ವಿಜೃಂಭಣೆಯ ಶ್ರೀರಾಮ ಪಟ್ಟಾಭಿಷೇಕ
ಕ.ಪ್ರ.ವಾರ್ತೆ, ಬೀರೂರು, ಏ.29
ಶ್ರೀರಾಮನ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುತ್ಸದ್ದಿ ಎಂ.ವಿ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ರಾಂಪುರ ಬಡಾವಣೆಯ ದಿ. ಕಣಕಟ್ಟೆ ರಾಮಣ್ಣನವರು ನಿರ್ಮಿಸಿರುವ ಶ್ರೀಪಟ್ಟಾಭಿ ರಾಮ ಚಂದ್ರಮೌಳೇಶ್ವರ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮನವಮಿ ಅಂಗವಾಗಿ 9 ದಿನಗಳ ಕಾಲ ಸಂಗೀತ, ಭರತನಾಟ್ಯ, ಮಂಕುತಿಮ್ಮನ ಕಗ್ಗ, ಹರಿಕಥೆ, ಭಜನೆ, ಕೀರ್ತನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಮಾಯಣ ಪಾರಾಯಣ ನವಗ್ರಹ ಜಪ, ಸೂರ್ಯ ನಮಸ್ಕಾರ, ಸೀತಾ ಕಲ್ಯಾಣ, ಗಿರಿಜಾಕಲ್ಯಾಣ, ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ, ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಏಪ್ರಿಲ್ 28 ರ ಭಾನುವಾರ ಬೆಳಿಗ್ಗೆ ರಾಮತಾರಕ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ಅಷ್ಟಾವಧನಾ ಸೇವೆ, ಪ್ರಸಾದ ವಿನಿಯೋಗ ನಡೆಯಿತು.
ರಾಮ ಭಜನೆ: ಸಂಜೆ 7 ಗಂಟೆಯಿಂದ ಶ್ರೀ ರಾಮ ಉತ್ಸವ ಮೂರ್ತಿಯ ಶೋಭಾಯಾತ್ರೆ ಪಟ್ಟಣದ ರಾಜಬೀದಿಗಳಲ್ಲಿ ಸಾಗಿ ಬಂದಿತು.
ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸೀತಾರಾಮ ಮಹಿಳಾ ಮಂಡಳಿ ಸದಸ್ಯರು ನೃತ್ಯದ ಮೂಲಕ ಶ್ರೀ ರಾಮ ಭಜನೆ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ರಾಮನವಮಿಯಲ್ಲಿ 9 ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಋುತ್ವಿಜರಾದ ರತ್ನಾಕರ್ ಹೊಳ್ಳ, ಪದ್ಮನಾಭ ಜೋಯಿಸ್, ಗೋಪಾಲ್, ನಾರಾಯಣ ಶಾಸ್ತ್ರಿ, ನರಸಿಂಹ ಮೂರ್ತಿ, ಸುಧಾಕರ್, ಶಿವರಾಮ ಶಾಸ್ತ್ರಿ ವಹಿಸಿದ್ದರು. ಶ್ರೀರಾಮ ಭಕ್ತ ಮಂಡಳಿ ಅಧ್ಯಕ್ಷೆ ಕೆ.ಜಿ. ಮಂಜುನಾಥ್, ಕಾರ್ಯದರ್ಶಿ ಕೆ.ಎಸ್. ಸೋಮಶೇಖರ್, ಉಪಾಧ್ಯಕ್ಷ ವಿ.ಜಿ. ಒಡೆಯರ್, ಜಯಲಕ್ಷ್ಮೀ ರಾಘವೇಂದ್ರ, ಸುವರ್ಣ ಶಾಸ್ತ್ರಿ, ಸವಿತಮ್ಮ, ಮಾಣಿಕ್ಯಮಾಲ, ಸುಮಾ ಜಗದೀಶ್, ಪುಷ್ಪಲತಾ, ಕಮಲಾ ಪ್ರಕಾಶ್, ಉಷಾ ಕೃಷ್ಣಮೂರ್ತಿ, ಜ್ಯೋತಿ ಅನಂತರಾಮ್, ನಾಗಭೂಷಣ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

