ಚಿಕ್ಕಮಗಳೂರು

ಶಾಸಕರ ರಾಜಿನಾಮೆ ರಾಜಕೀಯ ಗಿಮಿಕ್: ಸಚಿವ ಜೀವರಾಜ್

Published On :

ಚಿಕ್ಕಮಗಳೂರು: ಅಧಿಕಾರದ ಕೊನೆಯ ಕ್ಷಣದಲ್ಲಿ ಶಾಸಕರು ರಾಜಿನಾಮೆಗೆ ಮುಂದಾಗಿರುವುದು ರಾಜಕೀಯ ಗಿಮಿಕ್ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದ್ದಾರೆ.
 ರಾಜ್ಯ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅವರು ಪ್ರವಾಸಕ್ಕೆ ಹೋಗಲು ಅನುಮತಿ ಪಡೆಯಬೇಕಾಗಿಲ್ಲ. ಅವರು ಸ್ವತಂತ್ರರು, ವೈಯಕ್ತಿಕ ಕೆಲಸದ ಮೇಲೆ ಅವರು ಪ್ರವಾಸಕ್ಕೆ ಹೋಗಿದ್ದಾರೆ. ರಾಜಿನಾಮೆ ನೀಡಲು ಬಂದಾಗ ಬೋಪಯ್ಯ ಹೋಗಿದ್ದಾರೆಂಬುದು ಬಾಲಿಶವಾದ ಅಭಿಪ್ರಾಯ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ತಿಳಿಸಿದರು.
 ರಾಜಿನಾಮೆ ನೀಡಲು ಮುಂದೆ ಬಂದಿರುವ ಶಾಸಕರು, ಸ್ಪೀಕರ್ ಅವರಿಗೆ ಕೇಳಿ ಸಮಯ ತೆಗೆದುಕೊಂಡಿದ್ದರೆ, ಆಗ  ಅವರು ಸಮಯ ಕೊಟ್ಟು ನಂತರದಲ್ಲಿ ಹೋಗಿದ್ದರೆ ತಪ್ಪಾಗುತ್ತಿತ್ತು. ಆದರೆ, ಶಾಸಕರು, ತಾವು ರಾಜಿನಾಮೆ ನೀಡಲು ಬರುತ್ತಿರುವುದಾಗಿ ಸ್ಪೀಕರ್ ಅವರಿಗೆ ತಿಳಿಸಿರಲಿಲ್ಲ. ಈ ಸಂದರ್ಭದಲ್ಲಿ ಸ್ಪೀಕರ್ ಕಚೇರಿಯಿಂದಲೂ ಲೋಪ ಆಗಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿದೆ. ಜನ ಮತ್ತು ಜಾನುವಾರುಗಳಿಗೆ  ಕುಡಿಯುವ ನೀರಿಲ್ಲ. ಇಂತಹ ಸಂದರ್ಭದಲ್ಲಿ ಶಾಸಕರು ರಾಜಿನಾಮೆಗೆ ಮುಂದಾಗಿರುವುದು ಸರಿ ಕಾಣುತ್ತಿಲ್ಲ ಎಂದರು.
 ಫೆ. 4 ರಂದು ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 8 ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.