ಚಿಕ್ಕಮಗಳೂರು

ಕೊಪ್ಪ: 8 ಅಭ್ಯರ್ಥಿಗಳಿಂದ 14 ನಾಮಪತ್ರ

Published On :

ಕ.ಪ್ರ. ವಾರ್ತೆ, ಕೊಪ್ಪ, ಏ.17
ರಾಜ್ಯ ವಿದಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಶೃಂಗೇರಿ ಕ್ಷೇತ್ರಕ್ಕೆ ಸ್ಪರ್ಧಿಸಲು 8 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಗಿದೆ.
ನಾಮಪತ್ರಗಳನ್ನು ಸಲ್ಲಿಸಿದರಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ 4 ನಾಮ ಪತ್ರಗಳನ್ನು ಸಲ್ಲಿಸಿದರೆ, ಕಾಂಗ್ರೇಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 3 ನಾಮಪತ್ರ, ಬಿಎಸ್ ಅರ್ ಕಾಂಗ್ರೆಸ್ ಅಭ್ಯರ್ಥಿ ಪೂರ್ಣೇಶ್ 2 ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಟಿ.ಸಿ. ರಾಜೇಂದ್ರ, ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದಿಂದ ಉಮೇಶ್ ಮತ್ತು ಬಸವರಾಜ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಕಟ್ಟಿನ ಮನೆ ಮಹೇಶ್, ಕೆ.ಸಿ.ಪ್ರಕಾಶ್, ತಲಾ ಒಂದೂಂದು ನಾಮ ಪತ್ರ ಸಲ್ಲಿಸಿದ್ದಾರೆ.
ತಪಾಸಣಾ ಕೇಂದ್ರ: ನಾಮ ಪತ್ರ ಸಲ್ಲಿಸಿದ ದಿನ ದಿಂದ ಅಭ್ಯರ್ಥಿಗಳು ಮತಯಾಚನೆಯ ಕಾರ್ಯದಲ್ಲಿ ತೋಡಗಿದ್ದು ಇವರು ನೀತಿಸಂಹಿತೆ ಉಲ್ಲಂಘನೆ ಮಾಡದಂತೆ ತೀವ್ರ ನಿಗವಹಿಸಲು ಶೃಂಗೇರಿ ಕ್ಷೇತ್ರದಲ್ಲಿ 21 ನೀತಿಸಂಹಿತೆ ಉಲ್ಲಂಘನಾ ದಳಗಳನ್ನು ಹಾಗೂ ಕ್ಷೇತ್ರದ  ಗಡಿ ಭಾಗದಲ್ಲಿ 5ಪೊಲೀಸ್ ತಪಾಸಣಾ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ದಿನದ 24 ಗಂಟೆಗಳ ಕಾಲ ಕಾರ್ಯಪ್ರವೃತ್ತರಾಗಿರುತ್ತಾರೆ ಅದ್ದರಿಂದ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಗನೆಯಾದ ಘಟನೆ ಕಂಡು ಬಂದಲ್ಲಿ 180004251017 ಉಚಿತವಾಗಿ ಕರೆ ಮಾಡಿ ದೂರನ್ನು ಸಲ್ಲಿಸಬಹುದಾಗಿದೆ ಎಂದು ಶೃಂಗೇರಿ ಕ್ಷೇತ್ರದ ಚುನಾವಣಾಧಿಕಾರಿ ರತ್ನಕಾರ್ ನಾಯ್ಕ ತಿಳಿಸಿದ್ದಾರೆ.
ಅನ್ನಸಂತರ್ಪಣೆ ಇಲ್ಲ: ಧಾರ್ಮಿಕ ಜಾತ್ರಮಹತ್ಸೋವದ ಸಮಯದಲ್ಲಿ ಮೊದಲಿನಿಂದ ರೂಡಿಸಿಕೊಂಡು ಬಂದ ಸಾಮೂಹಿಕ ಅನ್ನಸಂತರ್ಪಣೆಗೆ ಚುನಾವಣಾ ಆಯೋಗ ಕಡಿವಾಣ ಹಾಕಿರುವುದರಿಂದ ಜಾತ್ರಮಹತ್ಸೋವಕ್ಕೆ ದೂರದ ಹಳ್ಳಿಗಳಿಂದ ಬರುವ ಭಕ್ತಾಧಿಗಳಿಗೆ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದಾರೆ. ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನೀತಿ ಸಂಹಿತೆಯ ಕಾರಣದಿಂದ ಮೂಂದುಡಲು ಆಯೋಗ ಸೂಚನೆ ನೀಡಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಧಾರ್ಮಿಕ ಕೇಂದ್ರ ವೈಹಿವಾಟುದಾರರು ತಮ್ಮ ಅಸಹಾಕತೆ ವ್ಯಕ್ತ ಪಡಿಸುತ್ತಿದ್ದಾರೆ.
ತಪಾಸಣೆ ನೆಪದಲ್ಲಿ ಹಣ ಸುಳಿಗೆ: ಚುನಾವಣಾ ಉದ್ದೇಶದಿಂದ ಗಡಿ ಭಾಗದಲ್ಲಿ ರಚನೆ ಮಾಡಿರುವ ಕೆಲ ತಪಾಸಣಾ ಕೇಂದ್ರಗಳಲ್ಲಿ ಬರುವ ಸಂಚಾರಿ ವಾಹನಗಳ ತಾಪಸಣೆಯ ನೆಪದಲ್ಲಿ ವಾಹನ ಮಾಲೀಕರಿಂದ ಪೊಲೀಸರು ಹಣದ ಸುಲಿಗೆ ಮಾಡುತ್ತಿರುವುದನ್ನು ಕಂಡು ಗಡಿಕಲ್ಲು ಪೊಲೀಸ್ ತಪಾಸಣಾ ಕೇಂದ್ರದ ಪೊಲೀಸರ ವಿರುದ್ಧ ಅಲ್ಲಿನ ಗ್ರಾಮಸ್ಥರೆ ದಂಗೆ ಎದ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.