ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Published On :

ಇಂದು ಹೆಬ್ಬಾರ ಸಭಾ ತಾ. ಘಟಕದ ಸಭೆ
ನರಸಿಂಹರಾಜಪುರ: ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಸಭಾದ ತಾಲೂಕು ಘಟಕದ 2012-13 ನೇ ಸಾಲಿನ ಸರ್ವ ಸದಸ್ಯರ ಸಭೆಯು ಜುಲೈ 28ರ ಭಾನುವಾರ ಜೋಗಿಮಕ್ಕಿಯ ಎಂ.ಆರ್. ಶಂಕರನಾರಾಯಣ ಅವರ ಮನೆಯ ಆವರಣದಲ್ಲಿ ಮಧ್ಯಾಹ್ನ  2 ಗಂಟೆಗೆ ನಡೆಯಲಿದೆ ಎಂದು ಹೆಬ್ಬಾರ ಸಭಾದ ಕಾರ್ಯದರ್ಶಿ ಎ.ಟಿ.ಚಂದ್ರಶೇಖರ್ ತಿಳಿಸಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಸಭಾದ ಅಧ್ಯಕ್ಷ ಎ.ಎಸ್. ವೆಂಕಟರಮಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಮುಖಂಡ ಎಚ್.ಎಸ್. ಚಂದ್ರಶೇಖರ ರಾವ್, ಕೆ.ಟಿ. ನಾಗೇಂದ್ರರಾವ್, ಜಿ.ಸಿ. ಗೋಪಾಲಕೃಷ್ಣ, ಎಚ್.ಬಿ. ದೀಪಕ್, ಶಿವಶಂಕರ್, ಕೆ.ವಿ. ಸೂರ್ಯನಾರಾಯಣ ರಾವ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಕೆರೆಮನೆ ತಿಮ್ಮಪ್ಪ ಅವರನ್ನು ಸನ್ಮಾನಿಸಲಾಗುವುದು. ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.

ನಮಾಜ್ ಅನುಮತಿಗೆ  ಮನವಿ
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕಲ್ಲುಕಟ್ಟೆ ಗ್ರಾಮದ ಅರಬ್ಬೀ ಶಾಲೆಯಲ್ಲಿ ರಂಜಾನ್ ಪ್ರಯುಕ್ತ ನಮಾಜ್ ಮಾಡಲು ಅನುಮತಿ ನೀಡುವಂತೆ ಸ್ಥಳೀಯ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.  ಈ ಸಂಬಂಧ ಜಿಲ್ಲಾಧಿಕಾರಿ ವಿ. ಯಶ್ವಂತ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಕಲ್ಲುಕಟ್ಟೆಯಲ್ಲಿ 1990 ರಿಂದ  ಅರಬ್ಬೀ  ಶಾಲೆ ನಡೆಸಿಕೊಂಡು ಬರುತ್ತಿದ್ದು, ಅಲ್ಲಿ  ರಂಜಾನ್ ಪ್ರಯುಕ್ತ ವಿಶೇಷ ನಮಾಜ್  ಮಾಡಲಾಗುತ್ತಿದೆ, ಅದಲ್ಲದೇ, ಈ ಸಂಬಂಧ ಮೆಣಸೆ ಗ್ರಾಪಂಗೆ ಅರಬ್ಬೀ ಶಾಲೆಯ ಬಾಬ್ತು  ಕಂದಾಯವನ್ನು ಪಾವತಿ ಮಾಡಿಸಿಕೊಂಡು ಬಂದಿರುತ್ತೇವೆ. ಆದರೆ, ಈಗ ಗ್ರಾಮದ ಕೆಲವರು ನಮಾಜ್ ಮಾಡಲು ಅಕ್ಷೇಪಣೆ ವ್ಯಕ್ತಪಡಿಸಿ ಗ್ರಾಪಂ ಮತ್ತು ತಹಸೀಲ್ದಾರ್ ಕಚೇರಿಗೆ ದೂರು ನೀಡಿದ್ದು, ಈಗ ಸ್ಥಳೀಯ ತಹಸೀಲ್ದಾರರು ರಂಜಾನ್ ವಿಶೇಷ  ನಮಾಜ್ ಮಾಡಬಾರದೆಂದು ಹಿಂಬರಹ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.