ಮಳೆ, ಬಿಸಿಲ ವಾತಾವರಣ
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ಮಂಗಳವಾರ ಬಿಸಿಲ ವಾತಾವರಣ ಕಂಡುಬಂದಿತು. ಸೋಮವಾರ ಸಂಜೆವರೆಗೂ ಸುರಿದ ಮಳೆ ರಾತ್ರಿಯಿಂದ ದುರ್ಬಲಗೊಂಡಿತು. ಮಂಗಳವಾರ ಮುಂಜಾನೆ ಇಬ್ಬನಿ ಕವಿದ ವಾತಾವರಣ ಉಂಟಾಗಿತ್ತು. ನಂತರ ಬಿಸಿಲು ತುಂತುರು ಮಳೆ ಮುಂದುವರೆದಿತ್ತು. ಸತತವಾಗಿ ಸುರಿದ ಮಳೆ ದಿಡೀರ್ ಆಗಿ ಬಿಸಿಲ ವಾತಾವರಣ ರೈತರಲ್ಲಿ ಮತ್ತೆ ಆತಂಕ ಉಂಟುಮಾಡಿದೆ. ಮುಂಗಾರು ಮಳೆಯ ಪ್ರವೇಶವಾಯಿತು ಎಂದು ರೈತರಲ್ಲಿ ಹರ್ಷ ಉಂಟುಮಾಡಿದ್ದು, ಇದೀಗ ಬಿಸಿಲ ವಾತಾವರಣ ನಿರಾಶೆ ಮೂಡಿಸಿದೆ. ಇನ್ನೇನು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲು ಆರಂಭ ಮಾಡುವಷ್ಟರಲ್ಲಿ ಮಳೆರಾಯ ಕೈಕೊಟ್ಟಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ. ಮಂಗಳವಾರ ಸಂಜೆಯವರೆಗೂ ಬಿಸಿಲ ವಾತಾವರಣ ಉಂಟಾಗಿತ್ತು.
ಪ್ರತಿಭಟನಾ ಸಭೆ
ಕೊಪ್ಪ: ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದರಿಂದ ಮಲೆನಾಡಿನ ಅಡಕೆ ಬೆಳೆಗಾರಿಗೆ ಅನ್ಯಾಯವಾಗಿದ್ದು, ಸಾರ್ಕರದ ಈ ನಿರ್ಧಾರವನ್ನು ವಿರೋಧಿಸುವ ಜೊತೆಗೆ ಕೊಡಲೇ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಬಿಜೆಪಿಯಿಂದ ಜು.5 ರಂದು ಪಟ್ಟಣದ ಪುರಭವನದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ.
ಬೆಳಿಗ್ಗೆ 10 ಕ್ಕೆ ಪುರಭವನದಲ್ಲಿ ಪ್ರತಿಭಟನಾ ಸಭೆಯ ನಂತರ ತಹಸೀಲ್ದಾರ್ರಿಗೆ ಮನವಿ ಸಲ್ಲಿಸಲಾಗುವುದು. ಸಭೆಯಲ್ಲಿ ಶಾಸಕ ಡಿ.ಎನ್. ಜೀವಾರಜ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ ತಿಳಿಸಿದ್ದಾರೆ.
ಎಲ್ಲ ರೀತಿಯ ಮದ್ಯ ನಿಷೇಧಕ್ಕೆ ಒತ್ತಾಯ
ತರೀಕೆರೆ: ಎಲ್ಲಾ ರೀತಿಯ ಮದ್ಯ ನಿಷೇಧಿಸಲು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಒತ್ತಾಯಿಸಿದ್ದಾರೆ.
ಹೇಳಿಕೆ ನೀಡಿರುವ ಅವರು, ಗುಟ್ಕಾ ನಿಷೇಧ ಜಾರಿಗೊಳಿಸುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮದ್ಯದ ದೊರೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸುಮಾರು 2 ಕೋಟಿ ಅಡಕೆ ಬೆಳೆಗಾರರ ರೈತರ ಜೀವನಕ್ಕೆ ತೊಂದರೆ ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಲೋಹಿಯಾ ಸಮಾಜವಾದದೊಂದಿಗೆ ಕಾಂಗ್ರೆಸ್ನ ತತ್ವ ಆಧರಿಸಿ ಸಿದ್ದಾಂತಕ್ಕೆ ಪ್ರೇರಕವಾದ ಮಹಾತ್ಮಾ ಗಾಂಧಿಯವರ ಕನಸನ್ನು ನನಸು ಮಾಡುವುದಾದರೆ ತಕ್ಷಣ ಎಲ್ಲಾ ರೀತಿಯ ಮದ್ಯ ನಿಷೇಧಿಸಿ ಮತ್ತು ಹಿಂದುಳಿದ ವರ್ಗಗಳ (ಓಬಿಸಿ) ನೀತಿಯನ್ನು ಕೇಂದ್ರದಲ್ಲಿದ್ದಂತೆ ರಾಜ್ಯದಲ್ಲೂ ಜಾರಿಗೆ ತನ್ನಿ, ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆಯಲು ಕಾನೂನು ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

