ದೇವತೆಗಳ ಪುನರ್ ಪ್ರತಿಷ್ಠಾಪನೆ
ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿಯ ಕೆಳಬನದ 1600 ವರ್ಷಗಳ ಇತಿಹಾಸ ಹೊಂದಿರುವ ಅಜ್ಜಮ್ಮ, ದೇವಿರಮ್ಮ, ಕುಮಾರಸ್ವಾಮಿ, ಸುಗ್ಗಿ ಅಮ್ಮ ಹಾಗೂ ಚಿಕ್ಕಮ್ಮ ಕೆಳಬನ ದೇವತೆಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮಖದಲ್ಲಿ ನೆರವೇರಿತು.
ಆರ್.ಡಿ. ಕೊಪ್ಪದ ವೇದ ಬ್ರಹ್ಮ ಸುಭ್ರಮಣ್ಯ ಭಟ್ ಮತ್ತು ತಂಡದವರಿಂದ ಅಜ್ಜಮ್ಮ ಪರಿವಾರ ಸನ್ನಿಧಿಯಲ್ಲಿ ಮಹಾಗಣಪತಿ ಪೂಜೆ ಪುಣ್ಯವಾಚನ, ಮಹಾಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ ಸ್ತೋತ್ರ ಬಂಧನ, ಪಂಚಗವ್ಯ, ಆದಿವಾಸ, ಆದಿವಾಸ ಹೋಮ, ಸುದರ್ಶನ ಹೋಮ, ವಾಸ್ತುಹೋಮ, ಪ್ರಕಾರ ಬಲಿ, ಅಷ್ಟಕ ಬಲಿ, ಶಯದ್ರಿವಾಸ ಪೂಜೆಗಳು ನೆರವೇರಿತು.
ಇದೇ ಸಂದರ್ಭದಲ್ಲಿ ಊರಿನ ಪಟೇಲರಾದ ಬಾಳೂರು ಸುಬ್ರಯಗೌಡರನ್ನು ಸನ್ಮಾನಿಸಲಾಯಿತು. ದೇವಾಲಯ ಪುನರ್ ಪ್ರತಿಷ್ಠಾಪನೆಗೆ ಕೈಜೋಡಿಸಿದ ಭಕ್ತರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಬಿ.ಎಸ್. ರಘು, ಶಾಸಕ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಬಿ.ಎಸ್. ಅನುಪ್ ಕುಮಾರ್, ಬಿ.ಆರ್. ಬಾಲಕೃಷ್ಣ, ಬಿ.ಎಂ.ನಟೇಶ್, ಬಿ.ಎಸ್. ಶಿವಶಂಕರ್, ಬಿ.ಎಂ.ನಾಗೇಶ್, ಬಿ.ಎಸ್. ಲಕ್ಷ್ಮಣ್, ಬಿ.ಎಂ. ಭರತ್, ಜಿಪಂ ಸದಸ್ಯ ಅರೇಕುಡಿಗೆ ಶಿವಣ್ಣ, ಬಿ.ಎಸ್. ಅನೂಪ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

