ಚಿಕ್ಕಮಗಳೂರು

'ರಾಜ್ಯಕ್ಕೆ ಕೇಂದ್ರದ ಮಲತಾಯಿ ಧೋರಣೆ'

Published On :

ಕೊಪ್ಪ: ರಾಜ್ಯಕ್ಕೆ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ದಿಯೋಜನೆಗೆ ಕಳೆದ 5ವರ್ಷಗಳಿಂದ ಹಣವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಅನುಸಾರಿಸುತ್ತಿದೆ ಎಂದು ಶೃಂಗೇರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದರು.
 ತಾಲೂಕಿನ ಹಿರೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್‌ನಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, ನಮ್ಮ ಸರ್ಕಾರದ 5 ವರ್ಷದ ಅಧಿಕಾರ ಅವಧಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ದಿಯೋಜನೆಯಲ್ಲಿ ಕೇವಲ 9ನೇ ಹಂತದ ಅನುದಾನವನ್ನು ಮಾತ್ರ ಕರ್ನಾಟಕ ಸರ್ಕಾರಕ್ಕೆ ನೀಡಿದೆ.
  ಅದರೆ ಕಾಂಗ್ರೇಸ್  ಆಡಳಿತ ರಾಜಸ್ಥಾನಗಳಂತಹ ರಾಜ್ಯಗಳಿಗೆ 14 ಮತ್ತು 15 ನೇ ಹಂತ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯಕ್ಕೆ ತಾರತಮ್ಯ ಮಾಡಿದೆ ಎಂದರು.
ಪಡಿತರ ಅಕ್ಕಿ ಕಡಿತ: ಈ ತಿಂಗಳು ರಾಜ್ಯಕ್ಕೆ ನೀಡ ಬೇಕಾದ ಪಡಿತರ ಅಕ್ಕಿಯನ್ನು 25 ಸಾವಿರ ಮೇಟ್ರಿಕ್ ಟನ್‌ನಷ್ಟು  ಕಡಿತಗೋಳಿಸಿದೆ. ಅದ್ದರಿಂದ ಈ ತಿಂಗಳಿನಲ್ಲಿ ರಾಜ್ಯದ ಪಡಿತರದಾರರಿಗೆ  20 ಕೆ.ಜಿ. ಬದಲಾಗಿ 15 ಕೆ.ಜಿ ಪಡಿತರ ಅಕ್ಕಿ ನೀಡುವ ಪರಿಸ್ಥಿತಿ ಎದುರಾಗಿದೆ.  ಕಾಂಗ್ರೆಸ್ ನೇತೃತ್ವ ಕೇಂದ್ರ ಸರ್ಕಾರ ಈ ರೀತಿ ರಾಜ್ಯಕ್ಕೆ ಮಲತಾಯಿದೋರಣೆ ಅನುಸಾರಿಸುತ್ತಿದೆ. ಅದರೆ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ರು ಮಾಹಿತಿ ಕೊರತೆಯಿಂದ ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ದಿಗೆ ಕೇಂದ್ರದ ಸಿಂಹಪಾಲು ಅನುದಾನ ಇದೆ ಎಂದು ಹೇಳಿಕೊಂಡು ಬರುತ್ತಿರುವುದು ವಿಷಾದನೀಯ ಎಂದರು.
  ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎನ್.ರಾಮಸ್ವಾಮಿ ಮಾತನಾಡಿ, ರೈತ ವಿರೋಧಿ ನೀತಿ ಅನುಸಾರಿಸುತ್ತಿರುವ ಕೇಂದ್ರ ಸರ್ಕಾರ ವಿರುದ್ಧ ಹಾಗೂ ಸಂಕಷ್ಟದಲ್ಲಿರುವ ರೈತರ ಪರವಾಗಿ ಧ್ವನಿ ಎತ್ತಾಬೇಕಾದ ಇಲ್ಲಿನ ರೈತಪರ ಸಂಘಟನೆಗಳ ನಾಯಕರುಗಳು  ಕಾಂಗ್ರೆಸ್ ನಾಯಕರ ಜೋತೆ ಕೂಡವಾಳಿ ಮಾಡಿಕೊಂಡು ಕಾಂಗ್ರೆಸ್ ಪರ ಮತಯಾಚನಾ ಸಭೆಗಳಲ್ಲಿ ಭಾಷಣವನ್ನು ಮಾಡುತ್ತಾ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
 ಜಿಪಂ ಸದಸ್ಯೆ ಸುಚಿತಾ ನರೇಂದ್ರ, ತಾಪಂ ಮಾಜಿ ಅಧ್ಯಕ್ಷೇ ಹಾಗೂ ಹಾಲಿ ಸದಸ್ಯೆ ಪ್ರೇಮಾ ದಾಮೋದರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.