ಚಿಕ್ಕಮಗಳೂರು

ಕೋರ್ಸ್ ಆಯ್ಕೆ ವೇಳೆ ಪೋಷಕರ ಒತ್ತಾಯಕ್ಕೆ ಮಣಿಯದಿರಿ: ವಿದ್ಯಾರ್ಥಿಗಳಿಗೆ ಸಲಹೆ

Published On :

ಚಿಕ್ಕಮಗಳೂರು: ತುಂತುರು ಮಳೆ, ಥಂಡಿ ಗಾಳಿ, ಮನೆಯ ಹೊಸ್ತಿಲು ದಾಟಿ ಹೊರಗೆ ಹೋಗುವುದೇ ಬೇಡ ಎನ್ನುವ ಪ್ರತಿಕೂಲ ಹವಮಾನವಿದೆ. ಈ ನಡುವೆಯೂ ಇಲ್ಲಿನ ಕಾಫಿಯ ತವರೂರಿನಲ್ಲಿ 'ಕನ್ನಡಪ್ರಭ' ಮತ್ತು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ಭಾನುವಾರ ಆಯೋಜಿಸಿದ್ದ ಎಜುಕೇಷನ್ ಫೇರ್‌ಗೆ ವಿದ್ಯಾರ್ಥಿಗಳು, ಪೋಷಕರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ನಗರದ ಗಾಯಿತ್ರಿದೇವಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ನಡೆದ ಶಿಕ್ಷಣ ಮೇಳದಲ್ಲಿ ಬಂದ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿತ್ತು.
ಮಾಜಿ ಸಚಿವ, ಶಾಸಕ ಸಿ.ಟಿ. ರವಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಕಾಲೇಜಿಗೆ ಸೇರಲು, ಕಾಲೇಜು ಬದಲಾಯಿಸಲು ಕಾರಣಗಳಿರಲಿಲ್ಲ. ಆದರೆ, ಇಂದು ಕಾಲ ಬದಲಾಗಿದೆ. ವಿಚಾರ ಮಾಡಿ ಶಿಕ್ಷಣದಲ್ಲಿ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಪೋಷಕರ ಒತ್ತಾಯದ ಮೇಲೆ ಯಾವುದೇ ಕೋರ್ಸ್ ತೆಗೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗುರಿಗಿಂತ ಉದಾತ್ತ ಇರಬೇಕು. ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಶಿಕ್ಷಣ ಪಡೆಯುವಾಗ ಆಲೋಚನೆ ಮತ್ತು ಭವಿಷ್ಯದ ಬಗ್ಗೆ ಯೋಜನೆ ಮಾಡಬೇಕು ಎಂದ ಅವರು, ಮೆರಿಟ್ ಬಂದವರಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕದಲ್ಲೇ ಪ್ರವೇಶ ನೀಡಬೇಕು. ಇದನ್ನು ಯಾವುದೇ ಕಾಲೇಜು ಉಲ್ಲಂಘಿಸಬಾರದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.