ಸೈಬರ್ ಕೆಫೆಗಳಿಂದ ಅರ್ಜಿ ಆಹ್ವಾನ
ಟಿಕ್ಕಮಗಳೂರು ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ 2011 ಅನುಷ್ಠಾನಗೊಳಿಸುವ ಸಂಬಂಧ ಕಾಲ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ಆಸಕ್ತಿಯುಳ್ಳ ಸೈಬರ್ ಕೆಫೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫೋಟೋ ಸ್ಟುಡಿಯೋ, ಸಾರ್ವಜನಿಕರಿಗೆ ಸರಕಾರಿ ಸೇವೆ ನೀಡುತ್ತಿರುವ ಹಾಗೂ ಆನ್‌ಲೈನ್ ಟಿಕೇಟ್ ನೀಡುವ ಕೇಂದ್ರಗಳು, ಸರಕಾರಿ ಸಂಚಾರಿ ಟಿಕೇಟ್ ಒದಗಿಸುವ ಕೇಂದ್ರ (ರೈಲ್ ಹಾಗೂ ಸರಕಾರಿ ರಸ್ತೆ ಸರಕಾರಿ ಸಾರಿಗೆ) ಅಂತರ್ ಜಾಲ ಸಂಪರ್ಕ ಹೊಂದಿರುವ ಕೇಂದ್ರ (ಸೈಬರ್ ಕೆಫೆ- ವೆಬ್ ಪಾರ್ಲರ್) ಜೊತೆಗೆ ಸ್ಕ್ಯಾನರ್ ಸಾಮಾಗ್ರಿ ವ್ಯವಸ್ಥೆಯುಳ್ಳ, ಗಣಕ ಯಂತ್ರ ಮುದ್ರಣ ಸಾಮಾಗ್ರಿ (ಪ್ರಿಂಟರ್), ಅಂತರ್ ಜಾಲದ ಮುಖಾಂತರ ದೃಶ್ಯಗ್ರಹಿಸುವ (ಕ್ಯಾಪ್ಚರ್) ವೆಬ್ ಕ್ಯಾಮ್ ಸಾಮಾಗ್ರಿಗಳನ್ನು ಹೊಂದಿರುವವರು ಹಾಗೂ ಬಯೋ ಮ್ಯಾಟ್ರಿಕ್ಸ್ ತಂತ್ರಜ್ಞಾನ ಸಾಮಾಗ್ರಿಗಳ ಬಗ್ಗೆ ಅರಿವು ಹೊಂದಿರುವ ನಗರ ಹಾಗೂ ಗ್ರಾಮಾಂತರ ಪ್ರದೇಶದವರು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 17 ರೊಳಗೆ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಮೂಡಿಗೆರೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೂಡಿಗೆರೆ ಟೌನ್, ಬಣಕಲ್, ಬೆಟ್ಟಗೆರೆ, ಜಾವಳಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮೂಡಿಗೆರೆ ಟೌನ್, ಕಳಸ, ಜಾವಳಿ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮೂಡಿಗೆರೆ ಟೌನ್ ಇಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ಪೂರ್ವ ಅರ್ಜಿ ಆಹ್ವಾನಿಸಲಾಗಿದೆ. ಜೂ. 10 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಿದ್ಯಾರ್ಥಿನಿಲಯಗಳಲ್ಲಿ ಅಥವಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಮೂಡಿಗೆರೆ ಇವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

