ಚಿಕ್ಕಮಗಳೂರು

ಜ.2ರಂದು ರಾಮಚಂದ್ರಾಪುರ ಶ್ರೀಗಳಿಗೆ ಗುರುವಂದನೆ

Published On :

ಚಿಕ್ಕಮಗಳೂರು: ನಗರದ ಹವ್ಯಕ ಬಳಗದ ಆಶ್ರಯದಲ್ಲಿ ಜ.2ರಂದು ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಜಿ ಅವರಿಗೆ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ನಗರದ ಕೆಂಪನಹಳ್ಳಿ ರಸ್ತೆಯಲ್ಲಿರುವ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಗೆ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಎಚ್. ನಟರಾಜ್ ಅಧ್ಯಕ್ಷತೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಭಾಗವಹಿಸುವರು. ಬೆಂಗಳೂರಿನ ಆಧ್ಯಾತ್ಮ ಚಿಂತಕಿ ವಿದುಷಿ ಡಾ. ವಿ.ಬಿ. ಆರತಿ ಹಿಂದೂ ಸಂಸ್ಕೃತಿ ಹಾಗೂ ಗುರು ಪರಂಪರೆ ವಿಷಯ ಕುರಿತು ಉಪನ್ಯಾಸ ಮಾಡಲಿದ್ದಾರೆ.
ಶ್ರೀಗಳು ನಗರಕ್ಕೆ ಜ.1ರಂದು ಸಂಜೆ 5 ಗಂಟೆಗೆ ಉಪ್ಪಿನಂಗಡಿಯಿಂದ ಆಗಮಿಸುವರು. ಅವರನ್ನು ಗಾಯತ್ರಿ ಕಲ್ಯಾಣ ಮಂಟಪದ ಎದುರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದು ಹವ್ಯಕ ಬಳಗದ ಕಾರ್ಯಾಧ್ಯಕ್ಷ ಕೆ. ಗಣೇಶ್‌ಕುಮಾರ್ ತಿಳಿಸಿದ್ದಾರೆ. ನಂತರ ಶ್ರೀಗಳು ಸಂಜೆ 6.45ಕ್ಕೆ ಶ್ರೀರಾಮದೇವರ ಪೂಜೆ ಕೈಗೊಳ್ಳುವರು.
ಮರುದಿನ ಬೆಳಗ್ಗೆ 9 ಗಂಟೆಗೆ ಶ್ರೀರಾಮದೇವರ ಪೂಜೆ ನಡೆಸುವ ಶ್ರೀಗಳು ನಂತರ ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅದೇ ದಿನ ಬೆಳಗ್ಗೆ ಶ್ರೀರಾಮ ಪೂಜೆ ನಂತರ ಆಸಕ್ತ ಭಕ್ತರು ಪಾದಪೂಜೆ ನೆರವೇರಿಸಲು ಕಲ್ಯಾಣ ಮಂಟಪದಲ್ಲೇ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ವಿವರಗಳಿಗೆ ಮೊ- 94481-23086 ಮೂಲಕ ಸಂಪರ್ಕಿಸಬಹುದು. ಶ್ರೀಗಳು ಸಾರ್ವಜನಿಕರಿಗೆ ಫಲಮಂತ್ರಾಕ್ಷತೆ ವಿತರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.