ದತ್ತಾರಿಂದ ಸುಳ್ಳು ಮಾಹಿತಿ: ಆರೋಪ (ಸುದ್ದಿ ಸಂಕ್ಷೇಪ)
ಕಡೂರು: ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತರವರು ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ವಿವರದಲ್ಲಿ ಸರಿಯಾದ ಮಾಹಿತಿ ನೀಡದೆ ಮರೆಮಾಚಿದ್ದಾರೆ ಎಂದು ಬಿಎಸ್ಆರ್ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಕೆಂಪರಾಜು ಮತ್ತು ಮುಖಂಡ ಶರತ್ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದತ್ತರವರು ತುಮಕೂರಿನ ಚಂದ್ರನಾಯ್ಕ ಎಂಬ ವ್ಯಕ್ತಿಗೆ ನೀಡಿದ ಚೆಕ್ ಬೌನ್ಸ್ ಪ್ರಕರಣದ ಕುರಿತು ಆಯೋಗಕ್ಕೆ ಈಗಾಗಲೇ ದೂರು ನೀಡಿದ್ದೇವೆ. ಅವರು 2010ರ ಉಪ ಚುನಾವಣೆಯಲ್ಲಿ ಸ್ಫರ್ಧಿಸಿದಾಗ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ತಾವು ಯಾವುದೇ ಬ್ಯಾಂಕಿನ ಖಾತೆ ಹೊಂದಿಲ್ಲ ಎಂದು ಹೇಳಿ ವಿವರ ನೀಡಿದ್ದರು. ಆದರೆ ಚಂದ್ರಾನಾಯ್ಕ ಎಂಬ ವ್ಯಕ್ತಿಗೆ ಖಾತೆಯೇ ಇಲ್ಲದೆ ಚೆಕ್ ಹೇಗೆ ನೀಡಿದರು. ದಿನಾಂಕ 15-8-2010ರಲ್ಲಿ 6 ಲಕ್ಷರು. ಚೆಕ್ ನೀಡಲಾಗಿದೆ. ಬ್ಯಾಂಕಿನಲ್ಲಿ ಖಾತೆಯೇ ಇಲ್ಲ ಎಂದು 2010ರ ಆಗಸ್ಟ್ 24 ರಂದು ವಿವರದಲ್ಲಿ ಘೋಷಿಸಿಕೊಂಡಿದ್ದು 22 ದಿನಗಳಲ್ಲಿ ಹೇಗೆ ಚೆಕ್ ನೀಡಿದರು ಎಂಬುದು ನಮ್ಮ ಪ್ರಶ್ನೆಯಾಗಿದ್ದು ಇದರ ಉದ್ದೇಶವನ್ನು ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು. ಇದೇ ರೀತಿ ದತ್ತರವರು ಸಾಕಷ್ಟು ವಿಷಯಗಳನ್ನು ಮರೆಮಾಚಿದ್ದಾರೆ. ಇಂತಹ ಹಲವಾರು ವಿವರ ನಮ್ಮ ಬಳಿ ಇದ್ದು ಮುಂದಿನ ದಿನಗಳಲ್ಲಿ ಅವನ್ನು ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಭಹಿರಂಗಪಡಿಸುತ್ತೇವೆ. ಕ್ಷೇತ್ರದ ಜನರಿಗೆ ನಿಜ ಸಂಗತಿ ಮುಚ್ಚಿಟ್ಟಿರುವುದರಿಂದ ದತ್ತರವರಿಗೆ ಕ್ಷೇತ್ರದ ಜನರ ಮತ ಕೇಳುವ ನೈತಿಕಿ ಹಕ್ಕು ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ದತ್ತರವರು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ರಮೇಶ್, ಬೀರೂರು ಶಿವಕುಮಾರ್, ಚಂದ್ರಪ್ಪ, ತಿಮ್ಮೇಗೌಡ, ಮರುಳಪ್ಪ ಇದ್ದರು.
ಜೆಡಿಎಸ್ ಕೋರ್ ಕಮಿಟಿ ಸಭೆ
ಮೂಡಿಗೆರೆ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಗೆಲವು ಸಾಧಿಸಲು ಕೈಗೊಳ್ಳಬೇಕಾದ ರಣ ತಂತ್ರಗಳ ಬಗ್ಗೆ ಚರ್ಚಿಸಲು ಶುಕ್ರವಾರ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ 9 ಹೋಬಳಿಗಳ ಅಧ್ಯಕ್ಷರು, ಕೋರ್ ಕಮಿಟಿ ಸದಸ್ಯರು, ವಿಶೇಷ ಅಹ್ವಾನಿತರು ಹಾಗೂ ಪಕ್ಷದ ಮುಖಂಡರು ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಚರ್ಚಿಸಿ ಎಲ್ಲರ ಸಲಹೆ ಪಡೆದು, ಪ್ರಚಾರ ನಡೆಸುವ ವಿಧಿ ವಿಧಾನಗಳ ಬಗ್ಗೆ ಹಾಗೂ ಪ್ರಮುಖವಾದ ವಿಚಾರಗಳನ್ನು ಪ್ರಸ್ತಾಪಿಸಿ ಮತ ಬೇಡಬೇಕೆಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಜೆಡಿಎಸ್ನ ಜನಪ್ರಿಯ ಪ್ರಣಾಳಿಕೆ (ವಾಗ್ದಾನ ನಮ್ಮದು, ತೀರ್ಮಾನ ನಿಮ್ಮದು) ಎಚ್.ಡಿ.ಕೆ ಹಾಗೂ ದೇವೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಸಾಧನೆಗೆ ಮತ ನೀಡುವಂತೆ ಕೇಳಿಕೊಳ್ಳಲು ತೀರ್ಮಾನಿಸಲಾಯಿತು. ಕಾಂಗ್ರೆಸ್ ಕೃಷ್ಣಾ, ಕಾವೇರಿ ನೀರಾವರಿ ಯೋಜನೆಗಳಿಗಾಗುತ್ತಿರುವ ಅನ್ಯಾಯದ, ಬಗ್ಗೆ ಬಿಜೆಪಿಯ ಭ್ರಷ್ಟಾಚಾರ, ಗುಂಪುಗಾರಿಕೆ, ಜಾತೀಯತೆ, ದುರಾಡಳಿತದ ಬಗ್ಗೆ ವಿವರಿಸಿ ಜನರಲ್ಲಿ ಸ್ವಾಭಿಮಾನದ ಕಿಚ್ಚನ್ನು ಜಾಗೃತಗೊಳಿಸಿ ಜೆಡಿಎಸ್ ಪರ ಒಮ್ಮತದಿಂದ ಉತ್ಸಾಹದಿಂದ ಮೇ.5ರವರೆಗೆ ಪ್ರಚಾರ ಮಾಡಲು ತೀರ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

