ಆಲೋಚನೆಗಳೇ ವ್ಯಕ್ತಿತ್ವ ರೂಪಿಸುತ್ತವೆ; ಪ್ರೊ. ಈರಣ್ಣ
ತರೀಕೆರೆ: ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಖ್ಯಾತ ಶಾಯರಿ ಕವಿ ಪ್ರೊ. ಇಟಗಿ ಈರಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತಿನ ಎಲ್ಲ ದಾರ್ಶನಿಕರು ಅವರ ಅಲೋಚನೆಗಳಿಂದಲೇ ದೊಡ್ಡವರಾಗಿದ್ದಾರೆ. ವ್ಯಕ್ತಿತ್ವ ರೂಪುಗೊಳ್ಳುವುದು ಕೇವಲ ಸ್ಥಾನಮಾನಗಳಿಂದಲ್ಲ ನಮ್ಮ ಉನ್ನತವಾದ ಆಲೋಚನೆ ಮತ್ತು ಕ್ರೀಯಾಶೀಲತೆಯಿಂದ, ನೀವು ಪಡೆಯುವ ವಿಶ್ವವಿದ್ಯಾನಿಲಯದ ಪದವಿಗಳೊಂದಿಗೆ ಮೂರು ವರ್ಷಗಳ ಅವಧಿಯಲ್ಲಿ ಕಾಲೇಜಿನ ಮೌಲ್ಯಗಳನ್ನು ಕಲಿಯಬೇಕು. ಇದೊಂದು ಗರಡಿ ಮನೆ ಇದ್ದ ಹಾಗೆ
ಇಲ್ಲಿ ಬದುಕಿನ ಸ್ಪರ್ಧೆಯಲ್ಲಿ ಜಯಿಸಲು ಬೇಕಾಗುವ ಎಲ್ಲ ಪಟ್ಟುಗಳನ್ನು ಕಲಿಯಬೇಕು ಎಂದರು.
ಕೌಶಲ್ಯ ಹೊಂದಿರಬೇಕು: ಕೇವಲ ಅಂಕಪಟ್ಟಿಗಳಿಂದ ಮಾತ್ರ ಬದುಕನ್ನು ಮಾತ್ರ ನಿರ್ಮಿಸಲು ಸಾಧ್ಯವಿಲ್ಲ. ಅದರೊಂದಿಗೆ ಕೌಶಲ್ಯಗಳನ್ನು ಹೊಂದಿರಬೇಕು, ಆಗ ಮಾತ್ರ ಸುಂದರವಾಗಿ ಬದುಕು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ಎಸ್ಎಸ್ಎಸ್ ಸಂಯೋಜಕರಾದ ಡಾ. ಕುಂದನ್ ಬಸವರಾಜ್ ಮಾತನಾಡಿ, ತಂದೆ-ತಾಯಿಗಳು ನಿಮ್ಮ ಬಗ್ಗೆ ಕಟ್ಟಿಕೊಂಡಿರುವ ಕನಸನ್ನು ನನಸು ಮಾಡುವಲ್ಲಿ ಬದ್ಧತೆಯನ್ನು ಪ್ರದರ್ಶಿಸಬೇಕು. ಬದ್ಧತೆಯನ್ನು ಹೊಂದಿದ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದ ಅವರು ಎಷ್ಟೋ ನೋವುಗಳಲ್ಲಿ, ತೊಂದರೆಗಳಲ್ಲಿ ಬಳಲಿದವರು ಬದುಕಿನಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕಾಲೇಜು ಪ್ರಾಚಾರ್ಯರಾದ ಪ್ರೊ.ಕೆ.ವಿ. ಸಜ್ಜಸಶೆಟ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರವಾಡದ ಎಸ್ಜೆಎಂ ಮಹಂತ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಆರ್. ಬಾಳಿಕಾಯಿ, ಎಸ್ಜೆಎಂ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ. ವಿ.ಕೆ. ಕನ್ನೇಶ್ವರ ಮಾತನಾಡಿದರು.
ಸಿ.ಇ. ಜಯದೇವಪ್ಪ ಸ್ವಾಗತಿಸಿದರು. ಪ್ರೊ. ಜಿ.ಎನ್. ಬಸವರಾಜವ್ಪ ಅವರು ಅತಿಥಿಗಳನ್ನು ಪರಿಚಯಿಸಿದರು. ಅನುರಾಥ ಕಾರ್ಯಕ್ರಮವನ್ನು ನಿರೂಪಿಸಿದರು. ಗಣೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

