ಅಹಿಂಸೆ ಸತ್ವಶಾಲಿ ಆಯುಧ: ದೇವಾನಂದ್
ಕ.ಪ್ರ.ವಾರ್ತೆ, ತರೀಕೆರೆ, ಡಿ.12 ಅಹಿಂಸೆ ಒಂದು ಸತ್ವಶಾಲಿ ಆಯುಧ ಎಂದು ನೆಲ್ಸನ್ ಮಂಡೇಲಾ ಅವರು ವಿಶ್ವಕ್ಕೆ ಸಾಧಿಸಿ ತೋರಿಸಿದವರು ಎಂದು ಹಿರಿಯ ಚಿಂತಕ ಆರ್. ದೇವಾನಂದ್ ತಿಳಿಸಿದರು.
ಅವರು, ಗುರುವಾರ ಪಟ್ಟಣದ ಯಶೋಧಮ್ಮ ನಾಗತಿ ಪ್ರೌಢಶಾಲೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನೆಲ್ಸನ್ ಮಂಡೇಲಗೆ ಒಂದು ನುಡಿನಮನ ಕಾರ್ಯಕ್ರಮದಲ್ಲಿ ನೆಲ್ಸನ್ ಮಂಡೇಲ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಗಾಂಧಿ ಪ್ರೇರಿತರು: ನೆಲ್ಸನ್ ಮಂಡೇಲ ಹೋರಾಟದ ಮೂಲಕ ವಿಶ್ವಮಾನವರಾದವರು, ಮಹಾತ್ಮಾಗಾಂಧಿಯವರಿಂದ ಪ್ರೇರಿತರಾದವರು, ಗಾಂಧಿ ಮತ್ತು ಮಂಡೇಲ ಇಬ್ಬರೂ ಅಹಿಂಸಾತ್ಮಕವಾಗಿ ಹೋರಾಡಿದವರು. ಇಬ್ಬರಲ್ಲೂ ಒಂದೇ ಗುಣವಿತ್ತು, ಜನಾಂಗ ಮುಕ್ತಿಗಾಗಿ, ದಾಸ್ಯದಿಂದ ಬಿಡುಗಡೆ ಮಾಡಲು ಹೋರಾಟ ನಡೆಸಿದರು, ಎಲ್ಲರಿಗೂ ಸಮಾನವಾದ ಹಕ್ಕುಗಳು ಲಭ್ಯವಾಗಬೇಕು ಎಂಬುದೇ ಇಬ್ಬರ ಗುರಿಯಾಗಿತ್ತು ಎಂದವರು ತಿಳಿಸಿದರು.
ಎಲ್ಲರಿಗೂ ಉದ್ಯೋಗದ ಹಕ್ಕು ದೊರೆಯಬೇಕು, ಸಮಾನ ಕೆಲಸ, ಸಮಾನ ವೇತನ, ಎಲ್ಲಾ ಪ್ರಜೆಗಳಿಗೆ ಆರೋಗ್ಯ, ಶಿಕ್ಷಣ ದೊರೆಯಬೇಕು ಎಂಬುದಕ್ಕಾಗಿಯೇ ಮಂಡೇಲಾ ಅವಿರತವಾಗಿ ಹೋರಾಡಿದರು ಎಂದು ಅವರು ತಿಳಿಸಿದರು.
ಜೈಲು ಸೇರಿದರು; ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಾಜು ಕಾರ್ಯಕ್ರಮ ಉದ್ಘಾಟಿಸಿ, ನೀತಿ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು. ಮಂಡೇಲಾ ದೇಶದ ಜನರಿಗಾಗಿ ಹೋರಾಡಿ, ಜೈಲು ಸೇರಿದವರು. ನಾವು ಅವರ ಹೋರಾಟದ ಗುಣ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಯುವಕವಿ ದಾದಪೀರ್ ಮಾತನಾಡಿ, ನಾಗರೀಕತೆ ಹೆಚ್ಚು ಬೆಳೆದಂತೆಲ್ಲಾ ಅಸಮಾನತೆ ಅತ್ಯಾಚಾರ ಹೆಚ್ಚಾಗುತ್ತಿದೆ, ಶೋಷಣೆ ಇನ್ನೂ ನಿಂತಿಲ್ಲ ಎಂದರು. ಯಶೋದಮ್ಮ ನಾಗತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಂಚಾಕ್ಷರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ಕವನ ವಾಚಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸುಬ್ರಹ್ಮಣ್ಯ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಲೇಖಕ ತ.ಮ.ದೇವಾನಂದ್, ಪ್ರಕೃತಿ ಶ್ರಿಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್, ಮಧು, ಪೂಜಿತ ಮೊದಲಾದರು ಮಾತನಾಡಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್ ಖಂಡನಾ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು. ಟಿ.ಜಿ. ಸದಾನಂದ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

