ಚಿಕ್ಕಮಗಳೂರು

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕೊರತೆ

Published On :

ಕ.ಪ್ರ.ವಾರ್ತೆ, ಕಡೂರು,  ಡಿ.9
ಗ್ರಾಮೀಣ ಮಕ್ಕಳು ಪ್ರತಿಭೆ ಮತ್ತು ವಿದ್ಯಾಭ್ಯಾಸದಲ್ಲಿ ನಗರ ಪ್ರದೇಶದ ಮಕ್ಕಳಿಗಿಂತ ಕಡಿಮೆಯಿಲ್ಲ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಕ್ಕಿದರೆ ನಗರ ಪ್ರದೇಶದವರನ್ನೂ ಮೀರಿಸುವ ಸಾಮರ್ಥ್ಯ ಗ್ರಾಮೀಣ ಮಕ್ಕಳಲ್ಲಿದೆ ಎಂದು ತಂಗಲಿ ತಾಲೂಕು ಪಂಚಾಯ್ತಿ ಸದಸ್ಯ ಆರ್.ಶಿವಕುಮಾರ್ ಹೇಳಿದರು.
 ಅವರು ಕಡೂರು ತಾಲೂಕು ಚಿಕ್ಕತಂಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನಡೆದ ಬಿಳುವಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭಾ ಶಕ್ತಿಯನ್ನು ಹೊರತೆಗೆಯುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಿದ್ದರೂ ಕೂಡ ಮಕ್ಕಳಿಗೆ ಮುಖ್ಯವಾಗಿ ಪೋಷಕರ ಪ್ರೋತ್ಸಾಹ ಅತಿ ಮುಖ್ಯ ಎಂದರು.
ಪ್ರೋತ್ಸಾಹ ನೀಡಿ: ಕಾರ್ಯಕ್ರಮ ಉದ್ಘಾಟಿಸಿದ ಯಳ್ಳಂಬಳಸೆ ಜಿ.ಪ. ಸದಸ್ಯೆ ಶಶಿರೇಖಾ ಎಂ. ಆರ್.ಟಿ.ಸುರೇಶ್ ಮಾತನಾಡಿ, ಸರ್ಕಾರವು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆದು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಶಿಕ್ಷಣ ಸಂಯೋಜಕ ಹುನಿಯಾನಾಯ್ಕ, ಗ್ರಾ.ಪ. ಅಧ್ಯಕ್ಷೆ ಶೈಲಾ, ಸದಸ್ಯೆ ನೇತ್ರಮ್ಮ ರಮೇಶ್, ಶಿಕ್ಷಕರಾದ ಓಂಕಾರಪ್ಪ, ಕುಮಾರಸ್ವಾಮಿ, ಸರೋಜ, ದಾನಿ ಪರಮೇಶ್ವರಪ್ಪ, ಶಿಕ್ಷಕಿಯರಾದ ಬಿ.ಎನ್.ಶಾಂತಮ್ಮ,
ಭಾಗ್ಯ, ರೋಹಿಣಿ, ಸಿ.ಆರ್. ಪಿ.ಶಾಂತಪ್ಪ, ಎಸ್ ಡಿ ಎಂಸಿ ಅಧ್ಯಕ್ಷ ಪರಮೇಶ್ವರಪ್ಪ, ಸದಸ್ಯರಾದ ಭದ್ರೇಶ್, ಮರುಳಪ್ಪ, ರುದ್ರೇಶ್, ಗಿರೀಶ್, ನಾಗರಾಜ್, ಮಂಜುನಾಥ್, ಪೋಷಕರು ಹಾಗು ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.