ಚಿಕ್ಕಮಗಳೂರು

ಸಾವಿಗೆ ಹೆಬ್ಬಾಗಿಲು ಈ ಸೇತುವೆ

Published On :

ಕ.ಪ್ರ.ವಾರ್ತೆ  ಕಡೂರು  ಜೂ. 3
ನಿಮಗೆ ಜೀವ ಬೇಡವಾದರೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಮೇಲೆ ಸಂಚರಿಸಿ...
ಇದು ಸ್ಥಳೀಯರು ಹೇಳುವ ಎಚ್ಚರಿಕೆ ಮಾತು. ಪದೇ ಪದೇ ಅಫಘಾತಗಳಿಂದಾಗಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಸೇತುವೆ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಕಣ್ಣೆತ್ತಿಯೂ ನೋಡುತ್ತಿಲ್ಲ. ಇದೇ ಮಾರ್ಗವಾಗಿ ಸಚಂರಿಸುವ ಮಂತ್ರಿ ಮಹೋದಯರೂ ತೆಲೆ ಕೆಡಿಸಿಕೊಳ್ಳುತ್ತಿಲ್ಲ.
 ಕಡೂರು ಸಮೀಪದ 206 ರ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಾಗುವ ಕಡೂರು ಪಟ್ಟಣದ ಬೀರೂರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ಸಮುದಾಯ ಭವನದ ಮುಂಭಾಗದಲ್ಲಿ ಇರುವ ಈ ಸೇತುವೆ ಬಳಿ ಆಗಾಗ ಅಫಘಾತಗಳು ನಡೆಯುತ್ತಿಲೇ ಇರುತ್ತವೆ. ಹಾಸನ ಹೆದ್ದಾರಿ ವಿಭಾಗೀಯ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ.
ಸಾವಿಗೆ ಆಹ್ವಾನ: ಒಮ್ಮೆ ಬಸ್ಸು ಮತ್ತ ಲಾರಿ ಅಫಘಾತ ಸಂಭವಿಸಿದರೆ ಮತ್ತೊಮ್ಮೆ ಬಸ್ಸೊಂದು ಗುದ್ದಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದ. ಮುರಿದಿರುವ ಸೇತುವೆ ಬಲಬಾಗಕ್ಕೆ  ಲಾರಿಯೊಂದು ಮುಗುಚಿ ಬಿದ್ದು ಇಬ್ಬರು ಸ್ಥಳದಲ್ಲಿಯೇ ಅಸುನೀಗಿದರೆ ಮತ್ತಿಬ್ಬರು ಯುವಕರು ಬೈಕ್ಸವಾರಿ ಮಾಡಿಕೊಂಡು ಬರುವಾಗ ಈ ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರೂ ಕೂಡ ಸ್ಥಳದಲ್ಲಿಯೇ ಅಸು ನೀಗಿದ್ದರು. ಇದು ಕೇವಲ ಕೆಲವು ಉದಾಹರಣೆ ಅಷ್ಟೇ.                                                               
 ಸೇತುವೆಯ ಎದುರಿನಲ್ಲಿಯೇ ಕಲ್ಯಾಣ ಮಂಟಪ ಸಹ ಇದ್ದು ಆಗಾಗ ಮದುವೆ ಮತ್ತಿತರ ಶುಭ ಸಮಾರಂಭಗಳು ನಡೆಯುವ ಈ ಸಮುದಾಯ ಭವನದ ಮುಂದೆ ಜನಸಂದಣಿ ಇರುತ್ತದೆ.
ಈ ರಸ್ತೆಯಲ್ಲಿ ನಿರಂತರವಾಗಿ ಲಾರಿಗಳು, ಬಸ್ಸುಗಳು, ಸರಕು ಸಾಗಾಣಿಕ ವಾಹನಗಳು ಅಲ್ಲದೆ ಸರಕಿನ ಭಾರೀ ವಾಹನಗಳೂ ಕೂಡ ಸಂಚರಿಸುತ್ತಿರುತ್ತವೆ.
ಇಲಾಖೆ ಕಡೆಗಣನೆ: ಈ ರಸ್ತೆಯನ್ನು ಏಳೆಂಟು ವರ್ಷಗಳ ಹಿಂದೆ  ಲೋಕೋಪಯೋಗಿ ಇಲಾಖೆಯ ನಿರ್ವಹಣೆ ಮಾಡುತ್ತಿದ್ದಾಗ ತಕ್ಷಣವೇ ದುರಸ್ತಿಗೆ ಮುಂದಾಗುತಿತ್ತು. ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಸೇರಿದ ಈ ಬಿ.ಹೆಚ್. ರಸ್ತೆಯನ್ನು ಹಾಸನದ ರಾಷ್ಟ್ರೀಯ ಹೆದ್ದಾರಿ ವಿಭಾಗವು ಕಡೆಗಣಿಸುತ್ತಿದೆ.
  ಈ ರಸ್ತೆಗಳ ನಿರ್ವಹಣೆಗಾಗಿ ಕಡೂರು ಪಟ್ಟಣದಲ್ಲಿ ಇದ್ದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಚೇರಿಯನ್ನು ಐದು ವರ್ಷದ ಹಿಂದೆಯೇ ಕಡೂರಿನಿಂದ ಮತ್ತೆ ಹಾಸನಕ್ಕೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ವಿಭಾಗೀಯ ಕಚೇರಿಯ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ.
206ರ ಹೆದ್ದಾರಿಯಲ್ಲಿ ಅನೇಕ ಸೇತುವೆಗಳು ಅಫಘಾತಗಳಿಂದ ಮರಿದಿದ್ದರೆ ಮತ್ತೆ ಕೆಲವು  ಶಿಥಿಲಾವಸ್ಥೆ ತಲುಪಿವೆ.
ಇಲಾಖೆ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸೇತುವೆಯನ್ನು ದುರಸ್ತಿಪಡಿಸಿ ಜನರ ಹಾಗು ವಾಹನಗಳ ಸುರಕ್ಷೆತೆಯ ಪ್ರಯಾಣಕ್ಕೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.