ಚಿಕ್ಕಮಗಳೂರು

ನೀತಿ ಸಂಹಿತೆ ಪಾಲಿಸೋಣ: ಸುರೇಶ್

Published On :

ಕ.ಪ್ರ.ವಾರ್ತೆ, ತರೀಕೆರೆ,  ಏ.14
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಿರ್ವಹಿಸಿದ ಅಭಿವೃದ್ಧಿ  ಸಾಧನೆಯ ಎಲ್ಲಾ ವಿವರಗಳನ್ನು ಕ್ಷೇತ್ರದಲ್ಲಿ ಪ್ರತಿ ಮನೆಗೆ ತಲುಪಿಸಬೇಕೆಂದು ಕೆಜೆಪಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಡಿ.ಎಸ್. ಸುರೇಶ್ ಅವರು ಹೇಳಿದರು.
ಕೆಜೆಪಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಬೇರೆ ಪಕ್ಷಗಳನ್ನು ತೆರೆದು ಕೆಜಿಪಿ ಸೇರಿಕೊಂಡು ವಿವಿಧ ಗಣ್ಯರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸುವ ಸಮಾರಂಭದಲ್ಲಿ ಮಾತನಾಡಿದರು.
ಮೊದಲ ಸ್ಥಾನ: ಬಿ.ಎಸ್. ಯಡಿಯೂರಪ್ಪ ಅವರು ಮಹಿಳೆಯರ ಅಭಿವೃದ್ಧಿಗಾಗಿ ಭಾಗ್ಯಲಕ್ಷ್ಮಿ ಬಾಂಡ್ ಇತ್ಯಾದಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನು ಮಹಿಳೆಯರಿಗೆ ತಿಳಿಸಬೇಕು. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಗಳಾಗಬೇಕೆಂದು ನಡೆಸಿದ ಸಮೀಕ್ಷೆಯಲ್ಲಿ ಯಡಿಯೂರಪ್ಪನವರಿಗೆ ಮೊದಲ ಸ್ಥಾನ ದೊರಕಿದೆ ಎಂದು ಅವರು ತಿಳಿಸಿದರು.
ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸೋಣ, ಕ್ಷೇತ್ರದಲ್ಲಿ ಅಭಿವೃದ್ಧಿ ಚಿಂತನೆಗೆ ಮೊದಲ ಆದ್ಯತೆ ನೀಡಬೇಕು. ಪಕ್ಷದ ಸಂಘಟನೆಗೆ ಎಲ್ಲರೂ  ಶ್ರಮಿಸಬೇಕು.  17 ರಂದು ತಾವು ನಾಮಪತ್ರ   ಸಲ್ಲಿಸುವುದಾಗಿ ಹೇಳಿದರು.  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್ , ಮುಖಂಡ ದಾದಾಪೀರ್ ಮಾತನಾಡಿದರು. ಕೆಜಿಪಿ ತಾಲೂಕು ಅಧ್ಯಕ್ಷ ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದುಗ್ಲಾಪುರದ ಮಹೇಂದ್ರಕುಮಾರ್, ವಿಜಯಾ ನಾಯ್ಕ, ಆನಂದ್, ಅಣ್ಣಪ್ಪ ನಾಯಕ್, ಮಿಲ್ಟ್ರಿ ಶ್ರೀನಿವಾಸ್ ಮೊದಲಾದವರು ಮಾತನಾಡಿದರು.
ಕೆಜಿಪಿಗೆ ಸೇರ್ಪಡೆ: ಪಕ್ಷದ ಸಿದ್ಧಾಂತ ಒಪ್ಪಿ ದುಗ್ಲಾಪುರದ ಮಹೇಂದ್ರಕುಮಾರ್, ಅಬ್ದುಲ್ ಅಜೀಜ್, ರೇವಣ್ಣ, ಗಂಗಾಧರಪ್ಪ, ಉಮೇಶ್ ಸೇರಿಂದಂತೆ 600 ಕಾರ್ಯಕರ್ತರು ಕೆಜಿಪಿಗೆ ಸೇರ್ಪಡೆಯಾದರು.  ಬೇಲೇನಹಳ್ಳಿ ಸೋಮಶೇಖರ್, ದೀಪಾ ಉಮೇಶ್, ಶಾರದಾ ವೇಲುಮುರುಗನ್, ಗಿರೀಶ್, ಶಿವಕುಮಾರ್, ಮಂಜುನಾಥ್ ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.