ಚಿಕ್ಕಮಗಳೂರು

ಕಡೂರು- ಚಿಕ್ಕಮಗಳೂರು ರೇಲ್ವೆ ಮಾರ್ಗದಲ್ಲಿ ಹಳಿ ತಪ್ಪಿದ ಎಂಜಿನ್

Published On :

ಕ.ಪ್ರ.ವಾರ್ತೆ   ಚಿಕ್ಕಮಗಳೂರು   ಆ.17
ನಗರಕ್ಕೆ ರೈಲು ಬರಬೇಕೆಂಬ ಹಲವು ದಶಕಗಳ ಕನಸು ನನಸಾಗುವ ಕಾಲ ಸಮೀಪಿಸುತ್ತಿದ್ದು, ಆ ಶುಭ ದಿನ ಎದುರು ನೋಡುತ್ತಿರುವ ಜನತೆಯ ಎದುರು ಅಘಾತಕಾರಿ ಘಟನೆಯೊಂದು ಶನಿವಾರ ನಡೆಯಿತು.
ರೇಲ್ವೆ ಕಾಮಗಾರಿಗಾಗಿ ಜಲ್ಲಿ ತರುತ್ತಿದ್ದ ಎಂಜಿನ್ ಸೇರಿದಂತೆ ಮೂರು ಬೋಗಿಗಳು ಇಲ್ಲಿಗೆ ಸಮೀಪದ ಕಣಿವೆಹಳ್ಳಿ ಬಳಿ ಹಳಿ ತಪ್ಪಿತ್ತು. ಕಡೂರು- ಚಿಕ್ಕಮಗಳೂರು ನೂತನ ರೇಲ್ವೆ ಮಾರ್ಗದ ಹಳಿ ಹಾಕುವ ಕೆಲಸ ಹಾಗೂ ರೇಲ್ವೆ ನಿಲ್ದಾಣ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜನ ವಸತಿ ಪ್ರದೇಶಗಳ ಬಳಿ ಗೇಟ್ ನಿರ್ಮಾಣ ಮಾಡಬೇಕಾಗಿದೆ. ಈ ಕೆಲಸ ಪ್ರಗತಿಯಲ್ಲಿದೆ.
ರೇಲ್ವೆ ಹಳಿ ಹಾಕುವ ಕೆಲಸ ಪೂರ್ಣಗೊಂಡ ಬಳಿಕ ಕಡೂರಿನಿಂದ ಚಿಕ್ಕಮಗಳೂರಿಗೆ ಹಲವು ಬಾರಿ ಎಂಜಿನ್ ಬಂದು ಹೋಗಿದೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯೂ ಆಗಿರಲಿಲ್ಲ. ಆದರೆ ಶನಿವಾರದಂದು ಅರಸೀಕೆರೆಯಿಂದ 12 ಬೋಗಿಗಳಲ್ಲಿ ಚಿಕ್ಕಮಗಳೂರಿಗೆ ಜಲ್ಲಿ ತರುತ್ತಿದ್ದಾಗ ಕಣಿವೆಹಳ್ಳಿ ಬಳಿ ಎಂಜಿನ್ ಸೇರಿದಂತೆ 3 ಬೋಗಿಗಳು ಹಳಿ ತಪ್ಪಿದ್ದವು.  ಇದೇ ಪ್ರಥಮ ಬಾರಿಗೆ ಚಿಕ್ಕಮಗಳೂರು ನಗರಕ್ಕೆ 12 ಬೋಗಿಗಳಲ್ಲಿ ಸರಕು ಸಾಗಣೆ ಮಾಡಲಾಗುತ್ತಿತ್ತು. ಅದುದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.