ಅಭಿವೃದ್ಧಿಗೆ ಹಣ: ಕೇಂದ್ರದ್ದೇ ಸಿಂಹಪಾಲು
ಕ.ಪ್ರ.ವಾರ್ತೆ, ಕೊಪ್ಪ, ಏ.19
ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅನುದಾನದಲ್ಲಿ ಸಿಂಹ ಪಾಲು ಕೇಂದ್ರ ಸರ್ಕಾರದ ಅನುದಾನವಿದೆ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಸಾಮರ್ಥಿಸಿಕೊಂಡರು.
ಕೇಂದ್ರ ಸರ್ಕಾರದಿಂದ ರಾಜ್ಯದ ವಿವಿಧ ಯೋಜನೆಗಳ ಅಭಿವೃದ್ದಿಗೆ ರು. 88 ಸಾವಿರ ಕೋಟಿಯನ್ನು ನೀಡಿದೆ. ಅದರೆ ಬಿಜೆಪಿ ನೇತೃತ್ವ ರಾಜ್ಯ ಸರ್ಕಾರದ ಮಂತ್ರಿಗಳು ಎಲ್ಲಾ ಅಭಿವೃದ್ಧಿಯ ಅನುದಾನಗಳು ನಮ್ಮದೆ ಎಂದು ಬೀಗುತ್ತಿದ್ದಾರೆ. ಇದರಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಮತ್ತು ಸಚಿವ ಡಿ.ಎನ್. ಜೀವರಾಜ್ ಇದರಿಂದ ಹೋರತಾಗಿಲ್ಲಾ ಎಂದು ಅವರು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕಳಪೆ ಕಾಮಗಾರಿ: ರಸ್ತೆಗಳ ಅಭಿವೃದ್ಧಿ ಮತ್ತು ವಿವಿಧ ಕಾಮಗಾರಿಗಳಿಗೆ ಬಂದಂತಹ ಅನುದಾನವನ್ನು ಕಾಮಗಾರಿಗಳಿಗೆ ಬಳಸಲು ಶಾಸಕರು ತಮ್ಮ ಹಿಂಬಾಲಕರಿಗೆ ಗುತ್ತಿಗೆ ನೀಡುವ ಮೂಲಕ ಕ್ಷೇತ್ರಾದ್ಯಂತ ಕಳಪೆ ಕಾಮಗಾರಿಗಳನ್ನು ಮಾಡಲಾಗಿದೆ. ಆ ಮೂಲಕ ಜನಸಮಾನ್ಯರಿಗೆ ಅನ್ಯಾಯ ಮಾಡುವುದರೊಂದಿಗೆ ಅನುದಾನದ ದೂರಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಗ್ರಾ.ಪಂ.ಮತ್ತು ತಾ.ಪಂ ಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಭಾಗಳಿಗೆ ಅಭಿವೃದ್ಧಿಗೆ ಅನುದಾನವನ್ನು ನೀಡದೇ ಮಲತಾಯಿ ದೋರಣೆಯನ್ನು ತೋರಿದ್ದಾರೆ. ಇವರ ವಿರುದ್ದ ಧ್ವನಿ ಎತ್ತಿದವರಿಗೆ ಸರ್ವಾಧಿಕಾರಿಯ ನಿಲುವುಗಳನ್ನು ತೆಗೆದು ಕೊಂಡು ವಿರೋಧ ಪಕ್ಷ ನಾಯಕರನ್ನು ಮಟ್ಟಹಾಕುವಂತಹ ಹೀನ ಕೆಲಸಗಳಿಂದ ಕ್ಷೇತ್ರದ ಜನತೆ ಬೆಸತ್ತಿದ್ದಾರೆ ಎಂದರು.
ತೇಜೋವಧೆಗೆ ಯತ್ನ: ಶೃಂಗೇರಿ ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್ನಿಂದ 14 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಇದರಲ್ಲಿ ನನಗೆ ಪಕ್ಷ ಟಿಕೆಟ್ ನೀಡಿರುವುದನ್ನು ಉಳಿದ 13 ಜನರು ಸ್ವಾಗತಿಸಿ, ಎಲ್ಲಾರೂ ಒಂದುಗೂಡಿ ಪಕ್ಷದ ಒಳಿತಿಗಾಗಿ ಈ ಚುನಾವಣೆಯಲ್ಲಿ ದುಡಿಯುತ್ತಿರುವುದನ್ನು ಕಂಡು ಬಿಜೆಪಿ ಪಕ್ಷದ ನಾಯಕರು ಸಹಿಸದೇ ನನ್ನ ತೇಜೋವಧೆ ಮಾಡುವಂತಹ ಕೆಲಸದಲ್ಲಿ ತೋಡಗಿದ್ದಾರೆ ಎಂದು ಅವರು ಹೇಳಿದರು.
ತಾವು ಜಿ.ಪಂ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲೇಯಲ್ಲಿ ಬರಗಾಲ ಪರಿಸ್ಥಿ ಎದುರಾದಾಗ ಪೂರಕ ವ್ಯವಸ್ಥೆಗಳನ್ನು ಮಾಡುವ ಮೂಲಕ ಸಾಮರ್ಥವಾಗಿ ನಿಭಾಯಿಸಿದ್ದೆ. ಅಲ್ಲದೇ ಶಿಕ್ಷಣ ಇಲಾಖೆ ಮತ್ತು ಜಲನಯನ ಇಲಾಖೆಯಲ್ಲಿರುವಂತಹ ಡಿಪಿ ಮತ್ತು ಎಪಿ ಯೋಜನೆಗಳನ್ನು ಜಿಲ್ಲೆಗೆ ಅನ್ವಸುವಂತೆ ಮಾಡಿ ಕೃಷಿಗೆ ಅನುಕೂಲವಾಗುವಂತ ಹತ್ತು ಹಲವು ಕೆಲಸಗಳನ್ನು ಮಾಡಿದ್ದೆ ಎಂದರು.
ಜಿಲ್ಲೆಗೆ 24 ನೇ ಸ್ಥಾನ: ರಾಜ್ಯ ಸರ್ಕಾರದ 100 ಯೋಜನೆಗಳಲ್ಲಿ 99 ನ್ನು ಸಾಮರ್ಪಕವಾಗಿ ಜನಸಮಾನ್ಯರಿಗೆ ತಲುಪುವಂತೆ ಮಾಡಿ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು 1 ನೇ ಸ್ಥಾನಕ್ಕೆ ತೆಗೆದು ಕೊಂಡು ಹೋಗುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡಿದ್ದೆ. ಅದರೆ ಜಿಲ್ಲೇಯ ಉಸ್ತುವಾರಿ ಮಂತ್ರಿ ಈ ಜಿಲ್ಲೇಯವರೆ ಅಗಿದ್ದು, ಅವರ ಪಕ್ಷದವರೆ ಜಿಪಂ ಅಧ್ಯಕ್ಷರಾಗಿದ್ದರೂ ಕೂಡ ಜಿಲ್ಲೇ ರಾಜ್ಯದಲ್ಲಿ 24 ನೇ ಸ್ಥಾನಪಡೆದುಕೊಂಡಿರುವುದು ಶೋಚನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಹೆಚ್.ಜಿ. ವೆಂಕಟೇಶ್,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶೋಭಿಂತ್, ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ನಟರಾಜ್, ಹೆಚ್.ಎಂ.ಸತೀಶ್, ಸಚಿನ್ ಮೀಗಾ ಮತ್ತಿತ್ತರು ಇದ್ದಾರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

