ಚಿಕ್ಕಮಗಳೂರು

ಸಪ್ತನದಿಗಳ ಗಂಗಾಪೂಜಾ ಮಹೋತ್ಸವ

Published On :

ಚಿಕ್ಕಮಗಳೂರು: ಉತ್ತರ ಭಾರತದ ವಿಶಿಷ್ಟ ಸಂಪ್ರದಾಯಗಳಲ್ಲೊಂದಾದ ಗಂಗಾನದಿ ಪವಿತ್ರ ಸಪ್ತನದಿಗಳ ಗಂಗಾಪೂಜಾ ಮಹೋತ್ಸವ ನಗರದ ಪ್ರಭು ಬೀದಿಯ ಜಯಲಕ್ಷ್ಮೀ ನಿವಾಸದಲ್ಲಿ ಶುಕ್ರವಾರ ವೈಭವದಿಂದ ಜರುಗಿತು.
ಉತ್ಸವದ ಹಿನ್ನೆಲೆಯಲ್ಲಿ ಕೆ.ಹೆಚ್. ವಸಂತ್ ಕುಮಾರ್ ಕುಟುಂಬ ವರ್ಗ, ಮಾನಸ ಸರೋವರ ಗಂಗೋತ್ರಿ ತ್ರಯಂಬಕೇಶ್ವರ ಸೇರಿದಂತೆ ಸಪ್ತನದಿಗಳ ಉಗಮ ಸ್ಥಾನಗಳಿಗೆ ತೆರಳಿ ಅಲ್ಲಿಂದ ತಂದಿದ್ದ ಪವಿತ್ರ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ಪುಣ್ಯನದಿಗಳ ಜಲವನ್ನು ಕಳಸಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಗಂಗಾಪೂಜೆಗಾಗಿ ವಿಶೇಷವಾಗಿ ತಯಾರಿಸಲಾಗಿದ್ದ 4 ಅಡಿ ಎತ್ತರದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ಮಾತೆಯ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ರುದ್ರಪಾರಾಯಣ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.
ಗಂಗಾಪೂಜೆ ಅಂಗವಾಗಿ ಸಪ್ತನದಿಗಳ ದೇವತೆಗಳಿಗೆ ಮತ್ತು 7 ಜನ ಮುತ್ತೈದೆಯರಿಗೆ ಬಾಗಿನವನ್ನು ಸಮರ್ಪಿಸಲಾಯಿತು. ನಂತರ ಉತ್ತರ ಭಾರತದ ಸಂಪ್ರದಾಯದಂತೆ ಸಾಮೂಹಿಕವಾಗಿ ಗಂಗಾರತಿಯನ್ನು ಮಾಡಲಾಯಿತು.
ಪವಿತ್ರ ಸಪ್ತನದಿಗಳ ಕುರಿತು ರಚಿಸಲಾದ ಸಪ್ತಸರಿತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮಹಾಮಂಗಳಾರತಿ ನಂತರ ಸಾರ್ವಜನಿಕರಿಗೆ ಸಪ್ತನದಿಗಳ ತೀರ್ಥವನ್ನು ವಿತರಿಸಲಾಯಿತು. ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಉತ್ತರ ಭಾರತದ ವಿಶಿಷ್ಟ ಸಂಪ್ರದಾಯ ನಗರದಲ್ಲಿ ಇದೇ ಮೊದಲ ಬಾರಿಗೆ ನಡೆದ ಹಿನ್ನೆಲೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಸಹಸ್ರಾರು ಜನ ಜಯಲಕ್ಷ್ಮೀ ನಿವಾಸಕ್ಕೆ ತೆರಳಿ ಪೂಜಾ ಕೈಂಕರ್ಯವನ್ನು ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.