ಚಿಕ್ಕಮಗಳೂರು

ಜೆಡಿಎಸ್ ಗೆಲವಿಗೆ ಶ್ರಮಿಸಲು ಕಾರ್ಯಕರ್ತರಲ್ಲಿ ಮನವಿ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಏ.23 ನಮ್ಮಲ್ಲಿ ಏನೇ ಭಿನ್ನಾಬಿಪ್ರಾಯವಿದ್ದರೂ, ಅದನ್ನು ಬದಿಗೊತ್ತಿ ಕ್ಷೇತ್ರದ ಏಳಿಗೆಗಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಕ್ಷೇತ್ರಾಧ್ಯಕ್ಷ ಡಿ.ಆರ್.ಉಮಾಪತಿ ಕಾರ್ಯಕರ್ತರಿಗೆ ತಿಳಿಸದರು.
 ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನವಿರೋಧಿ ಸರ್ಕಾರ  ಆಡಳಿತದಿಂದ ಜನ ಬೇಸತ್ತಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದರು.
ಜೆಡಿಎಸ್ಗೆ ಬೆಂಬಲ: ಕ್ಷೇತ್ರದ ಶಾಸಕರ ವಿರುದ್ಧ ಅವರ ಕಾರ್ಯಕರ್ತರೇ ಸಿಡಿದೆದ್ದಿದ್ದು. ತಮ್ಮ ಸಂರ್ಪೂ ಬೆಂಬಲವನ್ನು ಜೆಡಿಎಸ್ಗೆ  ನೀಡಲಿದ್ದಾರೆ. ಹೀಗಾಗಿ ಈ ಬಾರಿ ಮೂಡಿಗೆರೆ ಕ್ಷೇತ್ರದಲ್ಲಿ 35ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಜೆಡಿಎಸ್ ಗೆಲವು ನಿಶ್ಚಿತ ಎಂದರು.
  ರಾಜ್ಯಘಟಕದ ಸದಸ್ಯ ಎಂ.ಎಸ್. ಬಾಲಕೃಷ್ಣ ಮಾತನಾಡಿ. ಈ ಹಿಂದೆ ಜನತಾಪಕ್ಷದಿಂದ ಗೆಲುವು ಸಾಧಿಸಿದ ಪಶು ಸಂಗೋಪನಾ ಮಂತ್ರಿಯಾಗಿದ್ದ ಬಿ.ಬಿ. ನಿಂಗಯ್ಯ ಮಲೆನಾಡಿಗೆ ಅದರಲ್ಲೂ ಮೂಡಿಗೆರೆಗೆ ರೈತರಿಗೆ ಅನುಕೂಲವಾಗಲೆಂದು ಪಶು ಆಸ್ಪತ್ರೆ, ಎಪಿಎಂಸಿ ಹಾಗೂ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ತರಿಸುವಲ್ಲಿ ಯಶಸ್ವಿಯಾದವರು ಎಂದರು.
 ಗೆಲವಿಗೆ ಸಹಕರಿಸಿ: ಅವರು ಈ ಬಾರಿ ಜೆಡಿಎಸ್ ನಿಂದಲೇ ಸ್ಪರ್ಧೆಗೆ ಇಳಿದಿರುವುದು ಮಲೆನಾಡಿನ ಜನರ ಭಾಗ್ಯವೇ ಸರಿ. ಅಭಿವೃದ್ಧಿ ಪಥದತ್ತ ಸಾಗಲು ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಅವರಿಗೆ ಮತವನ್ನು ನೀಡಿ ಅವರ ಗೆಲವಿಗೆ ಸಹಕರಿಸುವಂತೆ ಮನವಿ ಮಾಡಿದರು.
 ಅಜಿತ್ ಕುಮಾರ್ ಮಾತನಾಡಿ, ಕಾಂಗ್ರೆಸ್, ಬಿಜೆಪಿಯಿಂದ ಹಲವು ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡಿದ್ದು, ಈ ಬಾರಿ ಮಲೆನಾಡಿನಲ್ಲಿ ಜೆಡಿಎಸ್ ಅಲೆ ಕಾಣಿಸಿಕೊಂಡಿದೆ ಎಂದರು.
  ಗಬ್ಬಳ್ಳಿ ಚಂದ್ರೇಗೌಡ, ಪುಟ್ಟಸ್ವಾಮಿ, ಕಾರ್ಯದರ್ಶಿ ಚಂದ್ರೇಗೌಡ, ವಿಶಾಲಾ ನಾಗರಾಜ್, ಪುಟ್ಟಸ್ವಾಮಿ, ನಾಗೇಂದ್ರ, ರಮೇಶ್, ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.