ಶೃಂಗೇರಿ ಶಾರದಾಂಬಾ ಮಹಾರಥೋತ್ಸವ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ಆರಾಧ್ಯದೇವತೆ ಶಾರದಾಂಬೆಯ ಮಹಾರಥೋತ್ಸವ ಗುರುವಾರ ವೈಭವಯುತವಾಗಿ ನಡೆಯಿತು.
ಶ್ರೀ ಶಾರದಮ್ಮನವರಿಗೆ ನಡೆಯುವ ಈ ಮಹಾರಥೋತ್ಸವವು ಅತ್ಯಂತ ಮಹತ್ವದ್ದಾಗಿದೆ. ಅನೇಕ ಶತಮಾನಗಳಿಂದ ಪ್ರತಿ ವರ್ಷ ಈ ಉತ್ಸವ ಬಹು ವೈಭವದಿಂದ ನಡೆದುಕೊಂಡು ಬಂದಿದೆ.
ರಥೋತ್ಸವಾಂಗ ಭಾನುವಾರದಿಂದಲೇ ವಿಶೇಷ ಪೂಜೆ, ಹೋಮ ಹವನಗಳು ನೆರವೇರಿತು. ಲೋಕ ಕಲ್ಯಾಣಾರ್ಥ ಶತಚಂಡೀ ಮಹಾಯಾಗ ಸಂಕಲ್ಪ ಚಂಡೀ ಪುರಶ್ಚರಣೆ ನೆರವೇರಿತು. ಬುಧವಾರ ಶ್ರೀ ಶಾರದಾಂಬೆಗೆ ಮಹಾರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಮಂಗಳಾರತಿ, ಸುವಾಸಿನಿ ಪೂಜೆ ನಡೆಯಿತು. ಪ್ರತಿದಿನ ಸಂಜೆ ಪಟ್ಟಣದಲ್ಲಿ ಸಂಜೆ ಬೀದಿ ಉತ್ಸವ ನಡೆಯಿತು.
ವೈಭವಯುತ ಮಹಾರಥೋತ್ಸವ: ಗುರುವಾರ ಬೆಳಿಗ್ಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ವೈಭವಯುತ ಮಹಾರಥೋತ್ಸವ ಜರುಗಿತು. ಸಾವಿರಾರು ವಿಪ್ರೋತ್ತಮರ ಮಂತ್ರಘೋಷಗಳೊಂದಿಗೆ ಸಾಗಿದ ಈ ಮಹಾರಥೋತ್ಸವದಲ್ಲಿ ಚಾಮರ, ವಾದ್ಯ, ತಟ್ಟಿರಾಯ, ಶ್ರೀ ಮಠದ ಆನೆಗಳಾದ ಲಕ್ಷ್ಮ, ಜಯಲಕ್ಷ್ಮಿಯರು ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಸುಡುಬಿಸಿಲನ್ನು ಲೆಕ್ಕಿಸದೇ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ಜನತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತಿ ಭಾವದಿಂದ ಶ್ರೀ ಶಾರದಾಂಬೆಯನ್ನು ನಮಿಸುತ್ತಿದ್ದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ರಥಸಾಗುವ ಮುನ್ನ ಮಹಿಳೆಯರು ರಸ್ತೆಯನ್ನು ಶುಭ್ರಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಿದ್ದರು. ಬುಧವಾರ ರಥೋತ್ಸವಾಂಗ ವಿಶೇಷ ಧಾರ್ಮಿಕ ಕಾರ್ಯಗಳು, ಪೂಜೆಗಳು ನೆರವೇರಿತು.
ಸಂಜೆ ಬೀದಿ ಉತ್ಲವ ನಡೆಯಿತು. ಶುಕ್ರವಾರ ರಥೋತ್ಸವಾಂಗ ಭಾನುವಾರದಿಂದ ಲೋಕಕಲ್ಯಾಣಾರ್ಥ ನಡೆಯುತ್ತಿರುವ ಶತಚಂಡೀ ಮಹಾಯಾಗ ಸಂಕಲ್ಪದ ಪೂರ್ಣಾಹುತಿ ನೆರವೇರಲಿದೆ. ಅವಭೃತ, ಸಂಜೆ ತುಂಗಾನದಿಯಲ್ಲಿ ತೆಪ್ಪೋತ್ಸವ, ನಂತರ ಸಂಜೆ ಬೀದಿ ಉತ್ಸವ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

