'ಲೋಕಸಭೆಗೆ ಸ್ಫರ್ದಿಸಲು ಒತ್ತಡ'
ಕಡೂರು: ಬರಲಿರುವ ಲೋಕಸಭಾ ಚುನಾವಣೆಯ ಪಕ್ಷದ ಅಭ್ಯರ್ಥಿಯಾಗಿ ಸ್ಫರ್ಧಿಸಲು ಒತ್ತಡವಿದೆಯೇ ಹೊರತು ತನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ ಹಾಗೂ ಕೆಜೆಪಿ ನಾಯಕರನ್ನು ಬಿಜೆಪಿಗೆ ಕರೆತರುವ ಬಗ್ಗೆ ಕಾದು ನೋಡಿ.., ಹೀಗೆಂದು ಹೇಳಿದವರು ಮಾಜಿ ಸಚಿವ ಸಿ.ಟಿ.ರವಿ.
ಚಿಕ್ಕಮಗಳೂರು ಕ್ಷೇತ್ರದ ದೇವನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ವೈಯಕ್ತಿವಾಗಿ ಬಿಜೆಪಿ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಲು ಇಚ್ಚೆಪಟ್ಟಿಲ್ಲ. ಆದರೆ ಅಭ್ಯರ್ಥಿಯಾಗಲು ತಮ್ಮ ಮೇಲೆ ಒತ್ತಡಗಳಿವೆ ಎಂದವರು ಹೇಳಿದರು.
ಈ ದೇಶದಲ್ಲಿ ನರೇಂದ್ರ ಮೋದಿಯ ಆಡಳಿತ ನೋಡಿ ಮತ್ತು ಮುಂದಿನ ಪ್ರಧಾನಿ ನರೇಂದ್ರ ಮೋದಿಯವರೇ ಎಂದು ಬಿಂಬಿಸಿರುವುದರ ಹಿನ್ನೆಲೆಯನ್ನು ನೋಡಿ ಕಾಂಗ್ರೆಸ್ನವರಿಗೆ ನಡುಕ ಹುಟ್ಟಿದೆ. ಬಿಜೆಪಿಯ ಒಳ್ಳೆಯ ಕೆಲಸದ ಬಗ್ಗೆ ಜನ ಯಾವಾಗಲೂ ಒಲವು ತೋರಿಸುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ವಾಜಪೇಯಿ ಆಡಳಿತದ ಅವಧಿಯಲ್ಲಿ ಈ ದೇಶದಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆ ಜಾರಿಗೆ ತರುವ ಮೂಲಕ 52 ಸಾವಿರ ಕಿಲೋಮೀಟರ್ ಚತುಪ್ಪಥ ಹೆದ್ದಾರಿ ನಿರ್ಮಾಣವಾಯಿತು ಎಂದರು.
33 ಸಾವಿರ ಕಿ.ಮೀ: 5 ವರ್ಷದ ಅವಧಿಯಲ್ಲಿ 33 ಸಾವಿರ ಕಿಲೋಮೀಟರ್ ರಸ್ತೆ ಮಾಡಲಾಯಿತು. ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಕಡಿಮೆ ಬೆಲೆಗೆ ಜನರಿಗೆ ಸಿಗುವ ಮೂಲಕ ಬಡವರು ಮತ್ತು ಮಧ್ಯಮವರ್ಗದವರು ಬದುಕು ಸಾಗಿಸುತ್ತಿದ್ದರು. ಆದರೆ ಇಂದು ಕೇಂದ್ರದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುವ ಮೂಲಕ ಜನರು ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಲೆ ಏರಿಕೆ ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಸುರಕ್ಷಿತ ವಾತಾವರಣ ಇಲ್ಲದೆ ದೇಶದಲ್ಲಿ ಉಗ್ರಗಾಮಿಗಳು ಬಲಿಷ್ಠರಾಗಿದ್ದಾರೆ. ನಕ್ಸಲರ ಅಟ್ಟಹಾಸದಿಂದಾಗಿ ತಮ್ಮ ಪಕ್ಷದ ಮಾಜಿ ಗೃಹ ಸಚಿವರನ್ನೂ ಉಳಿಸಿಕೊಳ್ಳದಂತಹ ಹೀನ ಆಡಳಿತದತ್ತ ಕೇಂದ್ರ ಸರ್ಕಾರವು ತಲುಪಿದೆ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

