ಕಕ್ಷಿದಾರರಿಗೆ ಸಲಹೆ ನೀಡಿ ವೃತ್ತಿ ಗೌರವಿಸಿ: ನ್ಯಾ.ಪದ್ಮಪ್ರಸಾದ್ ಕರೆ
ಕ.ಪ್ರ.ವಾರ್ತೆ ಮೂಡಿಗೆರೆ ಡಿ.12
ಕಕ್ಷಿದಾರರಿಗೆ ಸರಿಯಾದ ಮಾಹಿತಿ ನೀಡಿ, ನ್ಯಾಯವಾದಿಗಳು ತಮ್ಮ ವೃತ್ತಿ ಗೌರವಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರ.ದ.ನ್ಯಾ ದಂಡಾಧಿಕಾರಿ ಪದ್ಮಪ್ರಸಾದ್ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಮಾನವ ಹಕ್ಕು ದಿನಾಚರಣೆ ಅಂಗವಾಗಿ ವಕೀಲರಿಗೆ ಹಮ್ಮಿಕೊಂಡಿದ್ದ ಕಾನೂನು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕರಣದ ವಾದಗಳು ನಡೆಯುವಾಗ ಆ ಪ್ರಕರಣಗಳ ಬಗ್ಗೆ ವಾದ ವಿವಾದಗಳನ್ನು ಕಿರಿಯ ವಕೀಲರು ಆಲಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ವಕೀಲರಾಗಿ ರೂಪುಗೊಳ್ಳಬಹುದು ಎಂದು ಸಲಹೆ ನೀಡಿದರು.
ನ್ಯಾಯವಾದಿ ಎಂ.ವಿ.ಜಯರಾಜ್ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿ, ವಕೀಲಿ ವೃತ್ತಿಯಲ್ಲಿ ಕಲಿಯುವುದು ಬಹಳಷ್ಟಿದೆ. ಎಲ್ಲಾ ಗೊತ್ತಿದೆ ಎಂದು ಬೀಗುವ ಬದಲು ಕಲಿಯಲು ಸಾಕಷ್ಟಿದೆ ಎಂಬ ಪರಿಜ್ಞಾನ ಹೊಂದಿರಬೇಕು ಎಂದರು.
ನ್ಯಾಯ ಅರಿಸಿ ಬರುವವರಿಗೆ ಸೂಕ್ತ ಸಲಹೆ, ಸಹಕಾರ ನೀಡಿ ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಬೇಕು. ತಾರತಮ್ಯ ಮನೋಭಾವನೆ ದೂರಸರಿಸಬೇಕು. ನ್ಯಾಯದಾನದಲ್ಲಿ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ತೂಗಬೇಕು. ಹಿರಿಯ ವಕೀಲರೊಂದಿಗೆ ಬರೆತು ಅವರ ಮಾರ್ಗದರ್ಶನ ಪಡೆದರೆ ಅಂಥಹ ವ್ಯಕ್ತಿ ಉತ್ತಮ ನ್ಯಾಯವಾದಿಯಾಗಬಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅರುಣ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಉಮೇಶ್, ಕಾರ್ಯದರ್ಶಿ ಬಿ.ಟಿ.ನಟರಾಜ್, ಗೋಪಾಲಗೌಡ, ಲೋಕೇಶ್, ಕೆ.ವಿಶಾಲ, ಕೆ.ಎಂ. ಪ್ರಶಾಂತ್, ಜಯರಾಮ್, ಸಿದ್ದಯ್ಯ, ಡಿ.ಕೆ.ಪ್ರಸನ್ನ, ಬಿ.ಜಗದೀಶ್, ಮೋಹಿತ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

