ಚಿಕ್ಕಮಗಳೂರು

ಎನ್ನೆಸ್ಸೆಸ್ ಶಿಬಿರ ಸಮಾರೋಪ

Published On :

ಚಿಕ್ಕಮಗಳೂರು: ಸಮಾಜಮುಖಿ ಕೆಲಸಕ್ಕೆ ಶಿಬಿರ ಅನುಭವ ಹಾಗೂ ಪ್ರೇರಣೆ ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.  
ತಾಲೂಕಿನ ನರಗನಹಳ್ಳಿಯಲ್ಲಿ ಸೋಮವಾರ ಮುಕ್ತಾಯಗೊಂಡ ಮೌಂಟೆನ್‌ವ್ಯೂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರ ಗ್ರಾಮೀಣ ಪರಿಸರದಲ್ಲಿ ನಡೆದು ವಿದ್ಯಾರ್ಥಿಗಳಿಗೆ ಹೊಸ ಅನುಭವ ಮತ್ತು ಇಚ್ಛಾಶಕ್ತಿಯನ್ನು ಗಳಿಸಿಕೊಟ್ಟಿದೆ ಎಂದರು.
ಸ್ನೇಹ, ವಿಶ್ವಾಸ ಮುಖ್ಯ: ಮಾನವೀಯ ಸಂಬಂಧ ಕಳೆದುಕೊಂಡರೆ ಬುದ್ಧಿವಂತಿಕೆಗಾಗಲಿ ಬದುಕಿಗಾಗಲಿ ಅರ್ಥವಿಲ್ಲ. ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಭಾರತದಲ್ಲಿ ಕುಟುಂಬದ ಒಳಗಿನ ಸಂಬಂಧಗಳೇ ಇಂದು ಜಾಳಾಗುತ್ತಿವೆ. ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಭ್ರಾತೃತ್ವ ಬೆಸೆಯುವ ಕೆಲಸ ಇಂದಿನ ಅಗತ್ಯ ಎಂದು ಹೇಳಿದರು.
ಬದುಕು ರೂಪಿಸಿಕೊಳ್ಳಿ: ಮೌಂಟೆನ್ ವ್ಯೂ ಶಿಕ್ಷಣಸಂಸ್ಥೆ ಕಾರ್ಯದರ್ಶಿ ಹಬೀಬಾ ಎನ್. ಪಾಷ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಓದುವುದೇ ಇರಲಿ, ಶ್ರಮದಾನವೇ ಇರಲಿ ಮಾಡುವ ಕೆಲಸದಲ್ಲಿ ಶ್ರದ್ಧೆ, ಸಂತೋಷ ಇದ್ದರೆ ಪರಿಣಾಮಕಾರಿಯಾಗಿರುತ್ತದೆ. ಮತ್ತೊಬ್ಬರಿಗೆ ಸಾಧ್ಯವಾದಷ್ಟು ನೆರವು ನೀಡಿ, ಸಮಾಜಕ್ಕೆ ಉಪಕಾರಿಯಾಗಿ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಬಹುಮಾನ ವಿತರಿಸಿದ ಪ್ರಾಂಶುಪಾಲೆ ಟಿ.ಎಂ. ದೇವಿಕಾ ಮಾತನಾಡಿದರು. ಜಿಪಂ ಸದಸ್ಯ ಜೆ.ಡಿ. ಲೋಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರೇಕೊಳಲೆ ಗ್ರಾ.ಪಂ. ಅಧ್ಯಕ್ಷ ಎನ್.ಬಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಬಿರಾಧಿಕಾರಿ ಕೆ.ಎಸ್. ಅಶೋಕ್ ಸ್ವಾಗತಿಸಿ, ಅಕ್ಬರ್ ಕಾರ್ಯಕ್ರಮ ನಿರೂಪಿಸಿ, ಪ್ರಸನ್ನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.