ಚಿಕ್ಕಮಗಳೂರು

ಯಶಸ್ವಿನಿ ನೀರಿನ ಘಟಕ ಉದ್ಘಾಟನೆ

Published On :

ಕಡೂರು: ಪಟ್ಟಣದ ಕೆ. ಹೊಸಹಳ್ಳಿ ಚಿಕ್ಕಂಗಳ ರಸ್ತೆ ಪಕ್ಕದಲ್ಲಿ ಯಶಸ್ವಿನಿ ಚಾರಿಟಬಲ್ ಟ್ರಸ್ಟ್‌ನಿಂದ ಆರಂಭಿಸಲಾಗಿರುವ ಯಶಸ್ವಿನಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತರೀಕೆರೆ ತಾಲೂಕು ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ವಿಶುಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಾಮಾಜಿಕವಾಗಿ ಸೇವೆ ಮಾಡುವ ಒಳ್ಳೆಯ ಉದ್ದೇಶದಿಂದ ಆರಂಭಿಸಲಾಗಿರುವ ಯಶಸ್ವಿನಿ ಚಾರಿಟಬಲ್ ಟ್ರಸ್ಟ್ ಹಲವು ದಿನಗಳಿಂದ ನಿರಂತರವಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದು, ಪರಿಸರ ಸ್ವಚ್ಛತೆ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ, ಶಾಲಾ ಕಾಲೇಜುಗಳ ಬೇಲಿ ನಿರ್ಮಾಣ ಸೇರಿದಂತೆ ಸಮಾಜಕ್ಕೆ ಉಪಯುಕ್ತವಾಗುವ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ನೀರಿನ ಘಟಕ ಆರಂಭ: ಬರಗಾಲದಿಂದ ಜನರಿಗೆ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿ ಜನರಿಗೆ ಶುದ್ಧ ನೀರು ನೀಡಲು ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಇಂತಹ ಉತ್ತಮ ಕಾರ್ಯಕ್ಕೆ ಜನರಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.    
ಮುಖಂಡ ಕೆ.ಎಚ್. ಶಂಕರ್ ಮಾತನಾಡಿ, ಕಡೂರು ತಾಲೂಕು ಹಾಗೂ ಕಡೂರಿನ ನೀರಿನ ಬವಣೆ ಅರಿತ ಟ್ರಸ್ಟ್ ಸೇವಾ ಮನೋಭಾವದಿಂದ ಶುದ್ಧನೀರು ವಿತರಿಸುವ ಈ ಘಟಕವನ್ನು ಟ್ರಸ್ಟ್‌ನಿಂದ ಆರಂಭಿಸಿ ಸೇವೆಗೆ ಮುಂದಾಗಿದೆ. ಈ ಘಟಕವನ್ನು ಟ್ರಸ್ಟ್‌ನ ಪದಾಧಿಕಾರಿ ರಾಕೇಶ್ ಉತ್ತಮವಾಗಿ ನಿರ್ವಹಿಸಿ ಇನ್ನಷ್ಟು ಸಮಾಜ ಉಪಯೋಗಿ ಕೆಲಸಗಳನ್ನು ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿ ಎಚ್.ಜಿ. ಓಂಕಾರಪ್ಪ, ತರೀಕೆರೆ ಮುಖಂಡರಾದ ನಾಗರಾಜ್, ಹಾಜಿ ಮಸ್ತಾನ್, ಕೆ.ವಿ. ವಾಸು, ಮಂಜುನಾಥ್, ಜಿ. ಸೋಮಯ್ಯ, ಮಲ್ಲಿಕಾರ್ಜುನ್, ಚನ್ನಯ್ಯ, ಶಿವಶಂಕರ್, ಕುಮಾರ್, ಮಂಜುನಾಥ್, ಅವಿನಾಶ್ ಮೊದಾದವರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.