ಹೈಟೆಕ್ ಲೇಔಟ್ಗೆ ಹಲವು ವಿಘ್ನ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜೂ.1
ಇಲ್ಲಿನ ಉಪ್ಪಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಲೇಔಟ್ ಕಾಮಗಾರಿಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ.
ಈ ರೀತಿಯ ಪ್ರಯತ್ನ ರಾಜ್ಯ ಸರ್ಕಾರದಲ್ಲಿ ಸ್ಥಳೀಯ ಕಾಂಗ್ರೆಸ್ನವರು ಮಾಡುತ್ತಿದ್ದು, ಇದಕ್ಕೆ ಜೆಡಿಎಸ್ನವರು ಸಾಥ್ ನೀಡಿದ್ದಾರೆ.
ಹಿಂದಿನ ಸರ್ಕಾರ ಮಾಡಿದ ಕಾಮಗಾರಿಯಲ್ಲಿ ಅವ್ಯವಹಾರದ ವಾಸನೆ ಕಂಡು ಬಂದರೆ ಹಾಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಅದಕ್ಕೆ ತಡೆ ಹಾಕುವುದು ಹೊಸ ಸಂಪ್ರದಾಯವೇನಲ್ಲ.
ಆದರೆ, ಇದೇ ಕಾಮಗಾರಿಯ ವಿಚಾರದಲ್ಲಿ ಸಿಡಿಎ ಅಧ್ಯಕ್ಷ ಬಿ. ರಾಜಪ್ಪ ಅವರು, ಈ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳೆದ ಫೆಬ್ರವರಿಯಲ್ಲೇ ಪತ್ರವನ್ನು ಬರೆದಿರುವುದು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.
ಇವೆಲ್ಲವೂ ಕಾಮಗಾರಿಗಳ ತಡೆಗೆ ಸಕಾರಣವಂತೆ ಕಂಡು ಬರುತ್ತಿದ್ದು, ರಾಜ್ಯ ಸರ್ಕಾರ ಇದೇ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಕಾಣುತ್ತಿದೆ.
ಹೈಟೆಕ್ ಲೇಔಟ್: ಚಿಕ್ಕಮಗಳೂರು ನಗರದಲ್ಲಿ ಖಾಲಿ ನಿವೇಶನಗಳಿಗೆ ಬಹಳಷ್ಟು ಬೇಡಿಕೆ ಇದೆ. ಹಾಲಿ ನಗರಸಭೆ ವ್ಯಾಪ್ತಿಯಲ್ಲಿ 23 ಸಾವಿರ ಖಾತೆ ಇರುವ, ಕಂದಾಯ ಭೂಮಿಯಲ್ಲಿ 2800 ಮನೆಗಳು ಹಾಗೂ ಖಾಲಿ ನಿವೇಶನಗಳಿವೆ. ಆಶ್ರಯ ನಿವೇಶನಗಳಿಗೆ ಕೋರಿ ಸುಮಾರು 7000 ಅರ್ಜಿಗಳು ನಗರಸಭೆಗೆ ಈವರಗೆ ಬಂದಿವೆ. ನಿವೇಶನಗಳಿಗೆ ಡಿಮ್ಯಾಂಡ್ ಹೆಚ್ಚಿರುವುದರಿಂದ ಬಹಳಷ್ಟು ಮಂದಿ ಕಂದಾಯ ಭೂಮಿಯನ್ನು ಖರೀದಿಸಿ ಲೇಔಟ್ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದರು. ಇದೀಗ ಇದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿದೆ.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ) ಇತ್ತೀಚಿನ ವರ್ಷಗಳಲ್ಲಿ ನಿವೇಶನಕ್ಕಾಗಿ ಭೂ ಸ್ವಾಧೀನಕ್ಕೆ ಕೈ ಹಾಕಿದ ಸಂದರ್ಭದಲ್ಲಿ ಆ ಭಾಗದ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿಡಿಎ ಉಪ್ಪಳ್ಳಿಯಲ್ಲಿ 160 ಕೋಟಿ ವೆಚ್ಚದಲ್ಲಿ ಹೈಟೆಕ್ ಲೇಔಟ್ ನಿರ್ಮಾಣಕ್ಕೆ ಮುಂದಾಯಿತು. ಇಲ್ಲಿನ ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟರೆ ಅವರಿಗೆ 60್ಢ40 ಅನುಪಾತದಲ್ಲಿ ಸುಸಜ್ಜಿತ ನಿವೇಶನ ಬಿಟ್ಟುಕೊಡುವ ತೀರ್ಮಾನವನ್ನು ತೆಗೆದುಕೊಂಡು ರೈತರಿಗೆ ಒಪ್ಪಿಗೆ ಪತ್ರ ಪಡೆದು ಹೈಟೆಕ್ ಲೇಔಟ್ ನಿರ್ಮಾಣಕ್ಕೆ ಸಿಡಿಎ ಮುಂದಾಯಿತು.
ನಾಗಾರ್ಜುನ ಕಂಪನಿಗೆ ಟೆಂಡರ್: ಇದೊಂದು ಹೈಟೆಕ್ ಲೇಔಟ್. ಇಲ್ಲಿ ರಸ್ತೆ, ಪಾರ್ಕ್, ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲಾ ಮೂಲಭೂತ ಸೌಲಭ್ಯವನ್ನು ಒದಗಿಸುವುದು. ಒಂದು ಚದರ ಅಡಿಗೆ ಇಂತಿಷ್ಟು ಹಣವೆಂದು ಸಹ ನಿಗದಿಪಡಿಸಲಾಗಿದೆ.
ಲೇಔಟ್ ನಿರ್ಮಾಣದ ಕಾಮಗಾರಿಯನ್ನು ಹೈದ್ರಬಾದ್ನ ನಾಗಾರ್ಜುನ ಕಂಪನಿ ಟೆಂಡರ್ ಪಡೆದಿದ್ದು, ಇದಕ್ಕೆ ಕಾಮಗಾರಿಯ ಕಾರ್ಯಾದೇಶವನ್ನು ಸಹ ನೀಡಲಾಗಿದೆ. ಅಲ್ಲಿನ ಖಾಲಿ ಜಾಗವನ್ನು ಸಮತಟ್ಟು ಮಾಡುವ ಹಾಗೂ ಚರಂಡಿ ನಿರ್ಮಾದ ಕಾರ್ಯ ಪ್ರಗತಿಯಲ್ಲಿದೆ.
ಈವರೆಗೆ ಸುಮಾರು 15 ಕೋಟಿ ರುಪಾಯಿಗಳಷ್ಟು ಕಾಮಗಾರಿ ನಡೆದಿದೆ. ಗುತ್ತಿಗೆದಾರರು ನೀಡಿರುವ ಬ್ಯಾಂಕ್ ಗ್ಯಾರಂಟಿಯ ಆಧಾರದ ಮೇಲೆ ಬಿಲ್ ಸಲ್ಲಿಸಿರುವುದರಲ್ಲಿ ಶೇ.50ರಷ್ಟು ಹಣವನ್ನು ಸಿಡಿಎ ಪೇಮೆಂಟ್ ಪಾವತಿ ಮಾಡಿದೆ.
ಆರೋಪಗಳ ಸುರಿಮಳೆ: ಈ ಲೇಔಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೇ ಆರೋಪಗಳು ಮೆಗಾ ಸಿರಿಯಲ್ನಂತೆ ಒಂದರ ಹಿಂದೆ ಮತ್ತೊಂದು ಕೇಳಿ ಬಂದವು.
ಸಚಿವ ಸಂಪುಟದ ಅನುಮತಿ ಇಲ್ಲದೆ ಕಾಮಗಾರಿಯ ಟೆಂಡರ್ ಕರೆಯಲಾಗಿತ್ತು. ಆಗ ಜೆಡಿಎಸ್ನವರು ಆಕ್ಷೇಪ ಎತ್ತಿದ್ದರಿಂದ ಸಚಿವ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದು ಮರು ಟೆಂಡರ್ ಕರೆಯಲಾಯಿತು. ಈ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ಸಹ ನೀಡಲಾಗಿದೆ.
ಸಿಡಿಎ ಅಧ್ಯಕ್ಷ ಬಿ. ರಾಜಪ್ಪ ಅವರು, ತಮ್ಮ ಗಮನಕ್ಕೆ ಬಾರದೆ ಆಯುಕ್ತರು ಕೆಲವು ತೀರ್ಮಾನವನ್ನು ತೆಗೆದುಕೊಂಡಿದ್ದು, ಈ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದೀಗ ಕಾಂಗ್ರೆಸ್ ಮುಖಂಡರು, ಸಿಡಿಎನ ಹೈಟೆಕ್ ಲೇಔಟ್ ನಿರ್ಮಾಣದ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ಈ ಪ್ರಯತ್ನ ಕೈಗೂಡು ಸಾಧ್ಯತೆ ಇದೆ.
ಈ ಯೋಜನೆಗೆ ಬಿಜೆಪಿ ಸರ್ಕಾರದಲ್ಲಿ ಒಪ್ಪಿಗೆ ಸಿಕ್ಕಿತ್ತಾದರೂ, ಇದು ಮುಂದುವರೆಯಬೇಕಾದರೆ ಈಗಿನ ಸರ್ಕಾರದ ಒಪ್ಪಿಗೆ ಪಡೆಯಲೇ ಬೇಕು.
ಏಕೆಂದರೆ, ಸಿಡಿಎ ನಿರ್ಮಾಣ ಮಾಡಲಿರುವ ಲೇಔಟ್ನಲ್ಲಿ 1056 ನಿವೇಶನಗಳನ್ನು ಸಿದ್ಧಗೊಳ್ಳಲಿವೆ. ಇದಕ್ಕಾಗಿ ಎರಡು ಬಾರಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರೂ ಬಂದ ಅರ್ಜಿಗಳು ಕೇವಲ 489 ಮಾತ್ರ. ಮತ್ತೆ ಅರ್ಜಿಯನ್ನು ಆಹ್ವಾನಿಸುವುದಕ್ಕೆ ಕೈ ಹಾಕಿಲ್ಲ.
ಯೋಜನೆಗೆ ಬ್ರೈಕ್ ಬೀಳುವ ಸಾಧ್ಯತೆ: ಒಂದು ವೇಳೆ ಈ ಮಾರ್ಗ ಅನುಸರಿಸಿದರೆ ಪ್ರಯತ್ನ ಫಲಪ್ರದವಾಗುವುದಿಲ್ಲ ಎಂಬುದು ಅಧಿಕಾರಿಗಳ ಅರಿವಿಗೆ ಬಂದಿದೆ. ಅದ್ದರಿಂದ ಹುಡ್ಕೋ ನೆರವಿನೊಂದಿಗೆ ಲೇಔಟ್ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ 100 ಕೋಟಿ ಸಾಲಬೇಕಾಗಿದೆ. ಈ ಸಾಲ ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಸರ್ಕಾರದ ಒಪ್ಪಿಗೆ ಇಲ್ಲದೆ ಅಧಿಕಾರಿಗಳು ಸ್ವಇಚ್ಛೆಯಿಂದ ತೀರ್ಮಾನ ಕೈಗೊಳ್ಳಲಾಗದು. ಇದೇ ಸಂದರ್ಭದಲ್ಲಿ ಈ ಯೋಜನೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

