ಚಿಕ್ಕಮಗಳೂರು

ಸಾಮಾಜಿಕ ಸೇವಾ ಕಾರ್ಯ ತೃಪ್ತಿ ತಂದಿವೆ: ಪ್ರೊ. ಹೇಮಂತ್

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜು.9
ಕಳೆದ ಒಂದು ವರ್ಷದ ತಮ್ಮ ಅವಧಿಯಲ್ಲಿ ಲಯನ್ಸ್ ವತಿಯಿಂದ ಮಾಡಲಾಗಿರುವ ಹಲವಾರು ಸಾಮಾಜಿಕ ಸೇವಾ ಕಾರ್ಯಗಳು ತಮಗೆ ತೃಪ್ತಿ ಮತ್ತು ಹೆಮ್ಮೆ ತಂದಿದೆ ಎಂದು ಲಯನ್ಸ್ ಅಧ್ಯಕ್ಷ ಪ್ರೊ. ಹೇಮಂತ್ ಪ್ರಭು ಹೇಳಿದ್ದಾರೆ.
ತಮ್ಮ ಒಂದು ವರ್ಷದ ಅವಧಿಯಲ್ಲಿ ಮಾಡಲಾದ ಸಾಮಾಜಿಕ ಸೇವಾ ಕಾರ್ಯಗಳ ವಿವರವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ಅವರು, ತಮಗೆ ಸಹಕಾರ ನೀಡಿದ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಕಳೆದ ವರ್ಷದ ಆ.15 ರಂದು ಎ.ಐ.ಟಿ. ಕಾಲೇಜಿನಲ್ಲಿ ಲಯನ್ಸ್ ವತಿಯಿಂದ ಏರ್ಪಡಿಸಲಾಗಿದ್ದ ವನಮಹೋತ್ಸವದಲ್ಲಿ 300 ಸಸಿಗಳನ್ನು ನೆಡಲಾಯಿತು. 29 ರಂದು ಬಿಜಿಎಸ್ ಕಾಲೇಜಿನಲ್ಲಿ ವಿಶ್ವ ಎದೆಹಾಲು ಸಪ್ತಾಹ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಎದೆಹಾಲಿನ ಮಹತ್ವವನ್ನು ತಿಳಿಸಲಾಯಿತು ಎಂದರು.
ಅಕ್ಟೋಬರ್ 8 ರಂದು ಜೀವನಸಂಧ್ಯಾ ವೃದ್ಧಾಶ್ರಮದ ನಿವಾಸಿಗಳಿಗೆ ವಿಶ್ವ ಸೇವಾ ದಿನಾಚರಣೆ ಅಂಗವಾಗಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಔಷಧಿಗಳನ್ನು ನೀಡಲಾಯಿತು ಎಂದು ವಿವರಿಸಿದರು.
35 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ: ಈ ವರ್ಷದ ಜನವರಿ 1 ರಂದು ಕಣ್ಣು ತಪಾಸಣಾ ಶಿಬಿರ ನಡೆಸುವ ಮೂಲಕ 35 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುವುದರ ಜೊತೆಗೆ 600 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು. ಫೆಬ್ರವರಿ 17 ರಂದು ಭಾರತೀಯ ರೆಡ್,ಙ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಲಯನ್ಸ್ ಸಂಸ್ಥೆ  ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 250 ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಎಂದು ಹೇಳಿದರು.
ಲಯನ್ಸ್ ಸೇವಾ ಭವನದ ಶೌಚಾಲಯ ನಿರ್ಮಾಣಕ್ಕೆ ತಾವು ಒಂದು ಲಕ್ಷ ರೂ. ದೇಣಿಗೆ ನೀಡಿದ್ದು  ಅದರ ಉದ್ಘಾಟನೆಯನ್ನು ಜಿಲ್ಲಾ ರಾಜ್ಯಪಾಲ ಎಂ.ಬಿ. ಸದಾಶಿವ ನೆರವೇರಿಸಿದರು ಎಂದು ಹೇಳಿದರು.
2013-14ನೇ ಸಾಲಿನ ಅಧ್ಯಕ್ಷರಾಗಿ ನೇತ್ರ ವೆಂಕಟೇಶ್, ಕಾರ್ಯದಶಇರ್ಯಾಗಿ ಅನುಸೂಯ ಜಗದೀಶಪ್ಪ ಮತ್ತು ಖಜಾಂಚಿಯಾಗಿ ರೂಪ ಹೇಮಂತ್ ಪ್ರಭು ಆಯ್ಕೆಯಾಗಿದ್ದು, ಜುಲೈ 10 ರಂದು ನಗರದ ಲಯನ್ಸ್ ಸೇವಾ ಭವನದಲ್ಲಿ ಪದಗ್ರಹಣ ನಡೆಯಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.