ಚಿಕ್ಕಮಗಳೂರು

ಗೆದ್ದೇ ಗೆಲ್ತೀರಾ

Published On :

ಚಿಕ್ಕಮಗಳೂರು: ತಲೆ ಕೆಡಿಸಿಕೊಳ್ಳಬೇಡಿ, ಈ ಬಾರಿ ಗೆದ್ದೆ ಗೆಲ್ತೀರಾ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಧೈರ್ಯ ಹೇಳಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಶುಕ್ರವಾರ ಆಗಮಿಸಿದ್ದ ಮುಖ್ಯಮಂತ್ರಿಯವರು ಚಿಕ್ಕಮಗಳೂರಿನಿಂದ ಸಖರಾಯಪಟ್ಟಣಕ್ಕೆ ತೆರಳುವ ಮುನ್ನ ಕುಮಾರಸ್ವಾಮಿ ಅವರಿಗೆ ಅಭಯಹಸ್ತ ನೀಡಿದರು.
ಈ ರೀತಿ ಮುಖ್ಯಮಂತ್ರಿಯವರು ಹೇಳಲು ಕಾರಣ ಇದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಂ.ಪಿ. ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯವರೇ ಅಪಪ್ರಚಾರ ಮಾಡುತ್ತಿದ್ದಾರೆಂಬ ವಿಷಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲಾ ಜಿಲ್ಲಾ ಬಿಜೆಪಿ ವಲಯದಲ್ಲೂ ದಟ್ಟವಾಗಿ ಕೇಳಿಬರುತ್ತಿದೆ. ಇದರ ಹಿಂದಿರುವವರು ಯಾರೆಂಬುದು ಸಹ ಗೊತ್ತಾಗಿದೆ. ಇದು, ತಮ್ಮ ಪಕ್ಷದವರೆ ಮಾಡುತ್ತಿರುವ ಗೇಮ್ ಆಗಿದ್ದರಿಂದ ಕುಮಾರಸ್ವಾಮಿಯವರಿಗೆ ತಲೆ ಬಿಸಿಯಾಗಿದೆ.
ಈ ವಿಷಯ ಮುಖ್ಯಮಂತ್ರಿಯವರ ಕಿವಿಗೂ ಮುಟ್ಟಿದೆ ಎಂಬುದು ಶುಕ್ರವಾರ ಮಾಧ್ಯಮದವರ ಎದುರು ಗಮನಕ್ಕೆ ಬಂದಿತು. ಕುಮಾರಸ್ವಾಮಿಯವರಿಗೆ ಧೈರ್ಯ ಹೇಳಿ ಸಿಎಂ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.