ಚಿಕ್ಕಮಗಳೂರು

ಜನಪರ ಕೆಲಸಕ್ಕೆ ಬಿಜೆಪಿಗೆ ಮತ ನೀಡಿ: ಡಾ. ವಿಶ್ವನಾಥ್

Published On :

ಕ.ಪ್ರ.ವಾರ್ತೆ ಟಿ ಕಡೂರು ಟಿ  ಏ.23
ಐದು ವರ್ಷ ಯಶಸ್ವಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಿಂದ ತಾವು ಕಡೂರು ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಿ ಜನಪರವಾಗಿ ಕೆಲಸ ಮಾಡಲು ಮತದಾರರು ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜ್ ಅವರಿಗೆ ಮತ ನೀಡಬೇಕು ಎಂದು ಶಾಸಕ ಡಾ. ವೈ.ಸಿ. ವಿಶ್ವನಾಥ್ ಮನವಿ ಮಾಡಿದರು.
ಕಡೂರು ವಿಧಾನಸಭಾ ಕ್ಷೇತ್ರದ ಅಂತರಘಟ್ಟೆ, ಚಿಕ್ಕನಲ್ಲೂರು, ಹಡಗಲು, ಹುಲೀಹಳ್ಳಿ, ಚೌಳಹಿರಿಯೂರು ಮತ್ತಿತರ ಕಡೆ ಅಭ್ಯರ್ಥಿ ಬೀರೂರು ದೇವರಾಜು ಪರವಾಗಿ ಮತಯಾಚನೆ ಮಾಡಿದರು.
ನೂರು ಕೋಟಿಗೂ ಹೆಚ್ಚಿನ ಅನುದಾನ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ರಾಜ್ಯದ ಜನ ಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಸರ್ಕಾರ ರೂಪಿಸಿದ ನೂರಾರು ಕಾರ್ಯಕ್ರಮಗಳು ಜನರಿಗೆ ತಲುಪಿವೆ. ನನ್ನ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ತಾವು ಬಿಜೆಪಿ ಸರ್ಕಾರದಿಂದ ನೂರಾರು ಕೋಟಿರೂ ಅನುದಾನ ತಂದು ಚೆಕ್ ಡ್ಯಾಂಗಳು, ರಸ್ತೆಗಳ ಅಭಿವೃದ್ಧಿ, ಸಮುದಾಯಭವನಗಳು, ಕುಡಿಯುವ ನೀರಿಗೆ ನೀಡಿರುವ ಆದ್ಯತೆ ಹಾಗೂ ಮೂಲ ಸವಲತ್ತುಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಹಿಂದುಳಿದ ವರ್ಗದ ಬೀರೂರು ದೇವರಾಜು ಉತ್ತಮ ವ್ಯಕ್ತಿಯಾಗಿದ್ದು, ಕ್ಷೇತ್ರದಲ್ಲಿ ಉಳಿದಿರುವ ಅಭಿವೃದ್ಧಿ ಕಾಮಗಾರಿ ಮುಂದುವರಿಸಿ ಕ್ಷೇತ್ರದ ಅಭಿವೃದ್ಧಿ ಮಾಡಲು ಮತದಾರರು ಬಿಜೆಪಿ ಅಭ್ಯರ್ಥಿ ದೇವರಾಜು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.
ಇದು ನನ್ನ ಭಾಗ್ಯ: ಅಭ್ಯರ್ಥಿ ದೇವರಾಜು ಮಾತನಾಡಿ, ತಮಗೆ ಸಿಗಲಿದ್ದ ಬಿಜೆಪಿ ಟಿಕೆಟ್ ನನಗೆ ಕೊಡಿಸುವ ಮೂಲಕ ಶಾಸಕರಾದ ಡಾ. ವೈ.ಸಿ. ವಿಶ್ವನಾಥ್ ಅವರು ದೇವರ ರೀತಿ ನನ್ನ ಜೊತೆ ಇದ್ದು, ನನ್ನ ಗೆಲುವಿಗೆ ಶ್ರಮಿಸುತ್ತಿರುವುದು ನನ್ನ ಭಾಗ್ಯವಾಗಿದೆ ಎಂದು ಹೇಳಿದರು.
ನನ್ನನ್ನು ಗೆಲ್ಲಿಸಿದಲ್ಲಿ ಈ ಕ್ಷೇತ್ರದ ಬಹುದಿನದ ಕನಸಾಗಿರುವ ನೀರಾವರಿ ಯೋಜನೆ ಜಾರಿಗೆ ತರುವುದು ನನ್ನ ಪ್ರಮುಖ ಗುರಿಯಾಗಿದ್ದು, ನನ್ನ ಜೀವನವಿಡೀ ಹೋರಾಟ ನಡೆಸಿ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
ಬಡವರ ನೋವಿಗೆ ಸ್ಪಂದಿಸಲು ಮತ್ತು ಕ್ಷೇತ್ರದ ಜನಸಾಮಾನ್ಯರ ಸೇವೆ ಮಾಡಲು ನನ್ನನ್ನು ಬೆಂಬಲಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕೋರಿದರು.
ಹಿರೇನಲ್ಲೂರು ಜಿಪಂ ಸದಸ್ಯೆ ಪದ್ಮಾ ಚಂದ್ರಪ್ಪ ಮತ್ತು ಮುಖಂಡ ಕಾಮನಕೆರೆ ಶಶಿಧರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿಪಂ ಸದಸ್ಯ ಪದ್ಮಾ ಚಂದ್ರಪ್ಪ, ಕಾಮನಕೆರೆ ಶಶಿಧರ್, ತಾಪಂ ಸದಸ್ಯೆ ಎ.ಇ. ರತ್ನ, ಚಂದ್ರಪ್ಪ, ಕೆ.ಟಿ. ಜಗನ್ನಾಥ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.