ಚಿಕ್ಕಮಗಳೂರು

ನೆಮ್ಮದಿ ಬದುಕಿಗೆ ಕಾನೂನು ಅಗತ್ಯ

Published On :

ಕ.ಪ್ರ.ವಾರ್ತೆ, ತರೀಕೆರೆ, ಡಿ.22
ಮನುಷ್ಯ ಗೌರವದಿಂದ ಬದುಕು ಸಾಗಿಸಲು ಕಾನೂನು ಅತ್ಯಂತ ಅವಶ್ಯಕವಾಗಿದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಹಿದಾಯತ್ ಉಲ್ಲಾ ಷರೀಪ್ ತಿಳಿಸಿದ್ದಾರೆ.
ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ ವತಿಯಿಂದ ಪಟ್ಟಣದ 17ನೇ ವಾರ್ಡ್‌ನ ಖಾಜಿ ಮೊಹಲ್ಲದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೌರ್ಜನ್ಯ, ಬೇರೆಯವರಿಂದ ಆಗುವ ನಷ್ಟ ಇತ್ಯಾದಿಗಳಿಗೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಾನೂನು ನೆರವು ಸಮಿತಿ ವತಿಯಿಂದ ಕಾನೂನು ಸೌಲಭ್ಯ ಪಡೆದುಕೊಳ್ಳಬಹುದು. ಯಾವುದೇ ರೀತಿ ತೊಂದರೆ ಆದಲ್ಲಿ ಕೂಡಲೇ ಕಾನೂನು ನೆರವು ಸಮಿತಿಯವರನ್ನು ಸಂಪರ್ಕಿಸಬಹುದು ಎಂದರು.
ಪುರಸಭೆ ಸದಸ್ಯೆ ಪರ್ವೀನ್ ತಾಜ್ ಮಾತನಾಡಿದರು.
ಕಾರ್ಯಕ್ರಮವನ್ನು ಕಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್, ಓಂಕಾರಮೂರ್ತಿ, ವಕೀಲರಾದ ಮೀರ್ ಸನಾವುಲ್ಲ ಮತ್ತಿತರರು ಮಾತನಾಡಿದರು. ವಕೀಲರಾದ ಅಬ್ದುಲ್ ರಜಾಕ್, ನಾಸಿಯಾ ಪರ್ವೀನ್, ಟಿ.ಆರ್. ಶ್ರೀನಿವಾಸ್, ಮಮತ, ಅಕ್ಬರ್ ಪಾಷ, ಇದ್ರೀಸ್ ಅಸ್ಗರ್ ಶಬನಂ, ಮಹೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.