ಚಿಕ್ಕಮಗಳೂರು

ಚೆಕ್‌ಬೌನ್ಸ್: ಆರೋಪಿಗೆ ಜೈಲು

Published On :

ಕ.ಪ್ರ.ವಾರ್ತೆ, ಮೂಡಿಗೆರೆ,  ಜು.2
ಚೆಕ್‌ಬೌನ್ಸ್ ಪ್ರಕರಣದಲ್ಲಿ ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿ 3 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬನಿಗೆ ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಲಯ 1 ವರ್ಷ ಜೈಲು ಹಾಗೂ ರು. 2,500 ದಂಡ ವಿಧಿಸಿದೆ.
ಆರೋಪಿ ಕಳಸದ ಮಹಮ್ಮದ್ ಇಬ್ರಾಹಿಂ ಆಲಿಯಾಸ್ ಕೈಮರ ಮೋಣು ಎಂಬಾತ ಮರಸಣಿಗೆಯ ಹಿಲಾರಿ ರಾಡ್ರೀಗಸ್ ಎಂಬವರಿಗೆ ಟಿಂಬರ್ ಮರಗಳ ವಿಚಾರದಲ್ಲಿ ರು. 4.31ಲಕ್ಷಗಳಿಗೆ ಬ್ಯಾಂಕ್ ಚೆಕ್ ನೀಡಿದ್ದರು. ಆದರೆ ಬ್ಯಾಂಕಿನಲ್ಲಿ ಆತ ನೀಡಿರುವ ಚೆಕ್ ಬೌನ್ಸ್ ಆಗಿದ್ದರಿಂದ ಹಿಲಾರಿ ರಾಡ್ರಿಗಸ್ 2009ರಲ್ಲಿ ಕೋರ್ಟ್‌ಗೆ ದಾವೆ ಹೂಡಿದ್ದರು.
ವಾರಂಟ್ ಜಾರಿ: ಪ್ರಕರಣದಲ್ಲಿ ಅಂತಿಮವಾಗಿ ಆರೋಪಿ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಕಳೆದ 3 ತಿಂಗಳ ಹಿಂದೆ ನ್ಯಾಯಾಲಯ ಮೋಣು ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು. ಆದರೆ ಕಳೆದ 3  ತಿಂಗಳ ಹಿಂದಿನಿಂದಲೂ ತಲೆ ಮರೆಸಿಕೊಂಡಿದ್ದ ಆರೋಪಿ ಮೋಣುನನ್ನು ಜೂ.30ರಂದು ಬೆಳಗ್ಗಿನ ಜಾವ ಕಳಸ ಪೊಲೀಸರು ಬಂಧಿಸಿದ್ದರು.  
ಚೆಕ್‌ಬೌನ್ಸ್  ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ ನ್ಯಾಯಲಯವು 1 ವರ್ಷ ಜೈಲು ಹಾಗೂ ರು. 2,500 ದಂಡ ವಿಧಿಸಿ ಆದೇಶ ಹೊರಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.