ಶೋಕಾಚರಣೆ ಕಡೆಗಣಿಸಿ ಬೀದಿ ನಾಟಕ
ಕ.ಪ್ರ.ವಾರ್ತೆ ಕೊಪ್ಪ ಡಿ.24
ಜಿಎಸ್ಸೆಸ್ ನಿಧನದ ಗೌರವಾರ್ಥ ರಾಜ್ಯಾದ್ಯಂತ ಶೋಕಾಚರಣೆಗೆ ಮಂಗಳವಾರ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದ್ದರೂ ಆರೋಗ್ಯ ಇಲಾಖೆ ತರಬೇತಿ ಹಾಗೂ ಬೀದಿ ನಾಟಕವನ್ನು ಹಮ್ಮಿಕೊಂಡು ಅಗಲಿದ ಚೇತನಕ್ಕೆ ಆಗೌರವವನ್ನು ಉಂಟುಮಾಡಿರುವ ಇಲಾಖೆ ಅಧಿಕಾರಿಗಳ ಕ್ರಮದ ಬಗ್ಗೆ ತಾಲೂಕು ಕಸಾಪ ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದರೆ.
ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕ್ರೀಯಾ ಯೋಜನೆಯ ಬಗ್ಗೆ ಆರೋಗ್ಯ ಸಹಾಯಕೀರಿಗೆ ತಾಲೂಕು ವೈದ್ಯದಿಕಾರಿಗಳ ಕಚೇರಿಯ ಆವರಣದಲ್ಲಿ ತರಬೇತಿ ಹಾಗೂ ತಾಲೂಕಿನ ಹರಂದೂರು, ಹೀರೇಕೂಡಿಗೆ ಗ್ರಾಪಂ ಸೇರಿದಂತೆ ವಿವಿಧ ಭಾಗಗಳಲ್ಲಿ ಜಾನಪದ ಕಲಾತಂಡಗಳ ಮೂಲಕ ಏಡ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕವನ್ನು ಹಮ್ಮಿಕೊಂಡಿದ್ದು ಸಾಹಿತ್ಯಾಸಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು.
ಅಧಿಕಾರಿಗಳ ಹಾರಿಕೆ ಉತ್ತರ: ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಕ್ರೀಯಾ ಯೋಜನೆಯ ವರದಿಯನ್ನು ಶೀಘ್ರದಲ್ಲಿ ಮೇಲಾಧಿಕಾರಿಗಳಿಗೆ ಕಳಿಹಿಸಬೇಕಿತ್ತು.
ಅದ್ದರಿಂದ ಇಂದು ತರಬೇತಿಯನ್ನು ಹಮ್ಮಿಕೊಂಡಿದ್ದೇವೆ. ಬೀದಿ ನಾಟಕದ ಕಲಾವಿದರು ಪಟ್ಟಣಕ್ಕೆ ಬಂದಿದ್ದರು, ಅದ್ದರಿಂದ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹಾರಿಕೆಯ ಉತ್ತರವನ್ನು ನೀಡಿದರು.
ಅದರೆ ಕ್ರೀಯಾ ಯೋಜನೆಯ ಮಾಹಿತಿ ಮೇಲಾಧಿಕಾರಿಗಳಿಗೆ ಕಳುಹಿಸಲು ಕೊನೆಯ ದಿನಾಂಕ ಡಿ.30. ಅದ್ದರಿಂದ ತರಬೇತಿ ಹಾಗೂ ಬಿದೀ ನಾಟಕವನ್ನು ಒಂದು ದಿನ ಮುಂದೂಡಬಹುದಾಗಿತ್ತು ಎಂಬುದು ಸಾಹಿತ್ಯಾಸಕ್ತರ ವಾದ. ಇಷ್ಟೇಲ್ಲಾ ಕಾಳಜಿಯನ್ನು ತೋರುವ ಅಧಿಕಾರಿಗಳು ಭಾನುವಾರ ಸೇರಿದಂತೆ ಇತರೆ ರಜೆ ದಿನಗಳಲ್ಲಿ ಅರ್ಧ ದಿನ ಸರ್ಕಾರಿ ಆಸ್ಪತ್ರೆಯ ಎಲ್ಲಾ ವಿಭಾಗಳಲ್ಲಿ ಕಾರ್ಯನಿರ್ವಸಲು ಏಕೆ ನಿರಾಸಕ್ತಿ ತೋರುತ್ತಾರೆ ಎಂದು ಕರವೇ ನಗರಧ್ಯಕ್ಷ ಗುಂಡಣ್ಣ ಪ್ರಶ್ನೀಸಿದ್ದಾರೆ.
ತಾ.ಕಸಾಪ ಖಂಡನೆ: ತಾಲೂಕು ಕಸಾಪದ ಅಧ್ಯಕ್ಷ ಗುಡ್ಡೇತೋಟ ನಟರಾಜ್ ಪ್ರತಿಕ್ರಿಯೆ ವ್ಯಕ್ತಪಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಸೇವೆ ಸಲ್ಲಿಸಿ ರಾಷ್ಟ್ರ ಕವಿ ಎಂಬ ಬಿರುದನ್ನು ಪಡೆದುಕೊಂಡು ರಾಜ್ಯಕ್ಕೆ ಹೆಗ್ಗಳಿಕೆಯನ್ನು ತಂದುಕೊಟ್ಟಂತಹ ಜಿಎಸ್ಸ್ಸ್ ಅವರ ನಿಧನಕ್ಕೆ ಗೌರವ ಸಲ್ಲಿಸಬೇಕಾದ್ದು ಕನ್ನಡಿಗರ ಕರ್ತವ್ಯ.
ಇದಕ್ಕಾಗಿಯೇ ಸರ್ಕಾರಿ ರಜೆ ಘೋಷಣೆ ಮಾಡಿರುವ ಸಮಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಖಂಡನೀಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

