ಮಹಿಳೆ ಸಾವು
ಮೂಡಿಗೆರೆ: ಪಟ್ಟಣದ ಬಾಪುನಗರದಲ್ಲಿ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಮಹಿಳೆಯ ತಂದೆ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ, ಆತನ ತಂಗಿ ಮತ್ತು ಭಾವನನ್ನು ಬಂಧಿಸಿದ್ದಾರೆ. ಅನುಮಾನಸ್ಪದ ಸಾವಿಗೀಡಾದ ಮಹಿಳೆ ಸುಧಾ (28) ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಎನ್ಎಂಡಿಸಿ ಕೈಮರದ ಪಿ. ದೋರೈ ಎಂಬುವವರ ಮಗಳಾದ ಸುಧಾ ಮೂಡಿಗೆರೆ ಬಾಪುನಗರದ ವಾಸಿ ಕರಾಟೆ ಮಾಸ್ಟರ್ ರಾಜೇಂದ್ರ ಎಂಬುವವರೊಂದಿಗೆ ಮದುವೆಯಾಗಿದ್ದರು.
ರಾಜೇಂದ್ರ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಪತಿ ರಾಜೇಂದ್ರ, ಆತನ ತಂಗಿ ಬೇಬಿಲತಾ, ಪತಿ ಚಂದ್ರು ಕಾರಣ ಎಂದು ಸುಧಾಳ ತಂದೆ ಪಿ. ದೊರೈ ಲಿಖಿತ ದೂರು ನೀಡಿದ್ದಾರೆ. ವೃತ್ತ ನಿರೀಕ್ಷಕ ಹಿರೇಮಠ್, ರಾಜೇಂದ್ರ, ಬೇಬಿಲತಾ, ಚಂದ್ರ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

