ಚಿಕ್ಕಮಗಳೂರು

ದುರ್ಬಲರ ಸೇವೆಯೇ ದೇವರ ಸೇವೆ

Published On :

ಕ.ಪ್ರ.ವಾರ್ತೆ  ಮೂಡಿಗೆರೆ  ಜು.11 ದುರ್ಬಲರ ಸೇವೆ ಮಾಡಿದರೆ ದೇವರ ಸೇವೆ ಮಾಡಿದ ಹಾಗೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಹೇಳಿದರು.
ಅವರು ಪಟ್ಟಣದ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಲಯನ್ಸ್ ಸಂಸ್ಥೆ, ಜೇಸಿ ಸಂಸ್ಥೆ, ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇದರ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಉಚಿತ ಹೃದ್ರೋಗ, ಮೂತ್ರಪಿಂಡದ ಕಲ್ಲು ತಪಾಸಣೆ ಶಿಬಿರ ಹಾಗೂ ತಜ್ಞ  ವೈದ್ಯರಿಂದ ಕ್ಯಾನ್ಸರ್ ರೋಗ ಪತ್ತೆ ಹಚ್ಚುವ ಹಾಗೂ ಸಲಹಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದುರ್ಬಲರಿಗೆ ಸಹಕಾರಿ: ದೇಶದಲ್ಲಿರುವ ಬಹುತೇಕರು ಬಡವರಾಗಿದ್ದಾರೆ. ಅವರಿಗೆ ಯಾವುದಾದರೂ ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವಷ್ಟು ಹಣವಿಲ್ಲದೆ ದುರ್ಬಲರಾಗಿರುತ್ತಾರೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೆ ರೋಗಿಗಳಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಡಾ. ರಮೇಶ್ ಮಾತನಾಡಿ, ಬಹುತೇಕ ರೋಗಿಗಳು ತಮಗೆ ಕ್ಯಾನ್ಸರ್ ಬಂದಿದೆ ಎಂದು ಭಯಪಡುವ ಹಾಗಿಲ್ಲ. ಕ್ಯಾನ್ಸರ್ ಕಾಯಿಲೆ ಬಂದರೆ ಸಂಪೂರ್ಣ ಗುಣಪಡಿಸಬಹುದು ಎಂದರು.
ಸಾಂಕ್ರಾಮಿಕವಲ್ಲ:  ಆರಂಭದ ಹಂತದಲ್ಲಿದ್ದರೆ ಅದನ್ನು ಪತ್ತೆ ಮಾಡಿದರೆ ಗುಣ ಮಾಡಲು ಸುಲಭವಾಗುತ್ತದೆ. ಅಂತ್ಯದಲ್ಲಿದ್ದರೂ ಕೂಡ ಗುಣಮುಖ ಮಾಡಲು ಕೂಡ ಬಹಳಷ್ಟು ದಾರಿಗಳಿವೆ.
ಕೆಲವರು ಕ್ಯಾನ್ಸರ್ ಒಂದು ಸಾಂಕ್ರಾಮಿಕ ರೋಗ ಎಂದುಕೊಂಡಿದ್ದಾರೆ. ಅಂತಹ ತಪ್ಪು ಕಲ್ಪನೆ ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಅದನ್ನು ಹೊರ ಹಾಕಿ ಎಂದು ಸಲಹೆ ನೀಡಿದರು.
ಎಂಜಿಎಂ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ತಾಲೂಕು ವೈದ್ಯಾಧಿಕಾರಿ ಡಾ. ಯೋಗೇಶ್, ಜೇಸಿ ಸಂಸ್ಥೆ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ, ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಡಾ. ಸುರೇಂದ್ರ, ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಡಾ. ರುದ್ರೇಶ್, ಹೃದಯ ತಜ್ಞ ತೋಮಸ್ ಮೊದಲಾದರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.