ಚಿಕ್ಕಮಗಳೂರು

ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ: ಪ್ರಾಣೇಶ್

Published On :

ಕ.ಪ್ರ.ವಾರ್ತೆ, ತರೀಕೆರೆ, ಏ.16
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಸಾಧನೆ ಮತ್ತು ಅಬಿವೃದ್ಧಿ ಕೆಲಸವೇ ಪಕ್ಷಕ್ಕೆ ಮಾನದಂಡ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರಾಣೇಶ್ ತಿಳಿಸಿದ್ದಾರೆ.
ಅವರು, ಮಂಗಳವಾರ ಪಕ್ಷದ, ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಟಿ.ಜೆ. ಅವಿನಾಶ್ ಅವರು ನಾಮಪತ್ರ ಸಲ್ಲಿಸಿದ ನಂತರ ಪಕ್ಷದ ಕಾರ್ಯಾಲಯದಲ್ಲಿ ಏರ್ಪಾಡಿಸಿದ್ದ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಕಳೆದ ಐದು ವರ್ಷದಲ್ಲಿ ಎಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ, ಶಾಲಾ ಮಕ್ಕಳಿಗೆ ಸೈಕಲ್, ಹೆಣ್ಮು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್, ರೈತರ ಸಾಲ ಬಡ್ಡಿ ಮನ್ನಾ ಇಂತಹ ಹಲವಾರು ಅಬಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ನಿರ್ವಹಿಸಿದೆ.
ಜನರ ಪ್ರೀತಿ ವಿಶ್ವಾಸದೊಂದಿಗೆ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದ ಅವರು, ಬಿಜೆಪಿ ಸರ್ಕಾರದ ಅಭಿವೃದ್ಧಿ ಮತ್ತು ವಿರೋಧಿಗಳ ಅಪಪ್ರಚಾರದ ನಡುವೆ ಈ ಚುನಾವಣೆ ನಡೆಯುತ್ತಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡ ಎನ್. ಮಂಜುನಾಥ್ ಅವರು ಮಾತನಾಡಿ, ಜನರ ನಡುವೆ ಇರುವಂತಹವರನ್ನು ಗುರುತಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಟಿ.ಜಿ. ಅವಿನಾಶ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ, ಕಾರ್ಯಕರ್ತರ ಉತ್ಸಾಹವೇ ಪಕ್ಷಕ್ಕೆ ಬಂಡವಾಳ ಎಂದು ಅವರು ತಿಳಿಸಿದರು.
ಅಭ್ಯರ್ಥಿ ಅವಿನಾಶ್ ಮಾತನಾಡಿ, ಪಕ್ಷ ತಮ್ಮನ್ನು ಗುರುತಿಸಿ ಅವಕಾಶ ಕೊಟ್ಟಿದೆ, ಸಮಗ್ರ ತಾಲೂಕು ನೀರಾವರಿಯಾಗಬೇಕು, ಬುಕ್ಕಾಂಬುದಿ ಗಾಣಿಗಿತ್ತಿ ಹಳ್ಳ, ಹೆಬ್ಬೆ ಜಲಪಾತ ಯೋಜನೆ, ಭದ್ರಾ ಮೇಲ್ದಂಡೆ ಇತ್ಯಾದಿ ಯೋಜನೆಗಳಿಂದ ತಾಲೂಕಿಗೆ ಮತ್ತು ರೈತರಿಗೆ ಉಪಯೋಗವಾಗಬೇಕು ಅದಕ್ಕಾಗಿ ಹೋರಾಡುತ್ತೇನೆ ಎಂದು ತಿಳಿಸಿದರು,
ಮುಖಂಡರಾದ ಆರ್. ದೇವಾನಂದ್, ಎಂ.ಆರ್. ಲೋಹಿತ್, ರೇಖಾ ಹುಲಿಯಪ್ಪಗೌಡ, ಟಿ.ಜಿ. ಸದಾನಂದ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪ್ರೇಂಕುಮಾರ್, ಅಜಯ್, ದುಗ್ಲಾಪುರ ಮಂಜುನಾಥ್, ಅರವಿಂದ್, ಸುನೀಲ್ ಕುಮಾರ್, ಮೋಹನ್‌ಕುಮಾರ್ ಪಕ್ಷದ ಕಾರ್ಯಕರ್ತರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.