ಚಿಕ್ಕಮಗಳೂರು

ಸು.ಗ್ರಾ ಯೋಜನೆಗೆ 17 ಹಳ್ಳಿ ಆಯ್ಕೆ

Published On :

ತರೀಕೆರೆ: ಸುವರ್ಣ ಗ್ರಾಮ ಯೋಜನೆಗೆ ಹೊಸದಾಗಿ 17 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಅವರು ಬುಧವಾರ ಸಮೀಪದ ಬೆಟ್ಟದಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಬಸ್ ನಿಲ್ದಾಣದ ಉದ್ಘಾಟನೆ  ನೆರವೇರಿಸಿ ಮಾತನಾಡಿದರು.
ಸುವರ್ಣ ಗ್ರಾಮ ಯೋಜನೆಗೆ ಬೆಟ್ಟದಹಳ್ಳಿ ಗ್ರಾಮ  ಸೇರಿಸಬೇಕೆಂಬ ಬಹಳ ವರ್ಷದ ಬೇಡಿಕೆ ಈಡೇರಿದಂತಾಗಿದೆ. ಯೋಜನೆಯಡಿ ರು. 45 ಲಕ್ಷ ಮಂಜೂರಾಗಿದೆ. ಯೋಜನೆಗೆ ಒಳಪಡುವುದರಿಂದ ಗ್ರಾಮದಲ್ಲಿ  ಶೇ.70ರಷ್ಟು ರಸ್ತೆ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸಬಹುದು. ಬೇರೆ ಬೇರೆ ಯೋಜನೆಗಳಲ್ಲಿ ನೆರವು ಪಡೆದುಕೊಂಡು ಉಳಿದ ರಸ್ತೆಗಳನ್ನು ಅಭಿವೃದ್ಧಿ ಮಾಡಬಹುದು  ಎಂದು ತಿಳಿಸಿದರು.
ಕೆರೆ ಸೇರ್ಪಡೆ: ರು. 4 ಲಕ್ಷಗಳಲ್ಲಿ ಗ್ರಾಮದ ಕೆರೆಗೆ ರಿವಿಟ್‌ಮೆಂಟ್ ಮಾಡಿಸಲಾಗುವುದು, ಹೊಸಕರೆಗೆ ನೀರು ತುಂಬಿಸಿದರೆ ಭೂಮಿಯ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಗ್ರಾಮದ  ಕೆರೆಗೆ ನೀರು ಹಾಯಿಸಲಾಗುವುದು. ನಾಲ್ಕು ಬೋರ್‌ವೆಲ್ ಕೊರೆಸಿದರೂ ನೀರು ಸಿಕ್ಕಿಲ್ಲ. ಕುಡಿಯುವ ನೀರಿನ  ಸಮಸ್ಯೆ ಇರುವ ತಾಲೂಕಿನ ಗ್ರಾಮಗಳ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಅಧಿಕಾರಿಗಳಿಗೆ  ಸೂಚಿಸಲಾಗಿದೆ. ಶೀಘ್ರ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಪಂ ಸದಸ್ಯ ಕೆ.ಆರ್. ಆನಂದಪ್ಪ ಮಾತನಾಡಿ, ರು. 450 ಕೋಟಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು  ತಾಲೂಕಿನಾದ್ಯಂತ ನಿರ್ವಹಿಸಲಾಗಿದೆ. ತಾಂಡ್ಯ ಮತ್ತಿತರ ಕಡೆ ರಸ್ತೆ, ಸಮುದಾಯ ಭವನ ಇತ್ಯಾದಿ ಹಲವಾರು  ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ನಿರ್ವಹಿಸಿದ್ದಾರೆ. ದೊಡ್ಡ ಮಟ್ಟದ ಸಹಕಾರ ಅಗತ್ಯ ಎಂದು ತಿಳಿಸಿದರು.
ಪ್ರತಿ ಜಿಪಂನ 4 ಹಳ್ಳಿಗಳು: ತಾಪಂ ಅಧ್ಯಕ್ಷೆ ದೀಪಾ ಉಮೇಶ್ ಮಾತನಾಡಿ, ಪ್ರತಿ ಜಿಪಂ ಕ್ಷೇತ್ರಗಳಿಂದ 4 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮೆಹಬೂಬ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ  ಕಮಲಮ್ಮ, ಗ್ರಾಪಂ ಸದಸ್ಯೆ ಮಂಜುಳಾ, ತಿಪ್ಪೇಶಪ್ಪ, ನಾಗರಾಜ್, ಲೋಕೇಶ್ ಮಾತನಾಡಿದರು.
ಜಿಪಂ ಸದಸ್ಯ ವಿಶಾಲ ತಿಪ್ಪೇಶ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಾಸಕ ಡಿ.ಎಸ್. ಸುರೇಶ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಬಸ್‌ನಿಲ್ದಾಣ ಉದ್ಘಾಟನೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.