ಚಿಕ್ಕಮಗಳೂರು

ಭದ್ರಾ ಯೋಜನೆಯಿಂದ ತೊಂದ್ರೆ ಆಗದು

Published On :

ಕ.ಪ್ರ.ವಾರ್ತೆ, ತರೀಕೆರೆ, ಡಿ. 25
ಭದ್ರಾ ಮೇಲ್ದಂಡೆ ಯೋಜನೆಯಿಂದ ಇಲ್ಲಿಯ ಜನರಿಗೂ ನೀರು ಕೊಟ್ಟು ನಮಗೂ ನೀರು ತೆಗೆದುಕೊಂಡು ಹೋಗಲಾಗುವುದು. ಇಲ್ಲಿನ ರೈತರು ಆತಂಕಪಡುವುದು ಬೇಡ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಬುಧವಾರ ತಾಲೂಕಿನ ಬೆಟ್ಟದಾವರೆಕೆರೆ, ಜಂಬದಹಳ್ಳ ಜಲಾಶಯ, ಶಾಂತಿಪುರ ಹಾಗೂ ಸಿದ್ದರಹಳ್ಳಿ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಡನೆ ಮಾತನಾಡಿದರು.
ಮಹತ್ವಾಕಾಂಕ್ಷೆಯ ಯೋಜನೆ: ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನದ ನಡುವೆ ರಾಜ್ಯದ ಬರಡು ಪ್ರದೇಶ, ಬಂಜರು ಭೂಮಿಗಳಿಗೆ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳಿಗೆ ಕನಿಷ್ಠ ಪಕ್ಷ ಕುಡಿಯುವ ನೀರನ್ನಾದರೂ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಶಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದರು.
ಬರಪೀಡಿತ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸುವ ಕನಸು ಕಂಡು ಹಂಬಲಿಸಿದವರು ದಿ. ನಿಜಲಿಂಗಪ್ಪನವರು. ಅಲ್ಲದೆ, ಈ ಭಾಗದ ಜನರ ಬಹುದಿನದ ಬೇಡಿಕೆಯೂ ಚಿತ್ರದುರ್ಗ ಮೊಳಕಾಲ್ಮುರು, ಚಳ್ಳಕೆರೆ ಮತ್ತು ಹೊಸದುರ್ಗ ಭಾಗಗಳಲ್ಲಿ ಅಲ್ಲಿಯ ಜನರು ಕುಡಿಯುವ ನೀರಿನ ತತ್ವಾರ ಎದುರಿಸುತ್ತಿದ್ದಾರೆ.
ಕೊಳವೆ ಬಾವಿಗಳಲ್ಲಿ ಫ್ಲೊರೈಡ್ ಆಂಶ ಹೆಚ್ಚಾಗಿ ಅನೇಕ ಕಾಯಿಲೆಗಳಿಂದ  ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಭಾಗದ ಜನರಿಗೆ ನೀರನ್ನು ಒದಗಿಸಿ, ಅಲ್ಲಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ಆರಂಭಿಸಿದೆ ಎಂದು ತಿಳಿಸಿದರು.
ಯೋಜನೆ ಕಾರ್ಯಗತ: ರಾಷ್ಟ್ರೀಯ ಯೋಜನೆ- ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಪ್ರಸ್ತುತ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುತ್ತೇವೆ. ನಮ್ಮ ಅಧಿಕಾರ ಅವಧಿಯಲ್ಲೇ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು.
ಯೋಜನೆಯಲ್ಲಿ ಕೆಲವು ಲೋಪ- ದೋಷಗಳು, ಅಡಚಣೆ ಆತಂಕ ಇದೆ. ಇವುಗಳಲ್ಲಿ ಮುಖ್ಯವಾದುದು ಅರಣ್ಯಭೂಮಿ. ಸರ್ಕಾರ ಅರಣ್ಯಭೂಮಿಗೆ ಪರ್ಯಾಯವಾಗಿ ಭೂಮಿ ನೀಡಿದೆ. ಅಡೆತಡೆ ಇಲ್ಲದೆ ಕಾಮಗಾರಿ ನಿರಾತಂಕವಾಗಿ ನಡೆಯಬೇಕು. ಇಲ್ಲಿಯ ಜನರಿಗೂ ನೀರನ್ನು ಕೊಟ್ಟು ನಮಗೂ ನೀರನ್ನು ತೆಗೆದುಕೊಂಡು ಹೋಗಲಾಗುವುದು. ಇಲ್ಲಿನ ರೈತರು ಆತಂಕಪಡುವುದು ಬೇಡ ಎಂದರು.
ಕಾಂಗ್ರೆಸ್ ಮುಖಂಡ ಬಿ.ಎನ್.ಚಂದ್ರಪ್ಪ ಅವರು, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಶಾಸಕರಾದ ರಘುಮೂರ್ತಿ, ಡಿ. ಸುಧಾಕರ್, ಗೋವಿಂದಪ್ಪ, ಹೋರಾಟ ಸಮಿತಿಯ ಜಯಣ್ಣ, ಒಡೆಯರ್, ಮತ್ತಿತರ ಮುಖಂಡರನ್ನು ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.