ಚಿಕ್ಕಮಗಳೂರು

ಪಡಿತರ ಕಾರ್ಡ್: 14 ಮಾನದಂಡಗಳೇ ಮುಖ್ಯ

Published On :

ನರಸಿಂಹರಾಜಪುರ: ಮುಂದಿನ ದಿನಗಳಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡಿನ ವಿಂಗಡನೆಗೆ ಆದಾಯ ಪತ್ರಕ್ಕಿಂತ ಸರ್ಕಾರ ಸೂಚಿಸಿದ 14 ಮಾನದಂಡಗಳೇ ಮುಖ್ಯವಾಗಲಿದೆ ಎಂದು ತಹಸಾಲ್ದಾರ್ ಕೃಷ್ಣಮೂರ್ತಿ ತಿಳಿಸಿದರು.
ಅವರು ಇತ್ತಾಚೆಗೆ ಕಡಹಿನಬೈಲು ಗ್ರಾಮ ಪಂಚಾಯ್ತಿಯ ಸೌತಿಕೆರೆ ಶಾಲಾ ಆವರಣದಲ್ಲಿ ನಡೆದ ಬಾಳೆ ಕೊಪ್ಪ ಗ್ರಾಮದ ಜನಸ್ಪಂದನಾ ಹಾಗೂ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇ. 50 ಹಾನಿ: ಈ ವರ್ಷ ಬಾರೀ ಮಳೆ ಸುರಿದಿದ್ದು ಮಳೆಯಿಂದ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ. ನಾಟೀ ಮಾಡಿದ ಗದ್ದೆ ಶೇ 50 ರಷ್ಟು ಹಾನಿಯಾದರೆ 1 ಗುಂಟೆಗೆ 40 ರುಪಾಯಿಯಂತೆ ಪರಿಹಾರ ನೀಡಲಾಗತ್ತದೆ.ಒತ್ತುವರಿ ತೆರವು ಬಗ್ಗೆ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಅವರು, ಅರಣ್ಯ ಒತ್ತುವರಿ ವಿಷಯವು  ನ್ಯಾಯಾಲಯದ ಮುಂದೆ ಇರುವುದರಿಂದ ಸರ್ಕಾರದ ಆದೇಶವನ್ನು ಮಾತ್ರ ಪಾಲಿಸುತ್ತೇವೆ ಎಂದು ಅವರು ತಿಳಿಸಿದರು.
ವಿಎಸ್‌ಎಸ್‌ಎನ್ ರದ್ದು ಬೇಡ: ನರಸಿಂಹರಾಜಪುರ ವ್ಯವಸಾಯ ಸೇವಾ ಸಹಕಾರ ಸಂಘದ ಶಾಖೆಯು ಬಾಳೆಕೊಪ್ಪ ಗ್ರಾಮದಲ್ಲಿದ್ದು ಇತ್ತೀಚೆಗೆ ಈ ಶಾಖೆಯನ್ನು ರದ್ದು ಪಡಿಸುವುದಾಗಿ ಆಹಾರ ಮತ್ತು ನಾಗರೀಕ ಇಲಾಖೆಗೆ ನ.ರಾ.ಪುರ ವಿ.ಎಸ್.ಎಸ್.ಎನ್ಪ್‌ತ್ರ ಬರೆದಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.ಬಾಳೆಕೊಪ್ಪ ವಿ.ಎಸ್.ಎಸ್.ಎನ್.ಶಾಖೆಯಲ್ಲಿ 76 ರೇಷನ್ ಕಾರ್ಡುಗಳಿವೆ. ಈ ಶಾಖೆಯನ್ನು ರದ್ದು ಪಡಿಸುವುದು ಬೇಡ ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.
ಬಸ್ಸು ಸಂಪರ್ಕಕ್ಕೆ ಒತ್ತಾಯ: ಸೂಸಲವಾನಿಯಿಂದ ಮಾಕೋಡಿಗೆ ಸಂಪರ್ಕ ಕಲ್ಪಿಸುವ ಬಸ್ಸು ಈ ಹಿಂದೆ ಬರುತ್ತಿತ್ತು. ಕೆಲವು ವರ್ಷಗಳಿಂದ ಬಸ್ಸು ನಿಂತು ಹೋಗಿ ಗ್ರಾಮಸ್ಥರಿಗೆ ತೊಂದರೆಯಾಗಿದೆ.ಬಸ್ಸನ್ನು ಮತ್ತೆ ಆರಂಭಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯ್ತಿ ಸದಸ್ಯ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಅತಿ ವೃಷ್ಠಿ, ಅನಾವೃಷ್ಠಿ ಸಂಭವಿಸಿದ ಸಂದರ್ಭದಲ್ಲಿ ಅಧಿಕಾರಿಗಳು ತುರ್ತು ಕ್ರಮ ತೆಗೆದುಕೊಳ್ಳಬೇಕು. ಮಳೆಯಿಂದ ಹಾನಿಗೊಳಗಾದ ಜಮೀನಿನ ರೈತರಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳಿಸಬೇಕು ಎಂದು ಸೂಚಿಸಿದರು.
ಪಿಂಚಣಿ ಅದಾಲತ್‌ಗೆ ಸಂಬಂಧಿಸಿದಂತೆ  ಗ್ರಾಮಸ್ಥರು 10 ಅರ್ಜಿಗಳನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಮ ಪಂಚಾಯ್ತಿ ಅದ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ರಂಜು ಎಲಿಯಾಸ್, ರಾಗಿಣಿ, ಮಳಲಿ ಶ್ರೀನಿವಾಸ್, ಆರಕ್ಷಕ ವೃತ್ತ ನಿರೀಕ್ಷಿಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಗ್ರಾಮ ಲೆಕ್ಕಿಗ ಸುನೀಲ್ ಕುಮಾರ್ ಸ್ವಾಗತಿಸಿದರು. ಶ್ಯಾಮನಾಯಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.