ಗಿಡಮೂಲಿಕೆ ಔಷಧಿ ಸಂರಕ್ಷಣೆ ಅಗತ್ಯ
ಜೋಗ್ಫಾಲ್ಸ್: ಹಲವು ರೀತಿಯ ಅತಿ ಅಮೂಲ್ಯವಾದ ಔಷಧೀಯ ಸಸ್ಯಗಳು ಹಳ್ಳಿಗಳಲ್ಲಿ ಲಭ್ಯವಿದ್ದು, ಅದನ್ನು ಸಂರಕ್ಷಿಸುವ ಬಗ್ಗೆ ಗ್ರಾಮೀಣರಿಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಬೇಕಿದೆ. ಮಲೆನಾಡಿನಲ್ಲಿ ಅಪೂರ್ವವಾದ ಗಿಡಮೂಲಿಕೆಗಳು, ಔಷಧೀಯ ಸಸ್ಯಗಳು ಹೇರಳವಾಗಿದ್ದು, ಇದರ ಬಗ್ಗೆ ಸಂಶೋಧನೆ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ್ತಜ್ಞ ಡಾ. ಸೋಮಶೇಖರ್ ಆಚಾರ್ ತಿಳಿಸಿದರು.
ಅವರು ಇತ್ತೀಚಿಗೆ ಅರಳಗೋಡಿನ ರಂಗಮಂದಿರದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಕಾರ್ಗಲ್ ವಲಯ ಹಾಗೂ ಪಂಚವಟಿ ರಿಸರ್ಚ್ ಅಕಾಡೆಮಿ ಫಾರ್ ನೇಚರ್ ಕಾಳಮಂಜಿ, ಲಿಂಗನಮಕ್ಕಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಹಸಿರು ಆರೋಗ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಗಿಡಮೂಲಿಕೆಗಳ ಬಗ್ಗೆ ಸಾಕಷ್ಟು ಮಾಹಿತಿ ಕೊರತೆಯಿಂದ ಹಳ್ಳಿಗರು ಕಟ್ಟಿಗೆಗೆ, ದನದ ಕೊಟ್ಟಿಗೆಗೆಂದು ಸೊಪ್ಪು ಸಂಗ್ರಹಿಸಲು ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಅವ್ಯಾಹತವಾಗಿ ನಾಶ ಪಡಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಗಿಡ ಗಿಡಮೂಲಿಕೆಗಳ ಗುರುತಿಸುವಿಕೆ, ಮಹತ್ವ ಅವುಗಳ ವೈಜ್ಞಾನಿಕ ಹಿನ್ನೆಲೆ, ಗಿಡಮೂಲಿಕೆಗಳ ಕೃಷಿ ಮಾರುಕಟ್ಟೆ, ಬಗೆಗೆ ಮಾಹಿತಿ ನೀಡಿದರು.
ಸಹಕಾರ ಅಗತ್ಯ: ವೃಕ್ಷ ಲಕ್ಷ ಆಂದೋಲನದ ಗೋಪಾಲಕೃಷ್ಣ ಮಾತನಾಡಿ, ಸಾರ್ವಜನಿಕರ ಸಹಕಾರವಿದ್ದಾಗ ಮಾತ್ರ ಹೆಚ್ಚು ಗಿಡ ಬೆಳೆಸಿ ಪೋಷಿಸಲು ಸಾಧ್ಯ. ಇದರ ಬಗ್ಗೆ ಜನರಲ್ಲಿ ಒಲವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಅರಳಗೋಡು ಗ್ರಾಪಂ ಉಪಾಧ್ಯಕ್ಷೆ ಪುಟ್ಟಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

