ಆಲೂಗೆಡ್ಡೆಗೆ ಅಂಗಮಾರಿ ರೋಗ ತಡೆಗೆ ಮುಂಜಾಗ್ರತಾ ಕ್ರಮ
ತರೀಕೆರೆ: ತಾಲೂಕಿನ ವಿವಿಧ ಹೋಬಳಿಗಳ ಸುಮಾರು 2,250 ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಆಲೂಗೆಡ್ಡೆ ಬೆಳೆದಿದ್ದು, ಬೆಳೆಗೆ ಸಾಮಾನ್ಯವಾಗಿ ತಗಲುವ ಅಂಗಮಾರಿ ರೋಗ ತಡೆಯಲು ರೈತರು ಮುಂಜಾಗ್ರತಾ ಕ್ರಮ ವಹಿಸಬೇಕೆಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.
ಮೋಡ ಕವಿದ ವಾತಾವರಣ, ತುಂತುರು ಮತ್ತು ಹೆಚ್ಚಿನ ಮಳೆ ಇತ್ಯಾದಿ ವಾತಾವರಣ ಮುಂದುವರೆದಲ್ಲಿ ಆಲೂಗೆಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ಔಷಧಗಳನ್ನು ನಿಯಮಿತವಾಗಿ ಬಳಸುವುದರಿಂದ ರೋಗ ತಡೆಯಬಹುದು ಎಂದು ತಿಳಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳ ಜಮೀನಿನ ಅಲೂಗೆಡ್ಡೆ ಬೆಳೆಗೆ ರೈತರು ಮುಂಜಾಗ್ರತಾ ಕ್ರಮವಾಗಿ ಸೆಕ್ಟಿನ್ 3 ಗ್ರಾಂ, ಕರಾಟೆ 3 ಗ್ರಾಂ ಅಥವಾ ಅಕ್ರೋಬ್ಯಾಟ್ ಮತ್ತು ಪಾಲಿರಾಂ, ಅಸಿಫೇಟ್ ಎರಡೂವರೆ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಅಂಗಮಾರಿ ರೋಗ ಮತ್ತು ಹಸಿರು ಹುಳು ನಿಯಂತ್ರಣಕ್ಕೆ ಸಿಂಪಡಿಸಬೇಕು. ರೈತರು ಯೂರಿಯಾ ಗೊಬ್ಬರವನ್ನು ಯಾವುದೇ ಕಾರಣಕ್ಕೂ ಬೆಳೆಗೆ ಬಳಸಬಾರದೆಂದೂ ಹಾಗೂ ಬೆಳೆ ನಾಟಿಯಾದ ಒಂದು ತಿಂಗಳ ನಂತರ ಮಣ್ಣು ಏರಿಸಬೇಕು.
ಈರುಳ್ಳಿ ಬೆಳೆಗೆ: ಈರುಳ್ಳಿ ಬೆಳೆಗೆ ಮುಂಜಾಗ್ರತಾ ಕ್ರಮವಾಗಿ ಕವಚ್ ಮತ್ತು ಕರಾಟೆ ಅಥವಾ ಕರ್ಜೇಟ್, ಅಸಿಫೇಟ್ ಎರಡುವರೆ ಗ್ರಾಂ ಪ್ರತಿ ಲೀ.ನೀರಿಗೆ ಬೆರಸಿ ಮಜ್ಜಿಗೆ ರೋಗ ಮತ್ತು ಹಸಿರು ಹುಳು ನಿಯಂತ್ರಣಕ್ಕೆ ಸಿಂಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

