ಚಿಕ್ಕಮಗಳೂರು

ಹಿಂದೂ ದೇವತೆಗಳಿಗೆ ಅವಮಾನ: ಆರೋಪ

Published On :

ಬಾಳೆಹೊನ್ನೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಭದ್ರಾವತಿಯ ಹರಕೆರೆ ಶ್ರೀ ಬಸವೇಶ್ವರ ವೀರಗಾಸೆ ಕಲಾತಂಡ ಏಡ್ಸ್ ಅರಿವು ಕುರಿತು ನಡೆಸಿದ ಬೀದಿ ನಾಟಕದ ಕುರಿತು ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿ. ಕಣಬೂರು ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್‌ಜಿಆರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ನಡೆಸಿದ ಪಾತ್ರದಾರಿಗಳು ಹಿಂದೂ ದೇವರ ವೇಷ ಧರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ತ್ರಿಶೂಲ, ರುದ್ರಾಕ್ಷಿ ಮಾಲೆಯೊಂದಿಗೆ ಈಶ್ವರನ ವೇಷದಲ್ಲಿ ಕಾವಿ ಉಡುಪು ಧರಿಸಿ ನಡುರಸ್ತೆಯಲ್ಲಿ ಏಡ್ಸ್ ತಡೆ ಬಗ್ಗೆ ಬೀದಿ ನಾಟಕ ನಡೆಸಿದ ಕಲಾವಿದರನ್ನು ಸಾರ್ವಜನಿಕರು, ಬಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯೋರ್ವರು ಸಂಘಟನೆಗಳ ಕಾರ್ಯಕರ್ತರೊಂದಿಗೆ ಇದನ್ನು ಸಮರ್ಥಿಸಿಕೊಂಡಿದ್ದು ಸ್ಥಳದಲ್ಲಿದ್ದವರನ್ನು ಮತ್ತಷ್ಟು ಕೆರಳಿಸಿತು.
ಸದಸ್ಯರ ಆಕ್ಷೇಪಣೆಗೆ ಒಪ್ಪಿದ ನಾಟಕ ತಂಡ ಮುಂದೆ ಈ ರೀತಿ ಬೀದಿ ನಾಟಕದಲ್ಲಿ ಹಿಂದೂ ದೇವರುಗಳ ವೇಷ ತೊಡುವುದಿಲ್ಲ ಎಂದು ಭರವಸೆ ನೀಡಿತು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಂಡವನ್ನು ಠಾಣೆಗೆ ಕರೆದೊಯ್ದು ಆಕ್ಷೇಪಾರ್ಹ ವೇಷಗಳನ್ನು ತೊಡದಂತೆ ಸೂಚನೆ ನೀಡಿದರು.
ಬಸ್ ನಿಲ್ದಾಣದ ನಂತರದ ಕೆಳಗಿನಪೇಟೆಯ ಸಂತೆ ವೃತ್ತದಲ್ಲಿ ನಡೆಸಲು ಉದ್ದೇಶಿಸಿದ್ದ ಬೀದಿ ನಾಟಕವನ್ನು ತಂಡ ಕೈಬಿಟ್ಟು ಮಾಗುಂಡಿಗೆ ತೆರಳಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.