ಚಿಕ್ಕಮಗಳೂರು

ಪುರಸಭೆ ವಿರುದ್ಧದ ಮೇಲ್ಮನವಿ ವಜಾ

Published On :

ತರೀಕೆರೆ: ಪುರಸಭೆಗೆ ಸೇರಿದ ಜಾಗವನ್ನು ಪಟ್ಟಣದ ರೋಟರಿ ಸಂಸ್ಥೆ ಅನಧಿಕೃತವಾಗಿ ತನ್ನ ವಶದಲ್ಲಿರಿಸಿಕೊಂಡು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪುರಸಭೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ
ವಜಾಗೊಳಿಸಿ ಕೆಳಹಂತದ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.
ಪಟ್ಟಣದ ಕಾಲೇಜು ರಸ್ತೆಯಲ್ಲಿರುವ ಪುರಸಭೆಗೆ ಸೇರಿದ್ದ ಆಸ್ತಿ ನಂಬರು 2933,2742, 140್ಢ130 ಅಡಿ ಜಾಗದಲ್ಲಿ ರೋಟರಿ ಸಂಸ್ಥೆ ತನ್ನ ಕಚೇರಿ ಕಟ್ಟಡ ಹಾಗೂ ಶಾಲೆ ಹೊಂದಿದ್ದು, ಈ ಜಾಗಕ್ಕಾಗಿ ಪುರಸಭೆಯ ವಿರುದ್ಧ ಅಸಲು ದಾವಾ ಹೂಡಿತ್ತು. ನ್ಯಾಯಾಲಯವು ರೋಟರಿ ಸಂಸ್ಥೆಯವರು ಸ್ವತ್ತಿನ ಮಾಲೀಕರೆಂದು ಘೋಷಿಸಲು ಸಾಧ್ಯವಿಲ್ಲವೆಂದು ಪುರಸಭೆಯವರು ಕಾನೂನಾತ್ಮಕವಾಗಿ ತೆರವುಗೊಳಿಸಬಹುದೆಂದು ತೀರ್ಪು ನೀಡಿತ್ತು.
ಈ ತೀರ್ಪಿನ ವಿರುದ್ಧ ಸಂಸ್ಥೆಯವರು ಜಿಲ್ಲಾ ನ್ಯಾಯಲಯದಲ್ಲಿ ಮೇಲ್ಮನವಿ ಸಂಖ್ಯೆ 42, 2009 ರಂತೆ ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದಲ್ಲೂ ಸಂಸ್ಥೆಯವರ ಮೇಲ್ಮನವಿ ವಜಾಗೊಂಡು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಾಗಿತ್ತು. ಈ ತೀರ್ಪಿನ ವಿರುದ್ಧ ಸಂಸ್ಥೆಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಡಿವಿಜನಲ್ ಅಪೀಲು ಸಂಖ್ಯೆ 322,2012 ರಂತೆ ಮೇಲ್ಮನವಿ ಸಲ್ಲಿಸಿದ್ದರು.
ಉಚ್ಚ ನ್ಯಾಯಾಲಯ ಸಂಸ್ಥೆಯವರ ಮೇಲ್ಮನವಿಯನ್ನು ವಜಾ ಗೊಳಿಸಿ ಕೆಳ ಹಂತದ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.