ಜನರನ್ನು ದಾಳವಾಗಿ ಬಳಕೆ ಸರಿಯಲ್ಲ
ಕ.ಪ್ರ.ವಾರ್ತೆ, ಕಡೂರು, ಆ.16
ಹಿಂದೆ ಬ್ರಿಟಿಷರು ರಾಜ, ರಾಜರನ್ನೇ ಎತ್ತಿ ಕಟ್ಟಿ ದೇಶವನ್ನು ಕಬಳಿಸಿದರೆ ಇಂದಿನ ರಾಜಕಾರಣಿಗಳು ಜನರನ್ನೇ ಎತ್ತಿಕಟ್ಟುವ ಮೂಲಕ ಜನರನ್ನು ದಾಳವನ್ನಾಗಿ ಮಾಡಿಕೊಳ್ಳುತ್ತಿರುವ ಬೆಳವಣಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಸಿರಿಗೆರೆ ತರಳಬಾಳು ಜಗದ್ಗರು ಡಾ ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದರು.
ಅವರು ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿಯ ಹೊಸಹಳ್ಳಿಯಲ್ಲಿ ಜಿಪಂ ಸದಸ್ಯ ಕಲ್ಮರುಡಪ್ಪನರ ತಂದೆ ಲಿಂಗೈಕ್ಯ ಶರಣ ಕೆ. ಚನ್ನಬಸಪ್ಪನವರ ಶಿವಗಣಾರಾಧನೆ ಮತ್ತು ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಹೆಸರಿಗೆ ಪ್ರಜಾಪ್ರಭುತ್ವ: ನಿಜವಾದ ಪ್ರಜಾತಂತ್ರದ ವ್ಯವಸ್ಥೆಯನ್ನು ನಾವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ಇದ್ದು, ಇಂದಿನ ರಾಜಕಾರಣಿಗಳು ಜನರನ್ನು ಆಟವಾಡಿಸುವ ಮೂಲಕ ತಮ್ಮ ದಾಳಗಳನ್ನಾಗಿ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಇತ್ತೀಚೆಗೆ ಜನರಲ್ಲಿ ಅಂಜಿಕೆ ಮತ್ತು ಭಯ ಇಲ್ಲದಂತಾಗಿ ಕಾನೂನಿನ ಭಯ ಕೂಡ ಇಲ್ಲವಾಗಿದೆ. ಯಾವುದಕ್ಕೂ ಹೆದರದೆ ದುರ್ಗುಣ ಬೆಳೆಸಿಕೊಳ್ಳುತ್ತಿದ್ದು ಮನುಷ್ಯ ತನ್ನ ಆತ್ಮಕ್ಕಾದರೂ ಹೆದರಿ ಪರಿವರ್ತನೆಯಾಗಬೇಕು. ಎಂದರು.
ಜೀವನ ಸಾರ್ಥಕತೆ: ಶಾಸಕ ಸಿ.ಟಿ.ರವಿ ಮಾತನಾಡಿ, ಚನ್ನಬಸಪ್ಪನವರು ಸಮಾಜಕ್ಕೆ ಒಳ್ಳೆಯ ಪುತ್ರ ರತ್ನ ನೀಡಿದ್ದು, ಐಡಿಎಸ್ಜಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿರುವಾಗ ನಡೆದ ಘಟನೆ ಮೆಲುಕು ಹಾಕಿ, ಹಠದ ಸ್ವಭಾವದಿಂದ ನಾನು ಶಾಸಕನಾದರೆ ಅವರು ಜಿಪಂ ಸದಸ್ಯರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಚನ್ಬಸಪ್ಪನವರ ಜೀವನ ಸಾರ್ಥಕತೆ ಪಡೆದಿದೆ ಎಂದರು.
ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಮಾತನಾಡಿ, ಆತ್ಮಶಾಂತಿ ಬಹುಮುಖ್ಯವಾಗಿದ್ದು ಚನ್ನಬಸಪ್ಪನವರು ಸಾರ್ಥಕ ಜೀವನ ನಡೆಸಿ ಸಮಾಜಕ್ಕೆ ಕಲ್ಮರುಡಪ್ಪನವರನ್ನು ಕೊಡುಗೆ ನೀಡಿದ್ದಾರೆ ಎಂದರು. ತರೀಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ತಮ್ಮ ಕುಟುಂಬದಲ್ಲಿ ಒಳ್ಳೆಯ ಸಂಸ್ಕಾರ ಪಡೆದ ಕಲ್ಮರುಡಪ್ಪ ತಮ್ಮ ತಂದೆಯವರಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಉದ್ಘಾಟನೆ: ಲಲಿತಮ್ಮ ಶ್ರೀಕಂಠಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಚಟ್ಟನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಕಲ್ಮರುಡಪ್ಪ ಸ್ವಾಗತಿಸಿದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಪಂ ಸದಸ್ಯರಾದ ಪದ್ಮಾ ಚಂದ್ರಪ್ಪ, ಶಶಿರೇಖಾ ಎಂ.ಆರ್.ಟಿ. ಸುರೇಶ್, ಸವಿತಾ ರಮೇಶ್, ನಿರಂಜನ್, ಮುಖಂಡ
ಎಂ.ಆರ್. ಮರುಳಸಿದ್ದಪ್ಪ, ಬೆಳ್ಳಿ ಪ್ರಕಾಶ್, ಡಿಸಿಎನ್ ಶೇಖರಪ್ಪ, ಮಾರ್ಗದ ಮಲ್ಲಿಕಾರ್ಜುನಪ್ಪ, ಬಸವರಾಜ್, ಇ.ಇ. ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಕುಮಾರಿ ಸಿಂಚನಾ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

