದ ಕವನಗಳ  ಶ್ರೇಷ್ಠ  ಸಾಲುಗಳನ್ನು ಕಲಿತು ಜೀವನದಲ್ಲಿ ಅದನ್ನು ಆಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅರುಣೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ  ಡಾ.ಜಿ.ಎಚ್. ಶ್ರೀಹರ್ಷ ಅವರು ಮಾತನಾಡಿ  ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ  ತರೀಕೆರೆ ಪಟ್ಟಣದ ದೊಡ್ಡದಾಗಿ ಬೆಳೆದಿದೆ. ಪ್ರತಿ ವರ್ಷ, ಕಲೆ, ಸಾಹಿತ್ಯ ಸಂಗೀತ, ಹಾಡುಗಾರಿಕೆ ಶಿಬಿರಗಳು ನೆಡೆಯುತ್ತಿರುತ್ತವೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪಟ್ಟಣದಲ್ಲಿ ಸುಸಜ್ಜಿತವಾದ ವಿಶಾಲವಾದ ಸಭಾಂಗಣದ ಅಗತ್ಯವಿದೆ ಎಂದರು.
ಯುವಶಕ್ತಿ ಅಗತ್ಯ: ಬೆಂಗಳೂರು ಸ್ವರ ಸುರಭಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಅಯ್ಯರ್ ಅವರು ಮಾತನಾಡಿ ರಾಜ್ಯದ ಎಲ್ಲ ಕಡೆ ಶಿಬಿರಗಳನ್ನು ನೆಡಸಲಾಗಿದೆ, ಎರಡು ದಿನಗಳಿಂದ ನೆಡೆದ ಕಲಿಕಾ ಶಿಬಿರ ಯಶಸ್ವಿಯಾಗಿದೆ, 75ಕ್ಕೂ ಹೆಚ್ಚು ಮಕ್ಕಳು  ಶಿಬಿರದಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಪ್ರಸಿದ್ದ ಗಾಯಕರಾದ ಪಿ.ಕಾಳಿಂಗರಾವ್, ಸಿ. ಅಶ್ವಥ್ ಮತ್ತಿತರ ಅನೇಕ   ಮಹನೀಯರು ಸುಗಮ ಸಂಗೀತವನ್ನು ಬೆಳಸಿದರು. ಸುಗಮ ಸಂಗೀತವನ್ನು ಬೆಳೆಸಿಕೊಂಡು ಹೋಗಲು ಯುವಶಕ್ತಿ ಅಗತ್ಯವಾಗಿದೆ, ಇಂತಹ ಕಲಿಕಾ ಶಿಬಿರಗಳು ನಿರಂತರವಾಗಿ ನೆಡೆಯಬೇಕು ಎಂದು ತಿಳಿಸಿದರು.  
ಸ್ವರ ಸುರಭಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿದೆ. ಕಳೆದ 9 ವರ್ಷಗಳಿಂದ ಹಲವಾರು ಯುವ ಕಲಾವಿದರಿಗೆ ವೇದಿಕೆಯನ್ನು ನಿರ್ಮಿಸುತ್ತಾ  ಸಂಗೀತ ಪೋಷಣೆಯನ್ನು ನಿರ್ವಹಿಸುತ್ತಾ ಬಂದಿದೆ, ರಾಜಧಾನಿಗೇ ಸೀಮಿತವಾಗಿದ್ದ ಸುಗಮ ಸಂಗೀತ ಪ್ರಾಕರಗಳನ್ನು ರಾಜ್ಯಾದ್ಯಂತ ಹರಡಲು ಫಣ ತೊಟ್ಟಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ತೆರಳಿ ಸ್ಥಳೀಯ ಪ್ರತಿಭೆಗಳಿಗೆ ಕಲಿಕಾ ಕಮ್ಮಟಗಳ ಮೂಲಕ ಅರಿವು ಮೂಡಿಸಿ ಮಕ್ಕಳ ಮನೋವಿಕಾಸಕ್ಕೆ ನೆರವಾಗುತ್ತಿದೆ ಎಂದು ಹೇಳಿದರು.
ಸಂಜೆ ಸಮಯ ಸಂಜೆ ದಿನಪತ್ರಿಕೆ ಜಿ.ಎಚ್.ಅನಿಲ್‌ಕುಮಾರ್ ಮಾತನಾಡಿದರು. ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರು, ಕಾದಂಬರಿಕಾರರು ಡಾ.ರಾಘವೇಂದ್ರ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರಾರ್ಥಿಗಳಾದ ಶಿಲ್ಪ ಮನೋಜ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಕೃತಿಶ್ರೀ ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್, ರಶ್ಮಿರಮೇಶ್, ಲಕ್ಷ್ಮೀವಿಶ್ವನಾಥ್, ಶಿಬಿರ ಸಂಯೋಜಕರಾದ ಬೆಳಗಾವಿ ಆಶಾ ಕಡಪಟ್ಟಿ, ಶಿಬಿರಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಲಕ್ಷ್ಮಿವಿಶ್ವನಾಥ್ ಅವರು ಸ್ವಾಗತಿಸಿದರು. ರಶ್ಮಿರಮೇಶ್ ಅವರು ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.