ಕೈದಿಗಳೊಂದಿಗೆ ರಂಜಾನ್ ಆಚರಣೆ
ಚಿಕ್ಕಮಗಳೂರು: ನಗರದ ಸ್ನೇಹಿತರ ಬಳಗವೊಂದು ಬಂದೀಖಾನೆ ಖೈದಿಗಳಿಗೂ ಆಹಾರ ಪೂರೈಸುವ ಮೂಲಕ ರಂಜಾನ್ ಸೇರಿದಂತೆ ಎಲ್ಲಾ ಹಬ್ಬದ ಪವಿತ್ರ ಆಚರಣೆಗಳನ್ನು ಅವರೊಂದಿಗೆ ಹಂಚಿಕೊಂಡು ಬರುತ್ತಿದೆ.
ಕಳೆದ 7 ವರ್ಷಗಳಿಂದ ರಂಜಾನ್ ತಿಂಗಳಲ್ಲಿ ಪ್ರತಿನಿತ್ಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಕಾರಾಗೃಹಕ್ಕೆ ಕೊಂಡೊಯ್ದು ಅಲ್ಲಿನ ಖೈದಿಗಳಿಗೂ ವಿತರಿಸಲಾಗುತ್ತಿದೆ. ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಿಸುವುದು ಸಂಪ್ರದಾಯ.
ವಿವಿಧ ಸಂಘಟನೆಗಳು ಪ್ರತಿವರ್ಷ ಮಸೀದಿಗಳು ಇನ್ನಿತರೆಡೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿವೆ. ಆದರೆ, ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಾಗಿರುವವರು ಇಂತಹ ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಸ್ನೇಹಿತರ ತಂಡ ಅವರಿಗೂ ಸಿದ್ಧಪಡಿಸಿದ ಆಹಾರವನ್ನು ರಂಜಾನ್ ಮಾಸದದಲ್ಲಿ ಪ್ರತಿದಿನವೂ ಎರಡೂ ಹೊತ್ತು ಪೂರೈಸುವ ಮೂಲಕ ಮಾದರಿ ಎನಿಸಿದೆ ಎಂದು ನಜೀರ್ ಅಹಮದ್ ಹೇಳಿದ್ದಾರೆ. ಈ ಕಾರ್ಯದಲ್ಲಿ ನಮ್ಮೊಂದಿಗೆ ಎನ್.ಕೆ. ನಿಸಾರ್ ಅಹಮದ್, ಗುಲ್ಪಾಮ್, ಕೆ.ಜಿ.ಎನ್. ವಾಜಿದ್, ರಿಯಾಜ್ ಮುಜಮಿಲ್ ಸಹಕರಿಸುತ್ತಿದ್ದು ಸಂಘದ ಅಧ್ಯಕ್ಷ ಅಹಮದ್ ಭಾವ ಕೈಜೋಡಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

