'ಹೊಸ ಕೆರೆ ನಿರ್ಮಾಣಕ್ಕೆ ಪ್ರಯತ್ನ'
ಕ.ಪ್ರ.ವಾರ್ತೆ, ಕಡೂರು, ಜು.26
ಮದಗದಕೆರೆಗೆ ಹೆಬ್ಬೆ ಹಳ್ಳದಿಂದ ಶಾಶ್ವತ ನೀರು ಹರಿಯುವಂತೆ ಮಾಡುವ ಮೂಲಕ 3 ಟಿಎಂಸಿ ನೀರು ಸಂಗ್ರಹವಾಗುವ ಹೊಸ ಕೆರೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು.
ಕಡೂರು ತಾಲೂಕು ಮದಗದಕೆರೆಗೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೊಂದಿಗೆ ತಾಲೂಕಿನ ಜನತೆ ಪರವಾಗಿ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರೊರಂದಿಗೆ ಮಾತನಾಡಿದ ಅವರು, ಈ ಕೆರೆಯನ್ನು ತಾವು ಶಾಸಕರಾಗಿದ್ದಾಗ ದುರಸ್ತಿ ಪಡಿಸಿದ್ದು, ಇದೀಗ ಮತ್ತೆ ಎರಡು ಮೂರು ಹಂತಗಳಲಿ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಯೋಜನೆ ಜಾರಿಗೆ ಪ್ರಯತ್ನ: ತಾಲೂಕಿನ ಅಚ್ಚುಕಟ್ಟುದಾರರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಹೆಬ್ಬೆ ಹಳ್ಳದಿಂದ ಮದಗದಕೆರೆಗೆ ಸದಾಕಾಲ ನೀರು ಹರಿಸುವ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದು, ಬುಕ್ಕಸಾಗರದ ಬಳಿ 3 ಟಿಎಂಸಿ ನೀರು ಸಂಗ್ರಹಿಸುವ ಹೊಸಕೆರೆ ನಿರ್ಮಿಸುವ ಯೋಜನೆಗೆ ಹಿಂದಿನ ಹಾಗೂ ಇಂದಿನ ಶಾಸಕರ ಜೊತೆ ಚರ್ಚೆ ನಡೆಸಿದ್ದು, ಎಲ್ಲಾ ಜನಪ್ರತಿನಿಧಿಗಳೊಂದಿಗೆ ಹೆಬ್ಬೆ ಯೋಜನೆ ಜಾರಿಗೆ ಸರ್ಕಾರದಿಂದ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಕಡೂರು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಎಚ್.ಚಂದ್ರಪ್ಪ, ಕೆ.ಎಂ. ವಿನಾಯಕ್, ಮುಖಂಡ ಎಚ್.ಎಂ. ಲೋಕೇಶ್, ಯುವ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್, ಪುರಸಭಾ ಸದಸ್ಯ ತೋಟದಮನೆ ಮೋಹನ್, ಕೋಳಿ ಲೋಕೇಶ್, ಕೆ.ಎಂ. ಸೋಮಶೇಖರ್, ಕೆ.ಎನ್. ಜಯಣ್ಣ, ಮಾದಪ್ಪ, ರೇಣುಕಾರಾಧ್ಯ, ಮುಖಂಡರಾದ ಸಾವಿತ್ರಿ ಗಂಗಪ್ಪ, ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ಹೆಚ್.ರಂಗನಾಥ್, ಲೋಕೇಶ್, ಚಂದ್ರಪ್ಪ, ಶಿವಣ್ಣ, ಪ್ರಕಾಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

